ಗೌರಿ ಲಂಕೇಶ್ ಹತ್ಯೆಯಲ್ಲಿ ಪೊಲೀಸರಿಗೆ ಕೆಲಸ ಮಾಡಲು ಬಿಡಿ!
ಎಡಪಂಥಿಯ ಧೋರಣೆಗಳನ್ನು ಪ್ರಖರವಾಗಿ ಪ್ರತಿಪಾದಿಸುತ್ತಿದ್ದ, ನಕ್ಸಲಿಯರನ್ನು ಮುಖ್ಯವಾಹಿನಿಗೆ ತರಲು ಕೆಲಸ ಮಾಡಿದ, ಒಂದಿಷ್ಟು ಯಶಸ್ವಿಯೂ ಆದ, ರಾಜಕಾರಣದ ಪಡಸಾಲೆಯಲ್ಲಿ ಎಲ್ಲ ಪಕ್ಷದ ರಾಜಕಾರಣಗಳೊಂದಿಗೆ ಒಡನಾಟ ಹೊಂದಿದ್ದ, ಪತ್ರಿಕೋದ್ಯಮಿ, ಲೇಖಕಿ, ಖ್ಯಾಾತ ಪತ್ರಕರ್ತ ಲಂಕೇಶ್ ಅವರ ಹಿರಿಯ ಪುತ್ರಿ ಗೌರಿ ಲಂಕೇಶ್ ಅವರನ್ನು ಮನೆಯ ಹೊರಗೆ ಮಂಗಳವಾರ ರಾತ್ರಿ ಹತ್ಯೆ ಮಾಡಲಾಗಿದೆ. ಅತ್ತ ಮೃತದೇಹ ಇದ್ದಂತೆ ಇತ್ತ ಒಂದಿಷ್ಟು ಜನ ಪ್ರಗತಿಪರರು ಕೇಂದ್ರ ಸರಕಾರಕ್ಕೆ, ಮೋದಿಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ, ಹಿಂದೂ ಸಂಘಟನೆಗೆ ಧಿಕ್ಕಾರ ಕೂಗುವ ಕೆಲಸಕ್ಕೆ ಮುಂದಾದರು. ಬಹಳ ಆಶ್ಚರ್ಯ ಎಂದರೆ ಗೌರಿ ಸಾವಿಗೀಡಾದ ಒಂದೆರಡು ಗಂಟೆಗಳ ಒಳಗೆ ಆಕೆಯನ್ನು ಕೊಂದದ್ದು ಯಾರು ಎಂದು ಬುದ್ಧಿಜೀವಿಗಳಿಗೆ ಗೊತ್ತಾಗುತ್ತೆ ಎಂದರೆ ಇವರು ಸಿಬಿಐಗಿಂತಲೂ ಫಾಸ್ಟ್ ಇದ್ದಾರೆ ಎಂದು ಅರ್ಥ. ತನಿಖೆಯನ್ನು ಪೊಲೀಸರು ಮಾಡುವುದಕ್ಕಿಿಂತಲೂ ಇವರಿಗೆ ಕೊಡುವುದು ಒಳ್ಳೆಯದು.
ಬೆಳಗ್ಗೆ ದಿಗ್ವಿಜಯ್ ಚ್ಯಾನಲ್‌ನ ಪ್ಯಾನಲ್ ಡಿಸ್ಕಷನ್‌ನಲ್ಲಿದ್ದೆ. ಮಂಗಳೂರಿನಿಂದ ಲೈವ್‌ನಲ್ಲಿ ನನ್ನ ಅಭಿಪ್ರಾಯ ಕೇಳಲಾಗುತ್ತಿತ್ತು. ಸುಮಾರು 11 ಗಂಟೆಯಿಂದ 12 ಗಂಟೆಯ ತನಕ ಚರ್ಚೆಯಲ್ಲಿ ಭಾಗವಹಿಸಿದ್ದೆ. ಪ್ರಾರಂಭದಲ್ಲಿ ಇಲ್ಲಿಂದ ವಾಹಿನಿಯ ವರದಿಗಾರರು ನನ್ನ ಹೆಸರು ಹೇಳುವಾಗ ಹನುಮಂತ ಕಾಮತ್, ರೈಟಿಸ್ಟ್ ಎಂದು ಅಲ್ಲಿ ಡೆಸ್ಕ್ ಗೆ ಮಾಹಿತಿ ಕೊಟ್ಟರು. ಕೂಡಲೇ ನಾನು ಹೇಳಿದೆ. ನಾನು ರೈಟಿಸ್ಟ್ ಅಲ್ಲ, ನನಗೆ ಯಾವುದೇ ಒಂದು ಸಿದ್ಧಾಾಂತದ ಬಗ್ಗೆ ಪೂರ್ವಾಗ್ರಹ ಇಲ್ಲ. ಬಲಪಂಥಿಯರು ತಪ್ಪು ಮಾಡಿದಾಗ ನಾನು ಅದನ್ನು ತಪ್ಪು ಎಂದೇ ವಾದಿಸುತ್ತೇನೆ. ಅದು ಟಿವಿ ವಾಹಿನಿ ಇರಲಿ, ನನ್ನ ಫೇಸ್ ಬುಕ್ ಇರಲಿ, ಅದೇ ಎಡಪಂಥಿಯರು ತಪ್ಪು ಮಾಡಿದಾಗ ತಪ್ಪು ಎಂದು ಹೇಳಲು ಅಷ್ಟೇ ಒಪನ್ನಾಗಿದ್ದೇನೆ. ನಾನು ಬಸ್ಸು ಮಾಲೀಕರ ಎದುರು ಹಾಳಾಗುವುದೇಕೆ ಎಂದು ಅಂದುಕೊಂಡರೆ ಆರ್‌ಟಿಎ ಸಭೆಗಳಲ್ಲಿ ಗಂಟಲು ಹರಿಯುವಂತೆ ಮಾತನಾಡುತ್ತಿರಲಿಲ್ಲ. ಪಾಲಿಕೆಯಲ್ಲಿ ಯಾವ ಪಕ್ಷ ಆಡಳಿತದಲ್ಲಿ ತಪ್ಪುು ಮಾಡಿದರೂ ಅದು ತಪ್ಪೆ. ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ಹಾಗೆ ವಿಪಕ್ಷಗಳು ಮಲಗಿದ್ದರೆ ಅದನ್ನು ಕೂಡ ಬಿಡುವುದಿಲ್ಲ. ಶಾಸಕರು, ಸಚಿವರು ತಪ್ಪುು ಮಾಡಿದರೆ ಟೀಕಿಸುವುದು, ಒಳ್ಳೆಯದು ಮಾಡಿದರೆ ಹೊಗಳುವುದು ಇದ್ದದ್ದೇ. ಆದ್ದರಿಂದ ನನ್ನಂತವರಿಗೆ ಶತ್ರುಗಳು ಎಲ್ಲಿ, ಹೇಗೆ ಇರುತ್ತಾರೆ ಎಂದು ಹೇಳಲು ಆಗುವುದಿಲ್ಲ.
ಶರತ್ ಮಡಿವಾಳ ಅವರ ಹತ್ಯೆಯಾದಾಗ ಅದನ್ನು ಇಂತಿಂಥವರೇ ಮಾಡಿರಬಹುದು ಎಂದು ಸಂಘ ಪರಿವಾರ ಅಭಿಪ್ರಾಾಯ ಪಟ್ಟಿತ್ತು. ಅದು ಆಲ್ ಮೋಸ್ಟ್ ನಿಜವೂ ಆಯಿತು. ಅದೇ ಕಾರ್ತಿಿಕ್ ರಾಜ್ ಪ್ರಕರಣದಲ್ಲಿ ಅನೇಕ ದಿನಗಳ ತನಕ ಹತ್ಯಾ ಆರೋಪಿಗಳು ಸಿಗದೇ ಇದ್ದಾಗ ಸಹಜವಾಗಿ ಅನುಮಾನ ರಾಜ್ಯ ಸರಕಾರದ ಮೇಲೆ ಹೋಗಿತ್ತು. ಅದರ ನಂತರ ಪೊಲೀಸರಿಗೆ ಒತ್ತಡ ಬಂದು ಅವರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳು ಕಾರ್ತಿಿಕ್ ರಾಜ್ ಸಹೋದರಿ ಮತ್ತು ಆಕೆಯ ಗೆಳೆಯ ಎಂದು ನಂತರ ಗೊತ್ತಾಯಿತು. ಕರಾವಳಿಯಲ್ಲಿ ಎಷ್ಟೋ ಕೊಲೆಗಳು ಅವರವರ ಸಂಘಟನೆಗಳ ಒಳಗೆ ಆಗಿವೆ. ಅದು ಹಿಂದೂ ಇರಲಿ, ಮುಸ್ಲಿಿಂ ಇರಲಿ. ಆದ್ದರಿಂದ ಒಂದು ಹತ್ಯೆಯನ್ನು ಅವರ ವಿರುದ್ಧ ಸಿದ್ಧಾಾಂತದವರೇ ಮಾಡಿದ್ರು ಎಂದು ಕ್ಷಣಾರ್ಧದಲ್ಲಿ ತೀರ್ಮಾನಿಸುವುದಕ್ಕೆ ನನ್ನ ವಿರೋಧ ಇದೆ ಎಂದು ಡಿಶ್ಕಷನ್ ನಲ್ಲಿ ಹೇಳಿದೆ.
ಹಾಗೆ ಹೇಳುವುದೇ ಆದರೆ ಈ ಹತ್ಯೆಯನ್ನು ನಕ್ಸಲೀಯರು ಮಾಡಿರಬಹುದು ಎಂದು ಕೂಡ ಹೇಳಬಹುದು. ಆದರೆ ಹಾಗಂತ ನಾನು ಹೇಳುವುದಿಲ್ಲ ಅಥವಾ ಹಾಗೆ ಹೇಳುವುದು ಸರಿ ಕೂಡ ಅಲ್ಲ. ನಕ್ಸಲೀಯರಲ್ಲಿ ಕೆಲವರ ಮನವೊಲಿಸಿ ಪ್ಯಾಕೇಜುಗಳ ಭರವಸೆ ಕೊಟ್ಟು ಗೌರಿ ಲಂಕೇಶ್ ಅವರನ್ನು ಮುಖ್ಯವಾಹಿನಿಗೆ ತಂದಿದ್ರು. ಅಲ್ಲಿ ಎಲ್ಲಿಯಾದರೂ ಎಡವಟ್ಟು ಆಗಿ ಹೀಗೆ ಆಗಿರಬಹುದು ಎಂದು ಹೇಳುವುದು ಸುಲಭ. ಆದರೆ ಹೇಳುವುದು ಸರಿಯಲ್ಲ, ಏಕೆಂದರೆ ಎಲ್ಲವೂ ನಾವೆ ಅಂದಾಜಿನಲ್ಲಿ ಹೇಳಿದರೆ ಪೊಲೀಸ್ ಇಲಾಖೆ ಇರುವುದು ಯಾಕೆ? ಇನ್ನು ಡಾ ಕಲ್ಬುರ್ಗಿಯವರ ಹತ್ಯೆ nನಡೆದು ಎರಡು ವರ್ಷಗಳಾದವು. ಹಾಡುಹಗಲೇ ಮನೆಯ ಹೊಸ್ತಿಲಲ್ಲಿ ನಡೆದ ಕೊಲೆಯ ಆರೋಪಿಗಳನ್ನು ಬಂಧಿಸಿಲ್ಲ ಎಂದು ಇಲ್ಲಿಯ ತನಕ ಎಷ್ಟು ಎಡಪಂಥಿಯರು ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಿದ್ದಾರೆ. ಎರಡು ವರ‌್ಷಗಳಿಂದ ಆರೋಪಿಗಳನ್ನು ಹಿಡಿಯದಿದ್ದರೆ ಅದು ಕೂಡ ಕೇಂದ್ರದ ತಪ್ಪೆ. ಹಾಗೆ ಗುಪ್ತಚರ ವಿಭಾಗ ಏನು ಮಾಡುತ್ತಿದೆ. ಅದೇ ಗೌರಿ ಸತ್ತ ಕೆಲವೇ ನಿಮಿಷಗಳಲ್ಲಿ ಇದು ಕೇಂದ್ರದ ಹಿಡನ್ ಏಜೆಂಡಾ ಎನ್ನುವವರು ರಾಜ್ಯ ಸರಕಾರದ ಗುಪ್ತಚರ ಇಲಾಖೆ ವಿಫಲವಾಗಿದೆ ಅಥವಾ ಗುಪ್ತಚರ ವರದಿ ಇದ್ದರೂ ಗೌರಿಗೆ ರಕ್ಷಣೆ ಯಾಕೆ ಕೊಟ್ಟಿಲ್ಲ ಎಂದು ಯಾಕೆ ಕೇಳಲ್ಲ. ಒಟ್ಟಿನಲ್ಲಿ ಕನ್ನಯ್ಯಾ, ಖಾಲಿದ್ ನಂತಹ ಯುವಕರಿಗೆ ಸೂರ್ತಿಯಾಗಿದ್ದ ವ್ಯಕ್ತಿಯೊಬ್ಬರ ಹತ್ಯೆಯಿಂದ ಅಂತಹ ಚಳುವಳಿಗಳನ್ನು ಮಾಡುತ್ತಿದ್ದವರಿಗೆ ಒಂದು ಧ್ವನಿ ಮತ್ತು ಪತ್ರಿಕೆ ಕಡಿಮೆಯಾಗಿ ಅಪಾರ ನಷ್ಟವಾಗಿದೆ. ಇನ್ನಾದರೂ ಪೊಲೀಸರಿಗೆ ಕೆಲಸ ಮಾಡಲು ಬಿಡಿ.
Leave A Reply