ಮಂಗಳೂರು ಚಲೋ ಸಂಪೂರ್ಣ ವಿಫಲವಂತೆ : ಸಿದ್ದು
ಮುಖ್ಯಮಂತ್ರಿಯವರು ನಿನ್ನೆ ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಕಾರ್ಯಕ್ರಮ ಸಂಪೂರ್ಣ ವಿಫಲವಾಗಿದ್ದು ಕೇಲವೇ ಕೆಲವು ಮಂದಿ ಭಾಗಿಯಾಗಿದ್ದಾರೆ ಎಂದು ವ್ಯಂಗವಾಡಿದ್ದಾರೆ.ಆದರೆ ಇವತ್ತಿನ ಬಹುತೇಕ ಪ್ರಮುಖ ವಾರ್ತಾ ಪತ್ರಿಕೆಗಳು ಮಂಗಳೂರು ಚಲೋ ಯಶಸ್ವಿಯಾಗಿದೆ ಎಂದು ವರದಿ ಮಾಡಿವೆ. ಉದಯವಾಣಿ, ವಿಜಯವಾಣಿ, ವಿಶ್ವವಾಣಿ, ಟೈಮ್ಸ್ ಆಫ್ ಇಂಡಿಯಾ ಮುಂತಾದ ದಿನಪತ್ರಿಕೆಗಳು ಮಂಗಳೂರು ಚಲೋ ಬಗ್ಗೆ ಸಮಗ್ರ ವರದಿ ಪ್ರಕಟಿಸಿದ್ದು ರಾಜ್ಯ ಸರಕಾರವು ಪ್ರತಿಭಟನೆ ಹತ್ತಿಕ್ಕುವಲ್ಲಿ ವಿಫಲವಾಗಿದೆ ಎಂಬುವುದನ್ನೇ ಪ್ರಕಟಿಸಿವೆ.ಈ ಮೊದಲು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಮಂಗಳೂರು ಚಲೋ ಯಶಸ್ವಿಯಾಗಲು ಬಿಡುವುದಿಲ್ಲ,ರಾಜ್ಯದ ಉದ್ದಗಲದಿಂದ ಹೊರಡಿರುವ ಬಿಜೆಪಿ ಕಾರ್ಯಕರ್ತರು ಮಂಗಳೂರು ತಲುಪದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದು ನಿನ್ನೆ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ಮೂಲಕ ರಾಜ್ಯ ಸರಕಾರಕ್ಕೆ ಸೆಡ್ಡು ಹೊಡೆದಿದ್ದರು. ಪತ್ರಿಕಾ ಮಾಧ್ಯಮ ಹಾಗೂ ದ್ರಶ್ಯ ಮಾಧ್ಯಮಗಳಲ್ಲಿ ಮಂಗಳೂರು ಚಲೋ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರಿಗೆ ಇಂದು ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಮುಜುಗರ ಉಂಟುಮಾಡಿರುವುದು ಸುಳ್ಳಲ್ಲ.
Leave A Reply