ಕ್ರೈಸ್ತ ಮಿಷನರಿಗಳ ಇಂಥಾ ಕೃತ್ಯ ಖಂಡಿಸಲು ಯಾವ ‘ಭಗವಾನ್’ ಬರಬೇಕು?
ಹಿಂದೂ ಧರ್ಮದಲ್ಲಿ ಅನಾಚಾರ ತುಂಬಿದೆ. ಮೂಢನಂಬಿಕೆ ತಾಂಡವವಾಡುತ್ತಿದೆ. ಭಗವದ್ಗೀತೆಯನ್ನು ಸುಟ್ಟು ಹಾಕಬೇಕು ಎಂದು ಹೇಳುವ ಬುದ್ಧಿಜೀವಿಗಳಿದ್ದಾಾರೆ. ತಮ್ಮ ಕಚೇರಿಯಲ್ಲಿ ಪೂಜೆ ಮಾಡಿಸಿಯೂ, ‘ಮೌಢ್ಯ ನಷೇಧ’ದ ಹೆಸರಲ್ಲಿ ಹಿಂದೂ ಧರ್ಮದ ಆಚರಣೆ, ಸಂಪ್ರದಾಯಗಳಿಗೆ ಭಂಗ ತರುವ ಮಹೋದಯ ಮುಖ್ಯಮಂತ್ರಿಯವರೂ ನಮ್ಮಲ್ಲಿದ್ದಾಾರೆ. ಆದರೆ ಇದೇ ಮೂಢನಂಬಿಕೆ, ಧರ್ಮಯುದ್ಧ, ಮತಾಂತರದಂಥ ಹಲವು ಘಟನೆ ನಡೆದರೆ ಇಂಥಾ ಬುದ್ಧಿಜೀವಿಗಳು ಬಾಯಿಗೆ ಫೆವಿಕಾಲ್ ಹಾಕಿಕೊಳ್ಳುತ್ತಾಾರೆ…
ಜಾರ್ಖಂಡ್‌ನ ರಾಂಚಿಯಲ್ಲಿ ಮಿಖೈಲ್ ಖುಜುರ್ ಎಂಬ ಕ್ರೈಸ್ತ ಪಾದ್ರಿ ‘ಆದಿಮ್ ಧರ್ಮ: ಏಕ್ ಪರಿಚಯ್’ (ಪ್ರಾಚೀನ ಧರ್ಮ: ಒಂದು ಪರಿಚಯ) ಎಂಬ ಪುಸ್ತಕ ಬರೆದಿದ್ದಾನೆ. ಕ್ರೈಸ್ತ ಪಾದ್ರಿಯಾಗಿರುವ ಈತ ಪ್ರಾಚೀನ ಹಿಂದೂ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾನೆ ಎಂದರೆ ಈತ ಜಾತಿ, ಧರ್ಮಾತೀತ ಎಂದು ಭವಿಸದಿರಿ. ಆತ ರಾಂಚಿಯ ಬುಡಕಟ್ಟು ಜನಾಂಗ, ಹಿಂದೂಗಳು ಹಾಗೂ ಸರ್ನಾ ಧರ್ಮಿಯರ ಬಡತನ ಎನ್‌ಕ್ಯಾಶ್ ಮಾಡಿಕೊಳ್ಳಲು ಈ ಪುಸ್ತಕ ಬರೆದಿದ್ದಾನೆ. ಅಮೆರಿಕದಿಂದ ಹಣ ತಿನ್ನುವ ಈ ಕ್ರೈಸ್ತ ಮಿಷನರಿಗಳು ಪುಸ್ತಕ ಪ್ರಕಟಿಸುವ ನೆಪದಲ್ಲಿ ಹಿಂದೂಗಳ ನಂಬಿಕೆಯನ್ನೇ ಬುಡಮೇಲು ಮಾಡುತ್ತಾಾರೆ. ಮತಾಂತರಗೊಳಿಸುತ್ತಾಾರೆ. ಹಾಗಾಗಿಯೇ ರಾಂಚಿಯ ಸರ್ನಾ ಸಮಿತಿ ಹಾಗೂ ವಾನ್ವಸಿ ಕಲ್ಯಾಣ ಸಂಘ ಕ್ರೈಸ್ತ ಮಿಷನರಿಗಳ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಜಾರ್ಖಂಡ್ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇಂಥಾ ಮಿಷನರಿಗಳು ಎಲ್ಲೆಡೆಯೂ ಇರುವುದರಿಂದ ನಾವೂ ಎಚ್ಚರದಿಂದ ಇರುವುದು ಒಳಿತ.
ಏಕೆಂದರೆ, ಹಿಂದೂಗಳಿಗೆ ಅನ್ಯಾಯವಾದರೆ, ಅನ್ಯ ಧರ್ಮದಲ್ಲಿ ಅನಾಚರ ನಡೆದರೆ, ಹಿಂದೂಗಳ ವಿರುದ್ಧ ಪುಸ್ತಕ ಬರೆದರೆ, ಸುಟ್ಟು ಹಾಕಲು ಯಾವ ‘ಭಗವಾನ’ನನೂ ಬರುವುದಿಲ್ಲ. ಎಚ್ಚರ.
ಅಷ್ಟಕ್ಕೂ ಪುಸ್ತಕದಲ್ಲೇನಿದೆ ಗೊತ್ತಾ?
– ಭಗವಾನ್ ಶಿವ ಕೆಟ್ಟ ದೇವರು
– ಪಾರ್ವತಿ, ಗಣೇಶ ಸಹ ಕೆಟ್ಟ ಆತ್ಮ ಉಳ್ಳವರು
– ಆತ್ಮ ಪೂಜೆ ಸರಿಯಿಲ್ಲ, ಅದನ್ನು ಮಾಡಕೂಡದು
– ಕುತನಾಡ್ ಎಂಬ ಬುಡಕಟ್ಟು ಪೂಜೆ ಕೆಟ್ಟದ್ದು
-ರಮೇಶ್ ಚಂದ್ರಕಾಂತ, ಎಲ್‌ಎಲ್‌ಬಿ ವಿದ್ಯಾರ್ಥಿ, ಶಿವಮೊಗ್ಗ
Leave A Reply