ಮುಸ್ಲಿಂ, ಕ್ರೈಸ್ತರಲ್ಲಿ ಇರುವ “ಕಪಟ ಬಾಬಾ”ಗಳ ಪಟ್ಟಿ ಬರಬೇಕು!
ಅಖಿಲ ಭಾರತ ಹಿಂದೂ ಸಂತರ ಆಖಾಡದ ಕಡೆಯಿಂದ 20 ಜನ “ಫೇಕ್ ಬಾಬಾಸ್” ಗಳ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಬಾಬಾ ರಾಮ್ ರಹೀಂ ಸಹಿತ ರಾಧೆ ಮಾ ಸೇರಿಕೊಂಡು ವಿವಾದದಲ್ಲಿರುವ, ಪ್ರಕರಣದಲ್ಲಿ ಸಿಕ್ಕಿಕೊಂಡಿರುವ 20 ಜನ ಸಂತರಿದ್ದಾರೆ. ಅದನ್ನು ಇಟ್ಟುಕೊಂಡು ರಾಷ್ಟ್ರೀಯ ವಾಹಿನಿಯೊಂದು ಪ್ರೋಗ್ರಾಂ ಮಾಡಿತ್ತು.
ನಿಜಕ್ಕೂ ಹಿಂದೂ ಸಂತ ಅಖಾಡದ ಹಿರಿಯರನ್ನು ಮೆಚ್ಚಲೇಬೇಕು. ತಮ್ಮ ಧರ್ಮದಲ್ಲಿರುವ ಯಾರ್ಯಾರು ಸಂತರು ಎನ್ನುವ ಹೆಸರಲ್ಲಿ ಅತ್ಯಾಚಾರ, ವಂಚನೆ ಮಾಡಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೋ ಅವರ ಪಟ್ಟಿ ಬಿಡುಗಡೆ ಮಾಡಿ ಇವರು ಕಪಟ ಬಾಬಾಗಳು ಎಂದು ಘೋಷಿಸಿಬಿಟ್ಟಿದ್ದಾರೆ. ಇವರನ್ನು ನಂಬಬೇಡಿ ಎನ್ನುವ ಸಂದೇಶ ಸಾರಿದ್ದಾರೆ. ಈ ಕಪಟ ಬಾಬಾಗಳು ಕೇವಲ ಒಂದೇ ಧರ್ಮದಲ್ಲಿ ಇದ್ದಾರೆ ಎಂದಲ್ಲ. ಆದರೆ ಬೇರೆ ಧರ್ಮಗಳ ಮುಖಂಡರು ಆ ಧೈರ್ಯ ಮಾಡಿಲ್ಲ. ಕ್ರೈಸ್ತ ಧರ್ಮದಲ್ಲಿ ಭೋದಕರು ಎಂದು ಇರುವ ಅನೇಕರು ಈ ಮತಾಂತರದ ಹೆಸರಲ್ಲಿ ಧರ್ಮ ಭೋದನೆ ಮಾಡುತ್ತಾರೆ. ಮತಾಂತರ ಎನ್ನುವುದು ತಪ್ಪು ತಾನೆ. ಅದನ್ನು ಉದ್ದೇಶ ಇಟ್ಟು ಮಾಡುವುದು ಕೂಡ ಕಪಟ. ಇನ್ನು ತಾವು ಕೊಡುವ ಔಷಧ ಸೇವಿಸಿದರೆ ಯಾವುದೇ ರೋಗವೂ ಗುಣವಾಗುತ್ತದೆ ಎಂದು ಸುಳ್ಳು ಹೇಳಿ ಔಷಧ ಮಾರುವ ನೆಪದಲ್ಲಿ ತಮ್ಮ ಧರ್ಮವನ್ನು ಬಳಸುವ ಹಲವು ಭೋದಕರು ಇದ್ದಾರೆ. ಅವರು ಯೇಸುವಿನ ಫೋಟೋ ಕೆಳಗೆ ಭೋದನೆಗೆ ಕುಳಿತುಕೊಳ್ಳುತ್ತಾರೆ. ಅವರ ಔಷಧ ವ್ಯಾಪಾರಕ್ಕೆ ಧರ್ಮ ಬಲಿ ಮಾಡುತ್ತಾರೆ. ಇನ್ನು ಕೆಲವರು ತಾವು ಮುಟ್ಟಿದರೆ ರೋಗ ಗುಣವಾಗುತ್ತದೆ. ತಮಗೆ ಯೇಸುವಿನ ಶಕ್ತಿ ಇದೆ ಎಂದು ಸುಳ್ಳು ಹೇಳಿ ಅದನ್ನು ಟಿವಿಯಲ್ಲಿ ಪ್ರಚಾರ ಮಾಡಿ ಕೋಟ್ಯಾಂತರ ರೂಪಾಯಿ ಹಣ ಸಂಪಾದಿಸುತ್ತಾರಲ್ಲ, ಅವರು ಬಳಸುವುದು ಯೇಸುವಿನ ಶಿಲುಬೆಯ ಚಿತ್ರವನ್ನು. ಇಂತವರ ಪಟ್ಟಿ ಕ್ರೈಸ್ತ ಹಿರಿಯ ಮುಖಂಡರು ರಾಷ್ಟ್ರಮಟ್ಟದಲ್ಲಿ ಮಾಡುತ್ತಾರಾ? ಅಂತಹ ಕಪಟಿಗಳು ನಮ್ಮ ದೇಶಕ್ಕೆ ಬಂದು ಇಲ್ಲಿ ನಾಟಕ ಮಾಡಿ ಹೋಗಬಾರದು ಎಂದು ನಿಶ್ಚಯಿಸುತ್ತಾರಾ? ಹಾಗೇ ಮುಸಲ್ಮಾನರಲ್ಲಿಯೂ ಹೆಚ್ಚು ಕಡಿಮೆ ಇಂತಹುದೇ ಬಾಬಾಗಳಿದ್ದಾರೆ. ಅವರು ಕೂಡ ಕಪಟ ಔಷಧ ಮಾರುತ್ತಾರೆ. ಹಳ್ಳಿಗಾಡಿನಲ್ಲಿ ಮುಗ್ಧ ಹೆಣ್ಣುಮಕ್ಕಳಲ್ಲಿ ಯಾವುದ್ಯಾವುದೋ ಆಸೆ ಹುಟ್ಟಿಸಿ ಅತ್ಯಾಚಾರ ಮಾಡುತ್ತಾರೆ. ಇಸ್ಲಾಂ ಹೆಸರಲ್ಲಿ ಜಿಹಾದ್ ಗೆ ಕರೆ ಕೊಡುತ್ತಾರೆ. ಲವ್ ಜಿಹಾದ್ ಗೆ ಪ್ರೇರೆಪಿಸುವ ಭೋದಕರಿದ್ದಾರೆ. ಬಾಂಬ್ ಸ್ಫೋಟಕ್ಕೆ ಯುವಕರು ಸೆಳೆಯುವ ಭೋದಕರಿದ್ದಾರೆ. ಅಂತವರ ಪಟ್ಟಿ ಅಖಿಲ ಭಾರತೀಯ ಮುಸ್ಲಿಂ ಬೋರ್ಡ್ ಮಾಡುತ್ತಾ?
ಹೇಗೆ ಹಿಂದೂ ಸಾಧು ಸಂತರು ಸೇರಿಕೊಂಡು ಇಂತಿಂತವರಿಂದ ಹೀಗೆ ಮೋಸವಾಗಿದೆ, ಇವರು ಕಪಟ ಬಾಬಾಗಳು ಎಂದು ಪಟ್ಟಿ ಮಾಡಿದಂತೆ ಮುಸಲ್ಮಾನ, ಕ್ರೈಸ್ತ ಧರ್ಮಗುರುಗಳು ಸೇರಿ ಯಾವಾಗ ಪಟ್ಟಿ ಮಾಡುತ್ತಾರೆ? ಆ ಸಾಮರ್ಥ್ಯ ಇದೆಯಾ? ನಮ್ಮದು ತಪ್ಪು ಎಂದು ಒಪ್ಪಿಕೊಳ್ಳಲು ನೈತಿಕತೆ ಬೇಕು. ಝಾಕೀರ್ ನೈಕ್ ನಂತವರು ಬಹಿರಂಗವಾಗಿ ಹಿಂದೂ ದೇವರಿಗೆ ಬೈದು ತಿರುಗಾಡುತ್ತಿದ್ದಾನೆ. ಸೈಯದ್ ಮದನಿಯ ಬಗ್ಗೆ ಪುನ: ಹೇಳಬೇಕಾಗಿಲ್ಲ. ಇವರಂತಹ ಹತ್ತಾರು ಜನ ನಮ್ಮ ಎದುರೇ ಇದ್ದಾರೆ. ಇರುವುದು 17 ಶೇಕಡಾವಾದರೂ ಕಣ್ಣು ಮುಚ್ಚಿದರೂ ಇಪ್ಪತ್ತು ಜನ ಸಿಗುತ್ತಾರೆ. ಪಟ್ಟಿ ಯಾವಾಗ ಮಾಡುವುದು!
Leave A Reply