ದೇಶ ಸೇವೆ ಮಾಡಲು ಬ್ರಹ್ಮಚರ್ಯಕ್ಕಿಂತಲೂ ದೊಡ್ಡ ತ್ಯಾಗವಿದೆಯೇ?
ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಬ್ರಹ್ಮಚಾರಿಯಾಗಿ ಅಂದರೆ ಮದುವೆಯಾಗದೇ ಹಲವಾರು ಮಂದಿ ತನ್ನ ಇಡೀ ಜೀವನ ದೇಶಕ್ಕೆ ಸಮರ್ಪಿಸಿದ್ದಾರೆ.ಅವರಲ್ಲಿ ಕರ್ನಾಟಕದಲ್ಲಿ ಪ್ರಮುಖವಾಗಿ ಕೇಳಿ ಬರುವ 2 ಹೆಸರು ಸಂತೋಷ್ ಬಿ.ಎಲ್. ಮತ್ತು ಚಕ್ರವರ್ತಿ ಸೂಲಿಬೆಲೆ. ಇಬ್ಬರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿದವರು. ಸಂತೋಷ್ ಬಿ.ಎಲ್. ಈಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರೆ ಚಕ್ರವರ್ತಿ ಸೂಲಿಬೆಲೆ ಯುವಾ ಬ್ರಿಗೇಡ್ ಮಾರ್ಗದರ್ಶಕರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ಮದುವೆ ಸಂಸಾರ ಇದ್ದೂ ದೇಶ ಸೇವೆ ಮಾಡುವವರು ಇದ್ದಾರೆ. ಆದರೆ ದೇಶ ಸೇವೆಗೋಸ್ಕರ ಬ್ರಹ್ಮಚಾರಿಯಾಗಿರುವುದು ಸುಲಭದ ಮಾತೇನಲ್ಲ, ಪ್ರತಿಯೊಬ್ಬರಿಗೂ ಸಾಧ್ಯವಾಗುವುದೂ ಇಲ್ಲ. ಅಂಥವರನ್ನು ಹೆತ್ತ ತಂದ ತಾಯಿಗಳಿಗೂ ಸಲಾಮ್ ಹೊಡಿಯಬೇಕು. ಏಕೆಂದರೆ ಎಲ್ಲ ತಂದೆ ತಾಯಂದಿರು ತಮ್ಮ ವಂಶ ಅಭಿವೃದ್ಧಿಯಾಗಲಿ ಎಂದೇ ಭಗವಂತನ ಬಳಿ ಬೇಡುತ್ತಾರೆ, ಅಂಥದ್ದರಲ್ಲಿ ತನ್ನ ಮಗ ದೇಶ ಸೇವೆಗೋಸ್ಕರ ಸಂಸಾರವನ್ನೇ ತ್ಯಾಗಮಾಡಲು ಅನುಮತಿ ನೀಡುತ್ತಾರೆಂದರೆ ಅವರೂ ಗ್ರೇಟ್ ಅಲ್ಲದೇ ಮತ್ತೇನು. ಹೆಂಡತಿ ಮಕ್ಕಳು ಸಂಸಾರ ಇದ್ದವರಿಗೆ ಒಂದಲ್ಲ ಒಂದು ತಾಪತ್ರಯ ಇದ್ದೇ ಇರುತ್ತದೆ . ಆದರೆ ಎಲ್ಲವನ್ನೂ ತ್ಯಾಗ ಮಾಡಿದವ ಸರ್ವ ಸಂಘ ಪರಿತ್ಯಾಗಿಯಾಗಿರುವ ಸನ್ಯಾಸಿಗೇ ಸಮ.ತಾನು ತಾಯಿ ಭಾರತಿಯ ಸೇವೆ ಸಲ್ಲಿಸಬೇಕಾದರೆ ತನ್ನ ವಯ್ಯಕ್ತಿಕ ಸಮಸ್ಯೆ ಅಡಚಣೆಯಾಗದಿರಲಿ ಎಂಬ ವಿಶಾಲ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡುವುದಿಲ್ಲ. ಆರ್,ಎಸ್,ಎಸ್ ನಲ್ಲಿ ಪಡೆದ ಸಂಸ್ಕಾರದಿಂದ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳತ್ತಾ ಸಂಘದ ಪ್ರಚಾರಕರಾಗಿ ಈಗ ರಾಜಕೀಯ ಪಕ್ಷದ ಜವಾಬ್ದಾರಿ ಸಫಲವಾಗಿ ನಿರ್ವಹಿಸುತ್ತಾ ಚತುರ ಸಂಘಟಕರಾಗಿಯೂ ಉತ್ತಮ ವಾಗ್ಮಿಯೂ ಆಗಿ ಸಂತೋಷ್ ಜೀ ಹೆಸರುಗಳಿಸಿದ್ದಾರೆ.ಹಾಗೆಯೇ ಚಕ್ರವರ್ತಿ ಸೂಲಿಬೆಲೆ ಕೂಡ ಕರ್ನಾಟಕದ ಅತ್ಯತ್ತಮ ಭಾಷಣಕಾರರಾಗಿ, ಅಂಕಣಕಾರರಾಗಿ, ದೇಶ ಭಕ್ತರ ಯುವಾ ಬ್ರಿಗೇಡ್ ಸಂಘಟನೆ ಕಟ್ಟಿ ನಾಡಿನ ಯುವಕ ಯುವತಿಯರಲ್ಲಿ ದೇಶಭಕ್ತಿ ಜಾಗ್ರತಿಗೊಳಿಸುವ ಮೂಲಕ ಕರುನಾಡ ಚಕ್ರವರ್ತಿ ಅನಿಸಿಕೊಳ್ಳುತ್ತಾ ಪ್ರತಿಯೊಬ್ಬರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಈ ಇಬ್ಬರನ್ನು ಬಿಟ್ಟು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು, ಬ್ರಹ್ಮ ಕುಮಾರಿಯ ಹೆಣ್ಣು ಮಕ್ಕಳು ಇನ್ನೂ ಕೆಲವು ಸಂಘ ಸಂಸ್ಥೆಯವರೂ ಬ್ರಹ್ಮಚರ್ಯ ವ್ರತ ಪಾಲಿಸುತ್ತಿದ್ದಾರೆ. ಕಾವಿಧಾರಿಗಳಂತೂ ಸರ್ವಸಂಘ ಪರಿತ್ಯಾಗಿಗಳೇ ಆದರೆ ಕಾವಿ ತೊಡದೆಯೂ ಕೂಡ ಆಜೀವನ ಪರ್ಯಂತ ಬ್ರಹ್ಮಚಾರಿಯಾಗಿರುವುದು ಬಲು ಅಪರೂಪ.
ದೇಶದ ರಾಜಕೀಯ ನಾಯಕರಲ್ಲಿ ಬ್ರಹ್ಮಚರ್ಯ ಪಾಲಿಸಿದವರಲ್ಲಿ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ರಾಹುಲ್ ಗಾಂಧಿ, ಜಯಲಲಿತಾ, ಮಮತಾ ಬ್ಯಾನರ್ಜಿ ಪ್ರಮುಖರು. ತತ್ತ್ವ ಸಿಧ್ಧಾಂತದಲ್ಲಿ ಭಿನ್ನಮತ ಇರಬಹುದು ಆದರೆ ಇವರ ತ್ಯಾಗ ಮರೆಯದಿರೋಣ.
Leave A Reply