ವಿಕೃತ ಕಾಮಿಯ ದಾಹಕ್ಕೆ ಬಲಿಯಾದ ಬಾಲಕ
ದೆಹಲಿ : ಅಂತಾರಾಷ್ಟ್ರೀಯ ಶಾಲೆಯೊಂದರ ಎರಡನೇ ತರಗತಿಯಲ್ಲಿ ಓದುತ್ತಿದ್ದ ಏಳು ವರ್ಷದ ಬಾಲಕ ಬೆಳಗ್ಗೆ ಶಾಲೆ ಬಂದ ಕೂಡಲೇ ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆ ತೆರಳುತ್ತಾನೆ. ಆದರೆ ಆತ ಜೀವಂತವಾಗಿ ಹಿಂದಿರುಗುವುದಿಲ್ಲ. ಅಬ್ಬಾ ಎಂಥ ಭಯಾನಕತೆ ಅಲ್ವಾ?
ಹೌದು ಈ ಘಟನೆ ನಡೆದಿದ್ದು ಶುಕ್ರವಾರ ಬೆಳಗ್ಗೆ ದೆಹಲಿ ಸಮೀಪದ ಗುರುಗ್ರಾಮದಲ್ಲಿ. ಆ ಏಳು ವರ್ಷದ ಬಾಲಕ ರ್ಯಾನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್.
ಸುಮಾರು ಎಂಟು ಗಂಟೆಗೆ ಪ್ರದ್ಯುಮ್ನನ ಸಹಪಾಠಿಯೊಬ್ಬ ಶೌಚಾಲಯಕ್ಕೆ ಹೋದಾಗ ಅಲ್ಲಿ ರಕ್ತಮಡುವಿನಲ್ಲಿ ಬಿದ್ದಿರುವ ಪ್ರದ್ಯುಮ್ನನನ್ನು ನೋಡಿ ಕಿರುಚಿಕೊಂಡು ಶಾಲೆಯ ಪ್ರಾಂಶುಪಾಲೆ ನೀರ್ಜಾ ಅವರಿಗೆ ತಿಳಿಸುತ್ತಾನೆ. ಶಾಲಾ ಸಿಬ್ಬಂದಿಯಲ್ಲಿ ಒಟ್ಟುಗೂಡಿ ಪೊಲೀಸರಿಗೆ ಫೋನಾಯಿಸುತ್ತಾರೆ. ಪ್ರದ್ಯುಮ್ನನನ್ನು ಆಸ್ಪತ್ರೆಗೂ ಕರೆದೊಯ್ಯುತ್ತಾರೆ. ಆದರೆ ಅಷ್ಟರಲ್ಲಾಗಲೇ ಬಾಲಕ ಸತ್ತು ಒಂಡು ಗಂಟೆಯಾಗಿರುತ್ತದೆ.
ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ಪ್ರದ್ಯುಮ್ನನ ತಂದೆಯ ಸಹದ್ಯೋಗಿಗಳು ಮತ್ತು ಸಂಬಂಧಿಗಳು ಆಸ್ಪತ್ರೆಗೆ ದೌಡಾಯಿಸಿ ವಿಷಯ ತಿಳಿದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಘಟನೆ ನಡೆದ ರ್ಯಾನ್ ಅಂತಾರಾಷ್ಟ್ರೀಯ ಶಾಲೆ ಹಾಗೂ ಪೊಲೀಸ್ ಉಪನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಗುರುಗ್ರಾಮದ ಪೊಲೀಸರು ಶೀಘ್ರವಾಗಿ ಹಂತಕರ ಸೆರೆಗೆ ಜಾಲ ಬೀಸುತ್ತಾರೆ. ಶುಕ್ರವಾರ ಸಂಜೆಯೊಳಗೆ ಅವರ ತನಿಖೆಯಲ್ಲಿ ಸೆರೆಬಿದ್ದವರು ಬಸ್ ಕಂಡಕ್ಟರ್, ಬಸ್ ಡ್ರೈವರ್ ಹಾಗೂ ಇವರಿಬ್ಬರೂ ಆಪ್ತನಾದ ಶಾಲಾ ಸಿಬ್ಬಂದಿ.
ಯಾರೂ ಇರದನ್ನು ನೋಡಿ ಲೈಂಗಿಕ ತೃಷೆಗೆ ಬಳಸಲು ಮುಂದಾದ
ಪೊಲೀಸರ ಕೈಚಳಕದಿಂದ ಸತ್ಯ ಹೊರಬೀಳುತ್ತದೆ. ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಬಾಲಕನ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಶೌಚಾಲಯಕ್ಕೆ ಹೋದಾಗ ಅಲ್ಲಿ ಪ್ರದ್ಯುಮ್ನನನ್ನು ನೋಡಿದೆ. ಯಾರೂ ಇರದೇ ಇರುವುದನ್ನು ಗಮನಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಆತನನ್ನು ಬಿಗಿಯಾಗಿ ತಬ್ಬಿ ಮುದ್ದಾಡಿದೆ. ಆದರೆ ಬಾಲಕ ಕಿರುಚಾಡ ತೊಡಗಿದ. ಹೆದರಿಕೆಯಿಂದ ನನ್ನ ಜೇಬಿನಲ್ಲಿದ್ದ ಚಾಕುವಿನಿಂದ ಆತನ ಕುತ್ತಿಗೆ ಸೀಳಿದೆ ಎಂದು ಅಶೋಕ್ ಕೃತ್ಯವನ್ನು ವಿವರಿಸಿದ್ದಾನೆ.
Leave A Reply