ಕ್ರೈಸ್ತ ಇರಲಿ, ಮುಸ್ಲಿಂ ಇರಲಿ, ಸುಷ್ಮಾ ಸ್ವರಾಜ್ ಇರುವಾಗ ಚಿಂತೆಯೇಕೆ?
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಂದರೆ ಬರೀ ವಿದೇಶ ಪ್ರವಾಸ ಕೈಗೊಳ್ಳುವುದು, ವಿದೇಶಿ ಗಣ್ಯರನ್ನು ಭೇಟಿ ಮಾಡುವುದು, ಬೇರೆ ದೇಶಗಳಲ್ಲಿರುವ ಭಾರತೀಯ ರಾಯಭಾರಿಗಳನ್ನು ಸಂಪರ್ಕಿಸುವುದೇ ಅವರ ಕೆಲಸ ಎಂದೇ ಭಾವಿಸಲಾಗಿತ್ತು. ಅಷ್ಟಕ್ಕೂ ಅದೇ ಅವರ ಕೆಲಸವಾಗಿತ್ತು.
ಆದರೆ, ಸುಷ್ಮಾ ಸ್ವರಾಜ್ ಯಾವಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರೋ? ಆಗ ವಿದೇಶಗಳಲ್ಲಿರುವ ಭಾರತೀಯರಿಗೆ ಹೊಸ ಆತ್ಮಸ್ಥೈರ್ಯ ಹೆಚ್ಚಾಗಲು ಆರಂಭವಾಯಿತು. ಭಾರತೀಯರು ಸಂಕಷ್ಟದಲ್ಲಿದ್ದರೆ ಸುಷ್ಮಾ ಧಾವಿಸಲು ಮುಂದಾದರು. ರಕ್ಷಿಸಿದರೂ ಸಹ.
ಕೇರಳದ ಪಾದ್ರಿ ಟಾಮ್ ಯೆಮೆನ್ನಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಸಂಕಷ್ಟದಲ್ಲಿದ್ದರು. ಅಲ್ಲದೆ ಕಳೆದ ಮೇನಲ್ಲಿ ಹರಿದಾಡಿದ ವಿಡಿಯೊದಲ್ಲಿ ನನಗೆ ಯಾರೂ ರಕ್ಷಣೆ ನೀಡುತ್ತಿಲ್ಲ, ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಆದರೆ ಅವರು ಐಸಿಸ್ ಉಗ್ರರಿಂದ ರಕ್ಷಿಸುತ್ತಲೇ, ದೇವರು ದೊಡ್ಡವನು, ನನ್ನನ್ನು ರಕ್ಷಿಸಿದವರಿಗೆ ಧನ್ಯವಾದ ಎಂದರು. ಅದು ಸುಷ್ಮಾ ಸ್ವರಾಜ್ ಅವರಿಗೆ ಭಾರತೀಯರ ಮೇಲಿರುವ ಕಾಳಜಿ.
ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೀಡಾಗಿದ್ದ ಸುಖ್ವಂತ್ ಕೌರ್ ಎಂಬ ಮಹಿಳೆ
ಪಾಕಿಸ್ತಾನದಲ್ಲಿ ಬಲವಂತವಾಗಿ ಮದುವೆಯಾಗಿ ತೊಂದರೆಗೆ ಸಿಲುಕಿದ್ದ ಉಜ್ಮಾ
ಪ್ರಸ್ತುತ ಪಾಕಿಸ್ತಾನದಿಂದ ಬಿಡುಗಡೆಯಾಗಲು ನಿರೀಕ್ಷಿಸುತ್ತಿರುವ ಕುಲಭೂಷಣ್ ಜಾಧವ್…
ಹೀಗೆ ಯಾರೇ ಸಂಕಷ್ಟದಲ್ಲಿದ್ದರೂ ಸುಷ್ಮಾ ಧಾವಿಸುತ್ತಾರೆ. ಉಜ್ಮಾ ಪ್ರಕರಣದಲ್ಲಂತೂ ಸುಷ್ಮಾ “ಆಕೆ ದೇಶದ ಮಗಳು, ರಕ್ಷಿಸುತ್ತೇವೆ’ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದರು. ಕೊನೆಗೆ ಕರೆ ತಂದಾಗ, ಸುಷ್ಮಾ ವಿಮಾನ ನಿಲ್ದಾಣಕ್ಕೇ ಹೋಗಿ ಅವರನ್ನು ಸ್ವಾಗತಿಸಿದ್ದರು. ಅಂದು ಉಜ್ಮಾ ಕಣ್ಣಾಲಿಗಳಲ್ಲಿ ನೀರಿದ್ದವು. ಕುಲಭೂಷಣ್ ಜಾಧವ್ ಪ್ರಕರಣದಲ್ಲಂತೂ ಸುಷ್ಮಾ ಮಾಡದ ಪ್ರಯತ್ನವಿಲ್ಲ. ಜಾಧವ್ ಅವರಿಗೆ ಕಾನ್ಸುಲರ್ ಅನುಮತಿ ನೀಡಬೇಕು ಎಂದು ಹಲವು ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಿದರು. ಪಾಕಿಸ್ತಾನ ಇದಕ್ಕೆ ಮಣಿಯಲ್ಲ ಅಂದಾಗ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದರು. ಅಲ್ಲೂ, ಪಾಕಿಸ್ತಾನಕ್ಕೆ ಹಿನ್ನಡೆ ಆಗುವಂತೆ ಮಾಡಲು ಹರೀಶ್ ಸಾಳ್ವೆ ಎಂಬ ಧೀಮಂತ ವಕೀಲರನ್ನು ನೇಮಿಸಿದರೂ. ದೇಶದ ದುಬಾರಿ ವಕೀಲ ಸಾಳ್ವೆ ಇದಕ್ಕೆ ತೆಗೆದುಕೊಂಡಿದ್ದು ಬರೀ ಒಂದು ರುಪಾಯಿ ಶುಲ್ಕ. ದುಡ್ಡಿನ ಮಾತು ಒತ್ತಟ್ಟಿಗಿರಲಿ, ಇಲ್ಲಿ ಸುಷ್ಮಾ ಅಂತಃಕರಣ ನೆನೆಯಲೇಬೇಕು.
ಸುಷ್ಮಾ ಸ್ವರಾಜ್ ಸಚಿವೆಯಾದ ಮೇಲೆ ಇದುವರೆಗೆ 80 ಸಾವಿರಕ್ಕೂ ಅಧಿಕ ಜನರನ್ನು ನಾನಾ ದೇಶಗಳಿಂದ ರಕ್ಷಣೆ ಮಾಡಿದ್ದಾರೆ. ಮಹಿಳೆಯಾಗಿಯೂ ದೊಡ್ಡ ಹಾಗೂ ಜವಾಬ್ದಾರಿಯುತ ಸಚಿವಾಲಯವನ್ನು ದಕ್ಷವಾಗಿ ನಿಭಾಯಿಸಿದ್ದಾರೆ. 2014ರಲ್ಲಿ ಕೇವಲ 77 ಇದ್ದ ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಈಗ 251 ಆಗಿವೆ. ನಮ್ಮ ಮೈಸೂರಿಗೂ ಸಂಸದ ಪ್ರತಾಪ್ ಸಿಂಹ ಮನವಿ ಮೇರೆಗೆ ಒಂದು ಪಾಸ್ ಪೋರ್ಟ್ ಸೇವಾ ಕೇಂದ್ರ ಲಭಿಸಿದೆ. ಬಿಜೆಪಿಯವರಿಗೆ ಕೋಮುವಾದಿಗಳು ಎಂದು ಹುರುಳಿಲ್ಲದ ಆರೋಪ ಮಾಡುವ ಕುತ್ಸಿತ ಮನಸ್ಸುಗಳಿವೆ. ಆದರೆ ಮುಸ್ಲಿಂ ಇರಲಿ, ಕ್ರೈಸ್ತರಿರಲಿ ಸುಷ್ಮಾ ಮಾತ್ರ ತಾಯಿಯಂತೆ ರಕ್ಷಣೆಗೆ ಮುಂದಾಗುತ್ತಾರೆ. ಕುಡೋಸ್ ಟು ಸುಷ್ಮಾ ಸ್ವರಾಜ್.
Leave A Reply