ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
ಬೆಳ್ತಂಗಡಿ: ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ ಮಾಡಿದ ಹರೀಶ್ ಪೂಂಜಾ

ಧನುರ್ಮಾಸದ ಕೊನೆಯ ಪೂಜೆಗೆಂದು ಹೋಗಿದ್ದ ಬಾಲಕ ಸುಮಂತ್ ಅನುಮಾನಾಸ್ಪದವಾಗಿ ಸಾವಿನ ಪ್ರಕರಣದ ಕೂಲಂಕುಷವಾಗಿ ತನಿಖೆಗೆ ಶಾಸಕ ಹರೀಶ್ ಪೂಂಜಾ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಜನವರಿ 14 ರಂದು ಧನುರ್ಮಾಸ ಹಿನ್ನೆಲೆ ದೇಗುಲಕ್ಕೆಂದು ಮುಜಾನೆಯೇ ಮನೆಯಿಂದ ಹೊರಟಿದ್ದ ಸುಮುಂತ್ ನಿಗೂಢವಾಗಿ ನಾಪತ್ತೆಯಾಗಿದ್ದ, ಬಳಿಕ ಮನೆ ಸಮೀಪದ ಕೆರೆಯಲ್ಲಿ ಆತನ ಶವಪತ್ತೆಯಾಗಿತ್ತು, ಅಲ್ಲದೆ ತಲೆಯಲ್ಲಿ ಬಲವಾಗಿ ಹೊಡೆದ ಗಾಯದ ಗುರುತುಗಳಿದ್ದು, ಇದು ಆಕಸ್ಮಿಕವಾಗಿ ಸಂಭವಿಸಿದ ಸಾವು ಅಲ್ಲ, ಇದೊಂದು ಕೊಲೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿಯವರೆಗೆ ಪ್ರಕರಣದ ಕುರಿತಂತೆ ಯಾವುದೇ ಮಾಹಿತಿ ಕೂಡ ಪೊಲೀಸ್ ಇಲಾಖೆ ನೀಡಿಲ್ಲ. ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿಧಾನಸೌಧದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ಓಡಿಲ್ನಾಳ ಗ್ರಾಮದ ಸುಮಂತ್ ಎನ್ನುವ ಬಾಲಕನ ಅನುಮಾಸ್ಪದ ಸಾವಿನ ತನಿಖೆಯನ್ನು ಅತ್ಯಂತ ಕೂಲಂಕುಷವಾಗಿ ತನಿಖೆ ನಡೆಸಿ ಶೀಘ್ರದಲ್ಲಿ ಸತ್ಯಾ ಸತ್ಯತೆಯನ್ನು ಜನರ ಮುಂದಿಡಬೇಕೆಂದು ಆಗ್ರಹಿಸಿದ್ದಾರೆ.









