ಏನಿದು ಶಾದಿ ಶಗುನ್? ನಿಜವಾಗಲೂ ಇದು ಕೇಂದ್ರ ಸರಕಾರದ ಯೋಜನೆಯಾ?
Posted On September 11, 2017
ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಾದಿ ಶಗುನ್ ಯೋಜನೆಯ ಬಗ್ಗೆ ಪರ-ವಿರೋಧದ ಚರ್ಚೆಗಳಾಗುತ್ತಿದೆ. ಶಾದಿ ಶಗುನ್ ಯೋಜನೆ ಯಾರಿಗೆ ಅನ್ವಯವಾಗುತ್ತದೆ? “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಅಂದಿದ್ದ ಮೋದಿ ಸರಕಾರ ಒಂದು ಸಮುದಾಯಕ್ಕೆ ಯೋಜನೆಯನ್ನು ಮೀಸಲಿಟ್ಟಿದ್ದು ಸರೀನಾ ಇತ್ಯಾಧಿ ವಿಚಾರಗಳ ಕುರಿತು ಚರ್ಚೆಯಾಗುತ್ತಿದೆ. ಹಾಗಾದರೆ ಈ ಯೋಜನೆಯ ಆಶಯವೇನು ಎಂಬುವುದರ ಬಗ್ಗೆ ಸ್ವಲ್ಪ ಅವಲೋಕನ ಮಾಡೋಣ.
ಶಾದಿ ಶಗುನ್ ಯೋಜನೆ ಕೇಂದ್ರ ಸರ್ಕಾರದಿಂದಲೇ ನೇರವಾಗಿ ಜನತೆಗೆ ನೀಡುವ ಯೋಜನೆಯಲ್ಲ. ಅದು ಮೌಲಾನ ಆಜಾದ್ ಎಜುಕೇಶನ್ ಫೌಂಡೇಶನ್ ಎಂಬ ಸರ್ಕಾರಿ ಅನುದಾನಿತ ಟ್ರಸ್ಟ್’ನಿಂದ ಕೊಡಲ್ಪಡುವ ಯೋಜನೆ. ಸ್ನಾತಕೋತ್ತರ ಪದವಿ ಪೂರೈಸಿದ ಮುಸ್ಲಿಂ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಅಂಥಹ ಯುವತಿಯರಿಗೆ ತಮ್ಮ ಮದುವೆಯ ಸಂದರ್ಭ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು Rs.51000/- ಯನ್ನು ನೀಡುತ್ತದೆ.ನಿನ್ನೆಯಿಂದ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಾದಿ ಶಗುನ್ ಯೋಜನೆಯ ಬಗ್ಗೆ ಪರ-ವಿರೋಧದ ಚರ್ಚೆಗಳಾಗುತ್ತಿದೆ. ಶಾದಿ ಶಗುನ್ ಯೋಜನೆ ಯಾರಿಗೆ ಅನ್ವಯವಾಗುತ್ತದೆ? “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಅಂದಿದ್ದ ಮೋದಿ ಸರಕಾರ ಒಂದು ಸಮುದಾಯಕ್ಕೆ ಯೋಜನೆಯನ್ನು ಮೀಸಲಿಟ್ಟಿದ್ದು ಸರೀನಾ ಇತ್ಯಾಧಿ ವಿಚಾರಗಳ ಕುರಿತು ಚರ್ಚೆಯಾಗುತ್ತಿದೆ. ಹಾಗಾದರೆ ಈ ಯೋಜನೆಯ ಆಶಯವೇನು ಎಂಬುವುದರ ಬಗ್ಗೆ ಸ್ವಲ್ಪ ಅವಲೋಕನ ಮಾಡೋಣ.
ಶಾದಿ ಶಗುನ್ ಯೋಜನೆಯ ಮುಖ್ಯ ಉದ್ದೇಶ ಮುಸ್ಲಿಂ ಮಹಿಳೆಯರನ್ನು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಾಗಿದೆ. ಮುಸ್ಲಿಂ ಮಹಿಳೆ ಉನ್ನತ ಶಿಕ್ಷಣವನ್ನು ಪಡೆದು ಮುಖ್ಯವಾಹಿನಿಗೆ ಬಂದರೆ ಆ ಸಮುದಾಯದಲ್ಲಿ ಬೇರೂರಿವ ಅನಿಷ್ಟ ಟ್ರಿಪಲ್ ತಲಾಖ್, ಡಜನ್ ಗಟ್ಟಲೆ ಸಂತಾನೋತ್ಪತ್ತಿ ಮೊದಲಾದ ಗಂಭೀರ ಸಮಸ್ಯೆಗಳಿಗೆ ಅವರಿಂದಲೇ ವಿರೋಧ ವ್ಯಕ್ತವಾಗಬಹುದು ಎಂಬುವುದು ಮೋದಿ ಸರಕಾರದ ಹಿಡನ್ ಅಜೆಂಡಾ ಇದ್ದರೂ ಇರಬಹುದು. (ಈಗಾಗಲೇ ಉತ್ತರ ಪ್ರದೇಶದಲ್ಲಿ ಅದರ ಪರಿಣಾಮವನ್ನು ನೋಡಿದ್ದೇವೆ ಕೂಡ)
ಮೋದಿ ಸರಕಾರವನ್ನು ಹೀನವಾಗಿ ಟೀಕಿಸುವ ಖಟ್ಟರ್ ಹಿಂದುತ್ವವಾದಿಗಳು ಮೊದಲು ಆ ಯೋಜನೆಯ ಹಿಂದಿನ ಉದ್ದೇಶ ಏನು ಎಂಬುವುದನ್ನು ತಿಳಿದುಕೊಂಡರೆ ಉತ್ತಮ. ಇನ್ನು ಉನ್ನತ ವ್ಯಾಸಂಗ ವಂಚಿತ ಯುವತಿಯರು ಎಲ್ಲಾ ಸಮುದಾಯದಲ್ಲೂ ಇರುತ್ತಾರೆ ಎನ್ನುವವರಿಗೆ ಆಯಾಯ ಸಮುದಾಯಕ್ಕೆ ಬೇಕಾದ ಅನೇಕ ನಿಗಮ-ಮಂಡಳಿಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆ ನಿಗಮ ಮಂಡಳಿಗಳಲ್ಲಿ ವಿದ್ಯಾರ್ಥಿನಿಯರಿಗೆ ಉಪಯೋಗವಾಗುವ ವಿದ್ಯಾರ್ಥಿ ವೇತನಗಳು ಲಭ್ಯವಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬಹುದು.
ಇನ್ನೊಮ್ಮೆ ಹೇಳುತ್ತೇನೆ. ಮಾಧ್ಯಮಗಳಲ್ಲಿ ಬಂದದ್ದನ್ನೇ ನಿಜಸುದ್ದಿ ಎಂದು ನಂಬಬೇಡಿ. ಈ ಯೋಜನೆ ಕೇಂದ್ರ ಸರ್ಕಾರದ ನೇರ ಯೋಜನೆಯಲ್ಲ. ನಿಮಗೆ ಏನಾದರೂ ಸಂದೇಹಗಳಿದ್ದರೆ ಮೌಲಾನಾ ಆಜಾದ್ ಎಜುಕೇಶನಲ್ ಫೌಂಡೇಶನ್’ನ ವೆಬ್ ಸೈಟಿಗೆ ಹೋಗಿ ಪರಿಹರಿಸಿಕೊಳ್ಳಬಹುದು.
– ರಾಜೇಶ್ ನರಿಂಗಾನ, ಅಕೌಂಟಂಟ್
- Advertisement -
Leave A Reply