• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!

Tulunadu News Posted On February 12, 2026
0


0
Shares
  • Share On Facebook
  • Tweet It

ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದು ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಎಸ್ಕೆಪ್ ; ಹೆತ್ತವರು ಪರಿ ಪರಿ ಬೇಡಿಕೊಂಡರೂ ಕರಗಲಿಲ್ಲ ಎಳೆಯ ಮನಸ್ಸು! ಪಿಜಿ ಟು ಜುವೆಲ್ಲರಿ ಕ್ರೀಮಿನಲ್ಲವ್ !

ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಕ್ರಿಮಿನಾಲಜಿ ಬಿಎಸ್ಪಿ ಕಲಿಯುತ್ತಿದ್ದ ಕಾಸರಗೋಡು ಮೂಲದ ಹಿಂದು ಯುವತಿ, ಕೇರಳದ ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಎಸ್ಕೆಪ್ ಆಗಿದ್ದು, ವಯನಾಡಿನಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗಿರುವ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಧೂರು ಬಳಿಯ ಮೀಪುಗುರಿ ನಿವಾಸಿ, ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವೈಶಾಲಿ ಮೂರು ವರ್ಷಗಳಿಂದ ಮಂಗಳೂರಿನ ಮುಕ್ತ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಪಿ ಕಲಿಯುತ್ತಿದ್ದಳು. ಈ ಬಾರಿ ಬಿಎಸ್ಸಿ ಪದವಿ ಮುಗಿದಿದ್ದರೂ, ಸುರತ್ಕಲ್ ಬಳಿಯಿರುವ ಪಿಜಿಯಲ್ಲಿ ತನ್ನ ಸಹವರ್ತಿ ಗೆಳತಿಯರೊಂದಿಗೆ ಉಳಿದುಕೊಂಡಿದ್ದಳು. ಈ ವೇಳೆ, ವಯನಾಡು ಮೂಲದ ಮೊಹಮ್ಮದ್ ಮಿದ್ಲಾಜ್ ಎಂಬ ಯುವಕನ ಗೆಳೆತನ ಆಗಿತ್ತು ಎನ್ನಲಾಗಿದೆ.

ಮೊಹಮ್ಮದ್ ಮಿದ್ಲಾಜ್ ಸುರತ್ಕಲ್ ನಲ್ಲಿರುವ ಅಟ್ಲಾಸ್ ಜುವೆಲ್ಲರಿಯಲ್ಲಿ ಕೆಲಸಕ್ಕಿದ್ದ ಜನವರಿ 31ರಂದು ವಯನಾಡಿನಲ್ಲಿ ಇವರಿಬ್ಬರು ರಿಜಿಸ್ಟರ್ ಮದುವೆಗೆ ನೋಂದಣಿ ಮಾಡಿಕೊಂಡಿದ್ದು, ಅದರ ಫೋಟೋವನ್ನು ಅಲ್ಲಿನ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಲಾಗಿತ್ತು. ಈ ಫೋಟೋ ಜಾಲತಾಣದ ಮೂಲಕ ವೈಶಾಲಿ ಕುಟುಂಬಸ್ಥರಿಗೆ ಫೆ.8ರಂದು ಸಿಕ್ಕಿತ್ತು. ಇದರಂತೆ, ಕತಾರ್ ನಲ್ಲಿ ಉದ್ಯೋಗದಲ್ಲಿದ್ದ ತಂದೆ ನೇರವಾಗಿ ಊರಿಗೆ ಬಂದಿದ್ದು, ಪತ್ನಿ ಜೊತೆಗೆ ಸುರತ್ಕಲ್ ನಲ್ಲಿರುವ ಪಿಜಿಗೆ ಬಂದಿದ್ದಾರೆ.

ಅಲ್ಲಿನ ಸಿಸಿಟಿವಿ ತಪಾಸಣೆ ನಡೆಸಿದಾಗ ಫೆ.8ರಂದು ಬೆಳಗ್ಗೆ ಕೊನೆಯ ಬಾರಿಗೆ ಪ್ಯಾಂಟ್, ಶರ್ಟ್ ಧರಿಸಿಕೊಂಡು ವ್ಯಾನಿಟಿ ಬ್ಯಾಗ್ ಜೊತೆಗೆ ವೈಶಾಲಿ ಅಲ್ಲಿಂದ ತೆರಳಿರುವುದು ಕಂಡುಬಂದಿದೆ. ಅದಕ್ಕೂ ಮೊದಲು ತಾಯಿ ಮಗಳ ಜೊತೆಗೆ ಫೋನ್ ಮಾಡಿ ಮಾತನಾಡಿದ್ದರು. ಆನಂತರ, ಆಕೆಯ ಪೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸುರತ್ಕಲ್ ಠಾಣೆಯಲ್ಲಿ ಹೆತ್ತವರು ದೂರು ನೀಡಿದ್ದು, ಪೊಲೀಸರು ತಕ್ಷಣವೇ ಕೇರಳದ ವಯನಾಡಿಗೆ ತೆರಳಿದ್ದಾರೆ. ಸುರತ್ಕಲ್ ಅಟ್ಲಾಸ್ ಜುವೆಲ್ಲರಿ ಎಸ್ಸಿಪಿಐ ಮುಖಂಡನಿಗೆ ಸೇರಿದ್ದಾಗಿದ್ದು, ಆತನ ಮೂಲಕ ಮಾಹಿತಿ ಪಡೆದ ಪೊಲೀಸರು ವಯನಾಡಿಗೆ ತೆರಳಿ ಮಿದ್ದಾಜ್ ಮತ್ತು ವೈಶಾಲಿಯನ್ನು ಪತ್ತೆ ಮಾಡಿದ್ದಾರೆ.

ಜೋಡಿಯನ್ನು ಸ್ಥಳೀಯ ಠಾಣೆಗೆ ಕರೆದೊಯ್ದಿದ್ದು ಅಲ್ಲಿ ಸುರತ್ಕಲ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ವೇಳೆ, ಹುಡುಗಿಯ ಹೆತ್ತವರು ಆಕೆಯ ಬಳಿ ಅಂಗಲಾಚಿದ್ದು 22 ವರ್ಷಗಳ ಕಾಲ ಜೋಪಾನದಲ್ಲಿ ಸಾಕಿದ್ದೇವೆ, ಈಗ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ವೈಶಾಲಿ ತಾನು ಮಿದ್ದಾಜ್ ಜೊತೆಗೇ ತೆರಳುವುದಾಗಿ ಹೇಳಿ ಪಟ್ಟು ಹಿಡಿದಿದ್ದರಿಂದ ಪೊಲೀಸರು ಅಲ್ಲಿನ ಠಾಣೆಯಲ್ಲೇ ಹೇಳಿಕೆ ಪಡೆದು ಬಿಟ್ಟಿದ್ದಾರೆ.

ಬಿಎಸ್ಪಿ ಕ್ರಿಮಿನಾಲಜಿ ಓದಿ ಮುಗಿಸಿದ್ದ ವೈಶಾಲಿ ಒಂದು ವರ್ಷದಿಂದ ತನ್ನ ಗೆಳತಿಯರೊಂದಿಗೆ ಸುತ್ತಾಟ ಮಾಡಿಕೊಂಡಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹೆತ್ತವರಿಗೆ ಇವರು ಮೂವರು ಹೆಣ್ಮಕ್ಕಳಾಗಿದ್ದು ದೊಡ್ಡವಳು ಮದುವೆಯಾಗಿ ಅಮೆರಿಕದಲ್ಲಿದ್ದಾಳೆ. ಈಕೆ ಎರಡನೆಯವಳಾಗಿದ್ದು, ಇನ್ನೊಬ್ಬಳು ತಂಗಿಯಿದ್ದಾಳೆ. ಕ್ರಿಮಿನಾಲಜಿ ಓದಿದರೂ ಮುಸ್ಲಿಂ ಯುವಕನ ಸಖ್ಯ ಬೆಳೆಸಿ ಅಡ್ಡ ದಾರಿ ಹಿಡಿದಿದ್ದು ಊರಿನವರು ಮತ್ತು ಕುಟುಂಬಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದು ಸಂಘಟನೆ ಯುವಕರು ಇದೊಂದು ಲವ್ ಜಿಹಾದ್ ಕೃತ್ಯವೆಂದು ಆರೋಪ ಮಾಡಿದ್ದಾರೆ.

ಪಿಜಿಯಲ್ಲಿದ್ದ ಮೇಲೆ ಅಲ್ಲಿನ ವಿದ್ಯಾರ್ಥಿಗಳನ್ನು ನಿಯಂತ್ರಣದಲ್ಲಿಡೋದು, ರಾತ್ರಿ ವೇಳೆ ಸುತ್ತಾಟಕ್ಕೆ ಹೋಗದಂತೆ ಜವಾಬ್ದಾರಿ ವಹಿಸೋದು ಪಿಜಿ ನಡೆಸೋರ ಜವಾಬ್ದಾರಿ. ಆದರೆ ಮಂಗಳೂರು, ಸುರತ್ಕಲ್ ನಲ್ಲಿರುವ ಹೆಚ್ಚಿನ ಪಿಜಿಗಳಲ್ಲಿರುವ ವಿದ್ಯಾರ್ಥಿಗಳ ಮೇಲೆ ಅದರ ಮುಖ್ಯಸ್ಥರಿಗೆ ಹತೋಟಿ ಇಲ್ಲ. ಡ್ರಗ್ಸ್ ಪಬ್ ಎಂದು ರಾತ್ರಿ ವೇಳೆ ಕೇರಳದ ವಿದ್ಯಾರ್ಥಿನಿಯರು ಗೆಳೆಯರ ಜೊತೆಗೆ ಸುತ್ತಾಟಕ್ಕೆ ಹೋಗುತ್ತಾರೆ. ಲೇಟ್ ನೈಟ್ ಬರ್ತಾರೆ, ಇಂಥವರೇ ಮುಂದೆ ಹಾದಿ ತಪ್ಪುತ್ತಾರೆ ಎನ್ನುವುದು ಹೆತ್ತವರಿಗೂ ಅರಿವು ಇರಬೇಕು. ಕಲಿಯೋಕೆ, ಉದ್ಯೋಗಕ್ಕೆ ಹೋದವರು ಎಲ್ಲಿ ಹೋಗ್ತಾರೆ, ಎಲ್ಲಿ ಸುತ್ತಾಡುತ್ತಾರೆ ಎನ್ನುವ ಬಗ್ಗೆ ನಿಗಾ ಇಡಬೇಕಿದೆ.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search