ಭಾರತೀಯರೆಲ್ಲರೂ ಹಿಂದೂಗಳೇ: ಮೋಹನ್ ಭಾಗವತ್
ಹರಿದ್ವಾರ: ಪ್ರತೀ ಭಾರತೀಯನ ಮೂಲವೂ ಹಿಂದೂ ಧರ್ಮವೇ, ಎಲ್ಲರೂ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಮೋಹನ್ ಭಾಗವತ್ ಜನ್ಮದಿನದ ಪ್ರಯುಕ್ತ ಪತಂಜಲಿ ಯೋಗಪೀಠದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಯಾವುದೇ ಧರ್ಮದವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವುದಿಲ್ಲ. ದೇಶದ ಎಲ್ಲ ಜನರೂ ಮೊದಲು ಹಿಂದೂಗಳೇ ಆಗಿದ್ದರು ಎಂಬ ನಂಬಿಕೆ ನಮ್ಮದು, ಹಾಗಾಗಿ ಎಲ್ಲರೂ ಹಿಂದೂ ಧರ್ಮವನ್ನೇ ಪ್ರತಿನಿಧಿಸುತ್ತಾರೆ’ ಎಂದಿದ್ದಾರೆ.
ಯಾವ ಧರ್ಮೀಯರೇ ಹಿಂದೂ ಧರ್ಮಕ್ಕೆ ಬರಲು ನಮ್ಮ ಧರ್ಮದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಹಾಗಂತ ಆರ್‌ಎಸ್‌ಎಸ್ ಮತಾಂತರ ಬೆಂಬಲಿಸುತ್ತದೆ ಅಂತಲ್ಲ, ಎಲ್ಲರ ಮೂಲವೂ ಹಿಂದೂ ಆಗಿರುವುದರಿಂದ ಯಾರು ಬೇಕಾದರೂ ಮೂಲ ಧರ್ಮಕ್ಕೆ ಮರಳಬಹುದು ಎಂದು ಹೇಳಿದ್ದಾರೆ.
ಹಾಗೆಯೇ, ಯಾರು ಇನ್ನೊಂದು ಧರ್ಮೀಯರನ್ನು ಸ್ವಧರ್ಮಕ್ಕೆ ಮತಾಂತರಗೊಳಿಸುತ್ತಿದ್ದಾರೋ, ಅವರ ವಿರುದ್ಧ ಮತಾಂತರ ತಡೆ ಕಾಯಿದೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನ್ಮದಿನದ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮದೇವ್ ಮೋಹನ್ ಭಾಗವತ್ ಅವರಿಗೆ ರಾಜದಂಡ ಉಡುಗೊರೆ ನೀಡಿದರು.
Leave A Reply