ಮಮತಾ ಬ್ಯಾನರ್ಜಿ ಹಿಂದೂ ವಿರೋಧಿ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ?
ವಿಜಯ ದಶಮಿ ದಿನ ಆಯುಧಗಳನ್ನು ಹೊತ್ತು ಮೆರವಣಿಗೆ ಮಾಡುವಂತಿಲ್ಲ…
ಸಿಸ್ಟರ್ ನಿವೇದಿತಾ 150ನೇ ಜನ್ಮದಿನ ಆಚರಿಸುವಂತಿಲ್ಲ…
ಈ ಮಮತಾ ಬ್ಯಾನರ್ಜಿಗೆ ಏನಾಗಿದೆ? ಇವರೇಕೆ ಹಿಂದೂ ವಿರೋಧಿಗಳಂತಾಡುತ್ತಿದ್ದಾಾರೆ? ಬರೀ ಹಿಂದೂಗಳೇ ಏಕೆ ಇವರ ಟಾರ್ಗೆಟ್? ಹಿಂದೂಗಳ ಹಬ್ಬಗಳು ಎಂದರೆ ಇವರಿಗೇಕೆ ಇಷ್ಟು ವೈಷಮ್ಯ? ಈ ವೈಷಮ್ಯ ಬರೀ ವಿಜಯದಶಮಿ, ನಿವೇದಿತಾ ಜನ್ಮದಿನಕ್ಕೆ ಮಾತ್ರ ನಿಲ್ಲುವುದಿಲ್ಲ.
ಕಳೆದ ಫೆ.1ರಂದು ಪಶ್ಚಿಮ ಬಂಗಾಳದ ಹಲವು ಶಾಲೆಗಳಲ್ಲಿ ಸರಸ್ವತಿ ಪೂಜೆ ಏರ್ಪಡಿಸಲಾಗಿತ್ತು. ಮುಸ್ಲಿಿಂ ಧರ್ಮದ ಕೆಲವು ಧರ್ಮಾಂಧರು ಪೂಜೆ ವಿರೋಧಿಸಿ ಹೌರ್ಹಾಾ ಜಿಲ್ಲೆಯ ತೆಹತ್ತಾ ಶಾಲೆಯನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿದರು. ಈ ಹಿಂದೂ ವಿರೋಧಿಗಳೇನೋ ಪೂಜೆಗೆ ಅಡ್ಡಿಯಾದರು ಎಂದರೆ ಅದು ಪಶ್ಚಿಮ ಬಂಗಾಳದಲ್ಲಿ ಅಚ್ಚರಿಯಿಲ್ಲ. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರಕ್ಕೆ ಏನಾಗಿತ್ತು?
ಜನವರಿ 29ರಂದು ಹೌರ್ಹಾ ಜಿಲ್ಲೆಯ ಶಿಕ್ಷಣಾಧಿಕಾರಿಯಿಂದ ಆದೇಶ ಹೊರಡಿಸಿದ ಸರಕಾರ, ಆಡಳಿತದ ಹಲವು ಕಾರಣಗಳಿಂದ ಜಿಲ್ಲೆೆಯ ತೆಹತ್ತಾ ಪ್ರೌಢಶಾಲೆ, ಉಲುಬೆರಿಯಾ ಶಾಲೆಗಳನ್ನು ಮುಚ್ಚಬೇಕು. ಮುಂದಿನ ಆದೇಶದವರೆಗೂ ತರಗತಿ ನಡೆಸುವಂತಿಲ್ಲ ಎಂದು ಫರ್ಮಾನು ಹೊರಡಿಸಿತು.
ಮುಸ್ಲಿಮರು ವಿರೋಧಿಸಿದರು ಎಂಬ ಒಂದೇ ಕಾರಣಕ್ಕೆ ಶಾಲೆಗಳನ್ನು ಮುಚ್ಚಿಸಿದ ಈ ಮಮತಾ ಬ್ಯಾನರ್ಜಿ ಸರಕಾರಕ್ಕೆ ಏನಾಗಿದೆ? ಸರಸ್ವತಿ ಪೂಜೆಯ ದಿನವೇ ಆಡಳಿತಾತ್ಮಕ ತೊಡಕು ಎಂಬ ನೆಪ ಒಡ್ಡಲು ಕಾರಣವೇನು? ಆ ತೊಡಕುಗಳೇನು? ಹಿಂದೂಗಳನ್ನು ಕಂಡರೇನೆ ಉರಿದು ಬೀಳುವ ಕಮ್ಯುನಿಸ್ಟರಿಗೆ 1979ರಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿಸಿದಕ್ಕೆ ಅವರು ಬಾಂಗ್ಲಾದ ನಿರಾಶ್ರಿತರು ಎಂಬ ಕಾರಣವಿತ್ತು. ಆ ಮೇಲೆ ನಡೆದ ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ಮಗುಮ್ಮಾಗಿ ಕುಳಿತ ಕಮ್ಯುನಿಸ್ಟ್ ಸರಕಾರದ ಬದ್ಧತೆ ಎಂಬುದು ಎಲ್ಲರಿಗೂ ಗೊತ್ತು. ಆದರೆ 65 ವರ್ಷಗಳಿಂದ ಆಚರಿಸುತ್ತ ಬರುತ್ತಿರುವ ಸರಸ್ವತಿ ಪೂಜೆಗೆ ಅಡ್ಡಿಯಾಗಿ ಹಿಂದೂವಿರೋಧಿಯಾಗುವ ಅಥವಾ ಹಾಗೆ ಬಿಂಬಿಸಿಕೊಳ್ಳುವ ದರ್ದು ಮಮತಾ ಬ್ಯಾನರ್ಜಿಗೇನಿತ್ತು? ಅಷ್ಟೇ ಅಲ್ಲ, ಸರಸ್ವತಿ ಪೂಜೆಗೆ ಅಡ್ಡಿಯಾದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಗ ಪೊಲೀಸರನ್ನು ಬಿಟ್ಟು ಮಕ್ಕಳೂ ಎಂಬುದನ್ನೂ ಮರೆತು ಲಾಠಿ ಚಾರ್ಜ್‌ಗೆ ಅವಕಾಶ ಮಾಡಿಕೊಟ್ಟದ್ದು ಯಾಕಾಗಿ? ಅಷ್ಟಕ್ಕೂ ಆ ಕಮ್ಯುನಿಸ್ಟ್ ಸರಕಾರಕ್ಕೂ, ಈ ಮಮತಾ ಬ್ಯಾನರ್ಜಿ ಸರಕಾರದ ಆಡಳಿತ ವೈಖರಿಗೆ ಯಾವುದಾದರೂ ವ್ಯತ್ಯಾಸವಿದೆಯೇ?
ಹೌದು, ಕಮ್ಯುನಿಸ್ಟರ ವಿರುದ್ಧ ಹೋರಾಡಿ, ಟಾಟಾ ನ್ಯಾನೋ ಕಾರು ಉತ್ಪಾಾದನೆ ಘಟಕಕ್ಕೆ ಜಮೀನು ಒದಗಿಸುವ ವಿಷಯದಲ್ಲಿ ರೈತರ ಪರ ನಿಂತು, ಎಲ್ಲ ವರ್ಗದವರ ಮತ ಪಡೆದು ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಇದೀಗ ಯು ಟರ್ನ್ ತೆಗೆದುಕೊಂಡು ಮುಸ್ಲಿಿಮರ ಓಲೈಕೆಗೆ ನಿಂತಿದ್ದಾರೆ. ಹಿಂದೂ ವಿರೋಧಿಯಾಗಿ, ಅಲ್ಪ ಸಂಖ್ಯಾತರ ನಾಯಕಿಯಾಗಿ ಬೆಳೆಯುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಂಗಾಳದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರು ಮಾಡುತ್ತಿರುವ ದಾಳಿ, ಹಿಂದೂ ಧರ್ಮದ ಆಚರಣೆಗಳಿಗೆ ವಿರೋಧ, ಅಹಿಂಸೆ, ಹಿಂದೂಗಳ ಮಾರಣ ಹೋಮ, ಇಷ್ಟಾದರೂ ಸುಮ್ಮನಿದ್ದು, ಪರೋಕ್ಷವಾಗಿ ಈ ಕೃತ್ಯಗಳಿಗೆ ಪೋಷಿಸುತ್ತಿರುವ ಮಮತಾ ನಡೆ ಎಲ್ಲರಿಗೂ ಅನುಮಾನ ಮೂಡಿಸುತ್ತಿದೆ.
2015ರ ಮೇ 4ರಂದು ನಾದಿಯಾ ಜಿಲ್ಲೆಯ ನವೋದಾ ಮತ್ತು ಜುರಂಗ್‌ಪುರ ಗ್ರಾಮದ ದಲಿತರು ಪಕ್ಕದ ಜಮಲ್‌ಪುರನಲ್ಲಿ ನಡೆದ ‘ಧರಂ ರಾಜ್ ಮೇಳ’ ಮುಗಿಸಿ ಮನೆಗೆ ಹಿಂತಿರುಗುವಾಗ ಮುಸ್ಲಿಮರು ಬಂದೂಕು, ಮಚ್ಚು ಹಿಡಿದು ದಾಳಿ ಮಾಡಿ ಐವರು ದಲಿತರನ್ನು ಅಟ್ಟಾಡಿಸಿ ಕೊಂದರು. ಇದೇ ವರ್ಷ ಹಲವು ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಸರಸ್ವತಿ ಪೂಜೆ ವಿರೋಧಿಸಿ ಮತ್ತದೇ ಮುಸ್ಲಿಮರು ದಾಳಿ ಮಾಡಿ ಸರಸ್ವತಿ ಮೂರ್ತಿ ಒಡೆದು ಹಾಕಿದ್ದರು. ಇಷ್ಟಾದರೂ ಸರಕಾರ ಮಾತ್ರ ಯಾವುದೇ ಕ್ರಮ ಕೈಗೊಂಡ ಉದಾಹರಣೆಯಿಲ್ಲ.
ಇನ್ನು ಕಳೆದ ವರ್ಷದ ಅಕ್ಟೋಬರ್ 11 ರಂದು ಹೌರ್ಹಾ ಜಿಲ್ಲೆಯ ಅರ್ಗೋರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ದುರ್ಗಾ ಪೂಜೆ ಏರ್ಪಡಿಸಲಾಗಿತ್ತು. ಅಲ್ಲಿಗೆ ಬಂದ ಕೆಲ ಮುಸ್ಲಿಿಂ ಯುವಕರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇಷ್ಟಾದರೂ ಹಿಂಸೆಗೆ ಮುಂದಾಗದ ಹಿಂದೂಗಳು ಮುಸ್ಲಿಮರ ಕೃತ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ತಪ್ಪಿಲ್ಲದೇ ಹೋದರೂ 6 ಹಿಂದೂಗಳನ್ನು ಬಂಧಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಮುಸ್ಲಿಮರು ಹಿಂದೂಗಳ ಅಂಗಡಿಗಳ ಮೇಲೆ ದಾಳಿ ಮಾಡಿ ಸಾಮಾನು ಪುಡಿಗೈದರು. ಅಲ್ಲದೆ ಅಕ್ಟೋಬರ್ 12 ರಂದು ಮೊಹರಂ ಆಚರಣೆ ನೆಪದಲ್ಲಿ ಮುರ್ಷಿದಾಬಾದ್ ಜಿಲ್ಲೆಯ ಖರಗ್‌ಪುರದ ಗೋಲ್‌ಬಜಾರ್ ಮಾರ್ಕೆಟ್ (ಇಲ್ಲಿ ಶೇ.66ರಷ್ಟು ಮುಸ್ಲಿಿಮರಿದ್ದಾರೆ)ನಲ್ಲಿ ಹಿಂದೂಗಳ ಅಂಗಡಿಗಳಿಗೆ ನುಗ್ಗಿ ಎಲ್ಲ ವಸ್ತು ಧ್ವಂಸಗೊಳಿಸಿದ್ದರು. (ಇದೇ ಮಾರ್ಕೆಟ್‌ನಲ್ಲಿ ಸೆಪ್ಟಂಬರ್ 18ರಂದು ರೋಹಿತ್ ತಂತಿ ಎಂಬ ದಲಿತ ಯುವಕನನ್ನು ಮುಸ್ಲಿಮರು ಕೊಲೆ ಮಾಡಿದ್ದರು).
ಉತ್ತರ ಪ್ರದೇಶದ ದಾದ್ರಿಯಲ್ಲಿ ಅನುಮಾನಾಸ್ಪದವಾಗಿ ದಲಿತ ವ್ಯಕ್ತಿಯ ಕೊಲೆಯಾದರೆ ಅದರ ವಿರುದ್ಧ ಸಿಡಿದೇಳುವ, ನೇರವಾಗಿ ಮೋದಿಯನ್ನೇ ಹೊಣೆಗಾರರನ್ನಾಾಗಿ ಮಾಡುವ ಮಮತಾ ಬ್ಯಾಾನರ್ಜಿ ತಮ್ಮ ಸುಪರ್ದಿಯಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ (ಬ್ಯಾನರ್ಜಿಗೆ ವಿಶೇಷವಾಗಿ ಆಸ್ಥೆಯಿರುವ ದಲಿತರೂ ಸೇರಿ) ಮಾರಣ ಹೋಮವಾದರೂ, ಹಿಂದೂಗಳ ಸಾಂಪ್ರದಾಯಿಕ ಆಚರಣೆಗೆ ಅಡ್ಡಿಯಾದರೂ ಎಂದಾದರೂ ಬಾಯ್ಬಿಟ್ಟಿದ್ದಾರೆಯೇ? ಇದೆಂಥ ಜ್ಯಾತ್ಯತೀತತೆ?
-ಶಿವಶರಣ್ ವಾಡೇಕರ್, ಇನ್ಫೋಸಿಸ್ ಉದ್ಯೋಗಿ, ಬೆಂಗಳೂರು
Leave A Reply