ಲಿಂಗಾಯತ-ವೀರಶೈವ ಒಂದೇ ಎಂದ ಸಿದ್ಧಗಂಗಾ ಶ್ರೀ, ಸಚಿವ ಎಂ.ಬಿ. ಪಾಟೀಲ್‌ಗೆ ಹಿನ್ನಡೆ
Posted On September 12, 2017

ತುಮಕೂರು: ಸಿದ್ಧಗಂಗಾ ಶ್ರೀ ಅವರ ಹೇಳಿಕೆ ತಿರುಚಿ ಅದನ್ನೇ ರಾಜಕೀಯ ದಾಳವನ್ನಾಗಿಸಿಕೊಂಡು ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಹೊರಟಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ಗೆ ಹಿನ್ನಡೆಯಾಗಿದ್ದು, ‘ಲಿಂಗಾಯತ-ವೀರಶೈವ ಒಂದೇ’ ಎಂದು ತುಮಕೂರಿನ ಸಿದ್ಧಗಂಗಾ ಶ್ರೀ ಹೇಳಿದ್ದಾರೆ.
‘ಲಿಂಗಾಯತ ಹಾಗೂ ವೀರಶೈವ ಎರಡೂ ಒಂದೇ. ಹಾಗಾಗಿ ಒಡೆಯುವ ಕೆಲಸ ಮಾಡಬೇಡಿ’ ಎಂದು ಡಾ.ಶಿವಕುಮಾರ ಸ್ವಾಮೀಜಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಇದರಿಂದ ‘ಸಿದ್ಧಗಂಗಾ ಶ್ರೀಗಳೇ ಪ್ರತ್ಯೇಕ ಧರ್ಮದ ಪರ ನಿಂತಿದ್ದಾರೆ. ಹಾಗಾಗಿ ಧರ್ಮ ಮಾಡಿಯೇ ಸಿದ್ಧ’ ಹೊರಟಿದ್ದ ಸಚಿವ ಎಂ.ಬಿ. ಪಾಟೀಲ್‌ಗೆ ಭಾರಿ ಮುಖಭಂಗವಾಗಿದೆ. ಅಲ್ಲದೆ ಶಿವಕುಮಾರ ಸ್ವಾಮೀಜಿ ಹೇಳಿಕೆ ತಿರುಚಿದ ಆರೋಪವೂ ಕೇಳಿಬಂದಿದೆ.
- Advertisement -
Leave A Reply