ಗೌರಿ ಸಾಯುವ ಮುನ್ನ ಬಾಯಿಗೆ ನೀರು ಹಾಕಿದ್ರಾ ಆ ಹುಡುಗರು?
ಗೌರಿ ಲಂಕೇಶ್ ತಮ್ಮ ಕಚೇರಿಯಲ್ಲಿ ಆವತ್ತಿನ ಕೆಲಸ ಮುಗಿಸಿ ಮನೆಗೆ ಹೋಗುವ ಗಡಿಬಿಡಿಯಲ್ಲಿದ್ರು. ಅಷ್ಟೊತ್ತಿಗೆ ಅವರಿಗೆ ತಮ್ಮ ಮನೆಯಲ್ಲಿ ಕೇಬಲ್ ಕಟ್ ಆಗಿರುವ ನೆನಪಾಗುತ್ತದೆ. ಅವರು ತಕ್ಷಣ ತಮ್ಮ ಏರಿಯಾದ ಕೇಬಲ್ ಆಪರೇಟರ್ ಅವರಿಗೆ ಕರೆ ಮಾಡುತ್ತಾರೆ. ನಾನು ಇನ್ನು ಹತ್ತು ನಿಮಿಷದಲ್ಲಿ ಮನೆಗೆ ತಲುಪುತ್ತೇನೆ. ನಿಮ್ಮ ಹುಡುಗರನ್ನು ಮನೆಗೆ ಕಳುಹಿಸಿ ಎಂದು ಗೌರಿ ಹೇಳಿದ್ದಾರೆ.
ಸರಿ, ಮೇಡಂ ನೀವು ಹತ್ತು ನಿಮಿಷಗಳಲ್ಲಿ ಗ್ಯಾರಂಟಿಯಾಗಿ ಮನೆಗೆ ತಲುಪುತ್ತಿರಲ್ಲ ಎಂದು ಕೇಬಲ ಆಪರೇಟರ್ ಕೇಳಿದ್ದಾರೆ. ಹಾಗೆ ಕೇಳಿದವರ ಹೆಸರು ಕೇಬಲ್ ರವಿ. ರಾಜರಾಜೇಶ್ವರಿ ನಗರದಲ್ಲಿ ಹಲವು ವರ್ಷಗಳಿಂದ ಅವರು ಕೇಬಲ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಆಫೀಸಿನ ಇಬ್ಬರು ಹುಡುಗರನ್ನು ಗೌರಿ ಲಂಕೇಶ್ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಆ ಹುಡುಗರು ಅಲ್ಲಿಗೆ ತಲುಪುವುದಕ್ಕೂ ಬೈಕ್‌ನಲ್ಲಿ ಬಂದ ಆಗಂತುಕ ಗೌರಿ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸುವುದಕ್ಕೂ ಸರಿಯಾಗಿದೆ. ಈ ಹುಡುಗರಿಗೆ ಒಮ್ಮೆಲ್ಲೇ ಶಾಕ್ ಆಗಿದೆ. ಅಷ್ಟರಲ್ಲಿ ಆ ಹಂತಕ ಇವರತ್ತ ಪಿಸ್ತೂಲ್ ತೋರಿಸಿ ಹೆದರಿಸಿದ್ದಾನೆ ಮತ್ತು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅದರ ನಂತರ ಆ ಹುಡುಗರು ಏನಾಯಿತು ಎಂದು ಒಂದು ಕ್ಷಣ ಯೋಚಿಸಿ ಒಬ್ಬ ಕಂಪೌಂಡಿನೊಳಗೆ ಇಣುಕಿ ನೋಡಿ ಗೌರಿ ಲಂಕೇಶ್ ಬಿದ್ದಿರುವುದನ್ನು ಖಚಿತಪಡಿಸಿದ್ದಾನೆ. ನಂತರ ತಮ್ಮ ಸ್ಕೂಟರ್ ನಲ್ಲಿದ್ದ ನೀರಿನ ಬಾಟಲಿ ತೆಗೆದುಕೊಂಡು ಬಂದು ಗೌರಿ ಬಾಯಲ್ಲಿ ಹಾಕಿದ್ದಾನೆ. ನಂತರ ಇಬ್ಬರಿಗೂ ಹೆದರಿಕೆ ಶುರುವಾಗಿದೆ. ಇಬ್ಬರೂ ಅಲ್ಲಿಂದ ತಮ್ಮ ಬೈಕ್ ನಲ್ಲಿ ಹಿಂತಿರುಗಿ ಹೋಗಿದ್ದಾರೆ.
ಅದರ ಬಳಿಕ ಎಲ್ಲ ಕಡೆ ಮಾಹಿತಿ ಹೋಗಿದೆ. ಗೌರಿ ಲಂಕೇಶ್ ಕೊನೆಯದಾಗಿ ಫೋನಿನಲ್ಲಿ ಯಾರೊಂದಿಗೆ ಮಾತನಾಡಿದ್ದು ಎಂದು ಪೊಲೀಸರು ಫೋನ್ ಟ್ರ್ಯಾಕ್ ರೆಕಾಡ್ ನೋಡಿದಾಗ ಅದರಲ್ಲಿ ಕೇಬಲ್ ರವಿ ಹೆಸರಿದೆ. ಪೊಲೀಸರು ನಂತರ ತಡ ಮಾಡದೇ ಕೇಬಲ್ ರವಿಯವರನ್ನು ವಿಚಾರಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ತನಗೂ ಆ ಕೊಲೆಗೂ ಏನು ಸಂಬಂಧವಿಲ್ಲ ಎಂದು ಅವರಿಗೆ ಹೇಳಿ ಹೇಳಿ ಸಾಕಾಗಿದೆ. ಅಂತಿಮವಾಗಿ ಗೌರಿ ಲಂಕೇಶ್ ಮನೆ ಸಿಸಿ ಟಿವಿ ಫೂಟೇಜ್ ಗಮನಿಸಿದಾಗ ಪೊಲೀಸರಿಗೆ ಹತ್ಯೆಯ ಸಂದರ್ಭದಲ್ಲಿ ಮೂರು ಜನ ಅಲ್ಲಿ ಇದ್ದಂತೆ ಕಾಣುತ್ತದೆ. ಆ ಮೂವರಲ್ಲಿ ಇಬ್ಬರು ಕೇಬಲ್ ಹುಡುಗರು ಎಂದು ಗೊತ್ತಿಲ್ಲದೆ ಪ್ರಾರಂಭದಲ್ಲಿ ಪೊಲೀಸರು ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಮೂರು ಜನ ಎಂದು ದಾಖಲಿಸಿಕೊಂಡಿದ್ದರು. ಅದರೆ ಈಗ ಒಬ್ಬನೇ ವ್ಯಕ್ತಿ ಹತ್ಯೆ ಮಾಡಿ ತಪ್ಪಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ಆದರೆ ಆತ ಮುಖ ಕಾಣದಂತೆ ಹೆಲ್ಮೆಟ್ ಧರಿಸಿರುವುದರಿಂದ ಅವನ ಪರಿಚಯ ಸಿಗುತ್ತಿಲ್ಲ. ಒಂದು ವೇಳೆ ಆತ ಆ ಹೊತ್ತಿನಲ್ಲಿ ತನ್ನ ಕಿಸೆಯಲ್ಲಿ ಮೊಬೈಲ್ ಇಟ್ಟುಕೊಂಡಿಲ್ಲ ಎಂದರೆ ಪೊಲೀಸರು ಆರೋಪಿಯನ್ನು ಹಿಡಿಯಲು ತುಂಬಾ ಕಷ್ಟಪಡಬೇಕಿದೆ!
Leave A Reply