ಸೆಪ್ಟೆಂಬರ್ 11 ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ- ಚಕ್ರವರ್ತಿ ಸೂಲಿಬೆಲೆ
Special Coverage from Belgavi:
ಸೆಪ್ಟೆಂಬರ್ 11 ರಂದು ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಭಾರತದ ಹಿರಿಮೆಯನ್ನು ಸಾರಿ ಭರ್ಥಿ 125 ವರ್ಷಗಳಾಗುತ್ತಿವೆ. ಅಂತಹ ಪುಣ್ಯ ಕಾಲದಲ್ಲಿ ನಾವು ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು ನಡೆದಾಡಿದ ಪುಣ್ಯಭೂಮಿಯಲ್ಲಿ ಅವರ ಮತ್ತು ಸೋದರಿ ನಿವೇದಿತಾ ಅವರ ಸಾಹಿತ್ಯದ ಉತ್ಸವವನ್ನು ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ವಾಗ್ಮಿ, ಯುವ ಬ್ರಿಗೇಡಿನ ಮಾರ್ಗದಶ್ಯಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಅಂತಿಮ ಚರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ಮಂಗಳೂರಿನಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಯದಲ್ಲಿ ಭಾಗವಹಿಸಿದ ಎಲ್ಲರೂ ಸ್ವರ್ಗವೊಂದು ಧರೆಗಿಳಿದಂತೆ ಭಾಸವಾಗುತ್ತಿದೆ ಎಂದು ಹೇಳುತ್ತಿದ್ದರು. ಅದರ ನಂತರ ಅನೇಕ ಶಾಲಾ ಕಾಲೇಜುಗಳಲ್ಲಿ ನಿವೇದಿತಾ ಬಗ್ಗೆ ಚರ್ಚೆಗಳಾಗಿವೆ. ಈಗ ಬೆಳಗಾವಿಯಲ್ಲಿ ಈ ಕಾರ್ಯಕ್ರಮದ ಅಂತಿಮ ಹಂತಕ್ಕೆ ಬರುವಾಗ ಕಾರ್ಯಕ್ರಮ ಹೇಗೆ ಆಗುತ್ತದೋ ಎನ್ನುವ ಆತಂಕ ಚಿಕ್ಕದಾಗಿ ಇತ್ತು. ಆದರೆ ಕಳೆದ ಮೂರು ವಾರಗಳಿಂದ ಇಲ್ಲಿದ್ದಾಗ ಒಮ್ಮೆಯೂ ನನಗೆ ಯಾವುದೇ ಟೆನ್ಷನ್ ಆಗದೆ ಹೂ ಎತ್ತಿದ್ದಂತೆ ಕಾರ್ಯಕ್ರಮ ಮುಗಿದು ಹೋಗಲಿದೆ ಎಂದು ಅನಿಸುವಾಗ ಇದೊಂದು ಮ್ಯಾಜಿಕ್ ಎಂದು ಅನಿಸದೇ ಇರುವುದಿಲ್ಲ. ಬೇಲೂರು ಸ್ವಾಮಿಗಳಿಗೆ ಕಾರ್ಯಕ್ರಮಕ್ಕೆ ಕರೆದಾಗ ಅವರಿಗೆ ಬೇರೆ ಕಾರ್ಯಕ್ರಮವೊಂದು ಮೊದಲೇ ನಿಗದಿಯಾಗಿತ್ತು. ಆದರೆ ಸ್ವಾಮಿ ರಾಮಕೃಷ್ಣ ಪರಮಹಂಸರ ಆಶೀರ್ವಾದ ಎಲ್ಲಿಯ ತನಕ ಇದೆ ಎಂದರೆ ಕೆಲವು ದಿನಗಳ ಬಳಿಕ ನಂತರ ಕೇಳಿದಾಗ ಸ್ವಾಮೀಜಿಗಳು ಸಂತೋಷದಿಂದ ಒಪ್ಪಿಕೊಂಡು ಬೇರೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಹೇಳಿದ ಖುಷಿಯ ಕ್ಷಣಗಳೊಂದು ಎಂದು ಚಕ್ರವರ್ತಿ ಹೇಳಿದರು.
ರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಅನೇಕ ಕಾರ್ಯಕರ್ತರು ಬಂದು ಅರ್ಹನಿಶಿಯಾಗಿ ದುಡಿದಿದ್ದಾರೆ. ಅದು ಯಾವುದೇ ಚಿಕ್ಕ ಪ್ರತಿಫಲಾಪೇಕ್ಷೆ ಇಲ್ಲದೆ ಕೇವಲ ವಿವೇಕಾನಂದರ ಹಾಗೂ ನಿವೇದಿತಾ ಅವರ ಮೇಲಿನ ಗೌರವದಿಂದ ಸೇವೆ ಸಲ್ಲಿಸಿರುವುದು ಸಾರ್ಥಕ ಕ್ಷಣಗಳು, ಅಂತಹ ಎಲ್ಲ ಕಾರ್ಯಕತ್ತರಿಗೆ ಈ ಕಾರ್ಯಕ್ರಮದ ಯಶಸ್ಸು ಸಲ್ಲುತ್ತದೆ. ಮುಗಳಖೋಡ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ಎಷ್ಟು ಕಾರ್ಯಕತ್ತರು ಬರುತ್ತಾರೆ ದಾಸೋಹಕ್ಕೆ ಎಂದು ಒಂದು ಮಾತು ಕೇಳದೆ ಎಷ್ಟು ಜನ ಬಂದರೂ ಮಠದ ಕಡೆಯಿಂದ ಅನ್ನದಾಸೋಹ ನಡೆಯಲಿದೆ, ಮುಂದುವರೆಯಿರಿ ಎಂದು ಹೇಳಿದ ನಂತರ ಕಾರ್ಯಕ್ರಮ ನಡೆಸಲು ಇನ್ನಷ್ಟು ಸ್ಫೂರ್ತಿ ಬಂದಿತ್ತು ಎಂದು ಸೂಲಿಬೆಲೆ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೇಲೂರು ರಾಮಕೃಷ್ಣ ಮಠ ಮಿಶನ್ ಇದರ ಸಹಾಯಕ ಕಾರ್ಯದರ್ಸಿ ಶ್ರೀ ಸ್ವಾಮಿ ಬಲಭದ್ರಾನಂದ ಸ್ವಾಮೀಜಿ ಮಾತನಾಡಿದರು. ಮುಗಳಖೋಡ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಮ್ಮೇಳಾನಾಧ್ಯಕ್ಷ ತರುಣ್ ವಿಜಯ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಾಯ್ ವಾಳ್ಕೆ ಸ್ವಾಗತಿಸಿದರು. ಅಭಿಲಾಶ್ ನಿರೂಪಿಸಿದರು
Leave A Reply