ಕಾಂಗ್ರೆಸ್ ಸರಕಾರ ಕೊಲೆಗಳನ್ನು ಬಯಸುತ್ತಿದೆ, ವಿಚಾರವಾದಿಗಳಿಗೆ ಎಚ್ಚರ: ಕೆಪಿ ಶಶಿಕಲಾ
ಕೊಲ್ಲಂ: ಚುನಾವಣೆಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವೇ ಕೊಲೆಗಳನ್ನು ಬಯಸುತ್ತಿದೆ. ಹುಸಿ ಜಾತ್ಯಾತೀತವಾದಿಗಳೇ ಎಚ್ಚರ ನಿಮ್ಮವರೇ ನಿಮ್ಮನ್ನು ಕೊಲ್ಲಬಹುದು. ಜೀವ ಉಳಿಸಿಕೊಳ್ಳಲು ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಮಾಡಿ ಎಂದು ಕೇರಳದ ಹಿಂದೂ ಐಕ್ಯವಾದಿ ಸಂಘಟನೆ ಮುಖ್ಯಸ್ಥೆ, ಪ್ರಬಲ ಹಿಂದೂತ್ವವಾದಿ ಕೆ.ಪಿ.ಶಶಿಕಲಾ ಎಚ್ಚರಿಕೆ ನೀಡಿದ್ದಾರೆ.
ಬುದ್ದಿಜೀವಿಗಳೇ ಜೀವ ಉಳಿಸಿಕೊಳ್ಳುವ ಆಸೆಯಿದ್ದರೇ ಹಿಂದೂ ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮಮಾಡಿ. ಇಲ್ಲದಿದ್ದರೇ ನಿಮ್ಮವರೇ ನಿಮ್ಮನ್ನು ಕೊಲ್ಲಬಹುದು. ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಕೊಲೆಗಳು ಆಗುವುದನ್ನು ಬಯಸುತ್ತಿದೆ. ಅಲ್ಲದೇ ಗೌರಿ ಕೊಲೆಯಲ್ಲಿ ಅನುಕಂಪದ ವೋಟು ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಕೊಲೆಗಳನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ವೋಟು ಪಡೆಯುವ ಉದ್ದೇಶ ಹೊಂದಿದೆ. ಗೌರಿಯಂತಹ ಸ್ವಾತಂತ್ರ್ಯ ಚಿಂತಕರು ತಮ್ಮ ಜೀವನ ಉಳಿಸಿಕೊಳ್ಳುವ ಆಸೆಯಿದ್ದರೇ ಹಿಂದೂ ದೇವರ ಮೊರೆಹೋಗಬೇಕು ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಹಲವು ವಿರೋಧಗಳ ಮಧ್ಯೆ ವಿಶ್ವಾದ್ಯಂತ ಬೆಳೆಯುತ್ತಿದೆ. ವಿರುದ್ಧ ವಿಚಾರಧಾರೆಯವರ ಹತ್ಯಗಳನ್ನು ನಡೆಸಿ ಆರ್‌ಎಸ್‌ಎಸ್ ಬೆಳೆಸುವ ಗತಿ ಇಲ್ಲ. ಗೌರಿ ಲಂಕೇಶ್ ಜೀವನದ ಕೊನೆಯವರೆಗೂ ಬಲಪಂಥಿಯ ವಿಚಾರಧಾರೆಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಅವರ ಹತ್ಯೆಯಲ್ಲಿ ಬಲಪಂಥೀಯರ ಕೈವಾಡ ಇರಬಹುದು ಎಂಬ ಶಂಕೆ ಮೂಡುವುದು ಸಹಜ. ಆದರೆ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೋಗಿ ಗೌರಿ ಲಂಕೇಶ ಅದೇ ಸಂಘಟನೆಯ ಕೆಲವರ ವಿರೋಧ ಕಟ್ಟಿಕೊಂಡಿದ್ದರ ಮಾಹಿತಿ ಇದೆ. ಅವರೂ ಈ ಕೊಲೆಗಳನ್ನು ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಶಶಿಕಲಾ ಅವರ ಭಾಷಣ ಪ್ರಚೋದನಕಾರಿಯಾಗಿದೆ ಎಂದು ಪರವೂರ್ ಕಾಂಗ್ರೆಸ್ ಶಾಸಕ ವಿ.ಡಿ.ಸತೀಶನ್ ಪೊಲೀಸರಿಗೆ ದೂರು ನೀಡಿದ್ದು, ಶಶಿಕಲಾ ವಿರುದ್ಧ ಪ್ರಕರಣ ದಾಖಲಾಗಿದೆ.
Leave A Reply