ಮಮತಾ ಬ್ಯಾನರ್ಜಿ ನೆನಪಿರಲಿ, ವಿವೇಕಾನಂದರು ಮಾಡಿದ್ದು ರಾಜಕೀಯ ಭಾಷಣವಲ್ಲ
‘ಸಿಸ್ಟರ್ಸ್ ಆ್ಯಂಡ್ ಬ್ರದರ್ಸ್ ಆಫ್ ಅಮೆರಿಕ’
ಸೆ.11, 1983ರಲ್ಲಿ ಅಮೆರಿಕದ ಷಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಭಾಷಣ ಆರಂಭಿಸುತ್ತಲೇ ಆಡಿದ ಈ ಒಂದು ಮಾತು ಮಿಸ್ಟರ್, ಮಿಸ್ಟ್ರೆಸ್ ಎನ್ನುವುದೇ ಗೌರವ ಎಂದು ತಿಳಿದಿದ್ದ ಅಮೆರಿಕ ಮಾತ್ರವಲ್ಲ, ಇಡೀ ಜಗತ್ತೇ ಮಂತ್ರಮುಗ್ಧವಾಗುವಂತೆ, ಇದಪ್ಪ ಸಂಸ್ಕಾರ ಎಂದು ಮಾತನಾಡುವಂತೆ ಮಾಡಿತ್ತು! ಅಷ್ಟೇ ಅಲ್ಲ, ಅಂದು ವಿವೇಕಾನಂದರ ಪ್ರತಿ ಮಾತೂ, ಪ್ರತಿ ಪದ ದೇಶದ ತೂಕವನ್ನು ಹೆಚ್ಚಿಸಿತ್ತು.
ಇಂಥ ವಿವೇಕಾನಂದರ ಭಾಷಣಕ್ಕೆ ಸೆ.11ಕ್ಕೆ 125 ವರ್ಷ ತುಂಬುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಿದೆ. ನರೇಂದ್ರ ಮೋದಿ ಅವರೇ ದೇಶವನ್ನುದ್ದೇಶಿಸಿ ಈ ಕುರಿತು ಮಾತನಾಡಲಿದ್ದಾರೆ. ಹೇಳಿ, ದೇಶದ ಘನತೆ ಹೆಚ್ಚಿಸಿದ ಸಿಡಿಲ ಸನ್ಯಾಸಿ ವಿವೇಕಾನಂದರ ಭಾಷಣದ 125ನೇ ವಾರ್ಷಿಕೋತ್ಸವದ ನಿಮಿತ್ತ ಇಂಥ ಕಾರ್ಯಕ್ರಮ ಆಯೋಜಿಸುವುದರಲ್ಲಿ ತಪ್ಪೇನಿದೆ?
ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ, ಇದೇ ದೊಡ್ಡ ತಪ್ಪಾಗಿ ಕಾಣಿಸುತ್ತಿದೆ…
ವಿಚಾರ ಸಂಕಿರಣವನ್ನು ವಿರೋಧಿಸಿರುವ ಮಮತಾ ಬ್ಯಾನರ್ಜಿ ಸಂಕಿರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಪ್ರಸಾರವಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾಾರೆ?
ಇದು ‘ವಿವೇಕ’ ಇರುವ ರಾಜಕಾರಣಿ ಆಡುವ ಮಾತೇ? ಕೇಂದ್ರ ಸರಕಾರದ ನಿರ್ಣಯ ವಿರೋಧಿಸಬೇಕು ಎಂದು ಮಮತಾ ಈ ಮಟ್ಟಕ್ಕೂ ಇಳಿಯಬಲ್ಲರಾ? ಅಷ್ಟಕ್ಕೂ, ವಿವೇಕಾನಂದರೇನು ಅಬು ಸಲೇಂ, ಅಫ್ಜಲ್ ಗುರುನಾ? ಷಿಕಾಗೋದಲ್ಲಿ ಮಾಡಿದ್ದು ರಾಜಕೀಯ ಭಾಷಣವಾ? ಏನಾಗಿದೆ ಇವರ ಮಿದುಳಿಗೆ?
ಇಷ್ಟು ಬೊಗಳೆ ಬಿಡುವ ಮಮತಾ ಬ್ಯಾನರ್ಜಿ ಮಾತ್ರ ಬಾಂಗ್ಲಾದೇಶಿಯರಿಗೆ ವೋಟರ್ ಐಡಿ ಕೊಟ್ಟು ಮಕ್ಕಳಂತೆ ಬಂಗಾಳದಲ್ಲಿ ಸಾಕುತ್ತಿದ್ದಾರೆ. ಹಿಂದೂಗಳನ್ನು ಮಲಮಕ್ಕಳಂತೆ ಕಾಣುವುದಲ್ಲದೇ, ಅವರ ವಿರುದ್ಧ ಎತ್ತಿಕಟ್ಟುತ್ತಾರೆ. ಹಿಂದೂಗಳ ಹಬ್ಬಗಳಿಗೆ ನಿಷೇಧ ಹೇರುತ್ತಾರೆ. ಆದರೆ ವಿಶ್ವವೇ ಮೆಚ್ಚಿದ ವಿವೇಕಾನಂದರ ಕುರಿತ ವಿಚಾರ ಸಂಕಿರಣಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ವಿಚಾರ, ವಿವೇಕ ಇರುವವರು ಹೀಗೆ ಮಾಡುವುದಿಲ್ಲ ಮಮತಾ. ಕಮ್ಯುನಿಸ್ಟರ ವಿರುದ್ಧ ಹೋರಾಡಿ, ಈಗ ಕಮ್ಯುನಿಷ್ಟರಂತೆಯೇ ವರ್ತಿಸುತ್ತಿರುವ ಮಮತಾರ ‘ಕಮ್ಮಿನಿಷ್ಠೆೆ ಗೊತ್ತು ಬಿಡಿ.
-ಅಶ್ವಿನ್ ಉಬ್ಬಜ್ಜಿಪಲ್
Leave A Reply