ದಕ್ಷಿಣ ಮೆಕ್ಸಿಕೊದಲ್ಲಿ ಭೀಕರ ಭೂಕಂಪ, 36 ಸಾವು
ಮೆಕ್ಸಿಕೊ ನಗರ : ಈ ಶತಮಾನದ ಭೀಕರ ಭೂಕಂಪನಕ್ಕೆ ದಕ್ಷಿಣ ಮೆಕ್ಸಿಕೊ ತುತ್ತಾಗಿದೆ. ರಿಕ್ಟರ್ ಮಾಪಕದಲ್ಲಿ 8.2 ತೀವ್ರತೆ ದಾಖಲಾಗಿರುವ ಭೂಕಂಪನಕ್ಕೆ 36 ಮಂದಿ ಬಲಿಯಾಗಿದ್ದಾರೆ. ನಾಗರಿಕರು ದಿಕ್ಕಾಪಾಲಾಗಿ ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದು, ಕರಾವಳಿ ಪ್ರದೇಶದಲ್ಲಿ 10 ಅಡಿ ಎತ್ತರದ ಅಲೆಗಳು ಅಪ್ಪಳಿಸುವ ಸುನಾಮಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಮೆಕ್ಸಿಕೊ-ನ್ಯೂಜಿಲೆಂಡ್ ಗಡಿಯ ಪೆಸಿಫಿಕ್ ಕಡಲತೀರದ ದ್ವೀಪಗಳು ಹಾಗೂ ನಗರಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.
ಪೆಸಿಫಿಕ್ ಸಾಗರದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದ್ದು ಒಟ್ಟು 62 ನಗರಗಳಿಗೆ ವಿಸ್ತರಿಸಿದೆ ಎಂದು ಅಮೆರಿಕ ಹವಾಮಾನ ಇಲಾಖೆ ವರದಿ ಮಾಡಿದೆ. ಸುಮಾರು 12 ಕೋಟಿ ಜನಸಂಖ್ಯೆಯಿರುವ ಮೆಕ್ಸಿಕೊದಲ್ಲಿ 5 ಕೋಟಿ ಜನರಿಗೆ ಭೂಕಂಪನ ಬಿಸಿ ತಟ್ಟಿದೆ ಎಂದು ಅಧ್ಯಕ್ಷ ಪೆನಾ ನೆಯಿಟೊ ಬೇಸರ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದ್ದು, ಹಾನಿಯ ಪರಿಹಾರ ಮತ್ತು ಕಟ್ಟಡಗಳ ಪುನರ್‍ನಿರ್ಮಾಣಕ್ಕೆ ಸುಮಾರು ರೂ.10 ಸಾವಿರ ಕೋಟಿ ವೆಚ್ಚ ತಗುಲಲಿದೆ ಎಂದು ಸರ್ಕಾರ ಅಂದಾಜಿಸಿದೆ.
Leave A Reply