ನೀವೂ ವಂಶ ರಾಜಕಾರಣದ ಫಲಾನುಭವಿಯೇ ಅಲ್ಲವೇ ರಾಹುಲ್ ಗಾಂಧಿ?
ಇದ್ದಿಲು ಮಸಿಗೆ ಹೇಳಿತ್ತಂತೆ, ನೀನು ಕಪ್ಪು ಎಂದು…
ರಾಹುಲ್ ಗಾಂಧಿ ಅವರು ಮಂಗಳವಾರ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಿಂತು ಉಲಿದ ಮಾತು ಹೀಗಿದೆ, “ಭಾರತದಲ್ಲಿ ವಂಶರಾಜಕಾರಣದಿಂದ ರಾಜಕೀಯ ಅರಾಜಕತೆಯಂಥ ವಾತಾವರಣ ಸೃಷ್ಟಿಯಾಗಿದೆ’.
ಈ ಮಾತು ಕೇಳಿಯೇ, ಮೇಲಿನ ಉಕ್ತಿ ನೆನಪಾಗಿದ್ದು…
ನಿಜ ರಾಹುಲ್ ಗಾಂಧಿ ಅವರ ಮಾತುಗಳನ್ನು ದೇಶದ ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಹಾಗಂತ ರಾಹುಲ್ ಗಾಂಧಿ ಏನು ಬೇಕಾದರೂ ಮಾತನಾಡಬಹುದೆ? ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಹೀಗೆ ಮಾತನಾಡಿಯೂ, ಯಾರ ಮರ್ಯಾದೆ ಹೋಯಿತು ಹೇಳಿ? ಅಷ್ಟಕ್ಕೂ ರಾಹುಲ್ ಗಾಂಧಿ ವಂಶರಾಜಕಾರಣದ ಫಲಾನುಭವಿಯೇ ಅಲ್ಲವೇ?
ಮೋತಿ ಲಾಲರ ಪ್ರಭಾವಿಯಿಂದ ಬಂದ ಜವಾಹರ ಲಾಲ್ ನೆಹರೂ ದೇಶದ ಪ್ರಧಾನಿಯಾದರೂ. ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದ ಬಳಿಕ ನೆಹರೂ ಪುತ್ರಿ ಎಂಬ ಕಾರಣಕ್ಕಾಗಿಯೇ ಇಂದಿರಾ ಗಾಂಧಿ ಪ್ರಧಾನಿಯಾದರು. ಇಂದಿರಾ ಪುತ್ರನಾಗಿದ್ದಕ್ಕೇ, ಎಲ್ಲೋ ಪೈಲಟ್ ಆಗಿದ್ದ ರಾಜೀವ್ ಗಾಂಧಿ ದೇಶದ ಚುಕ್ಕಾಣಿ ಹಿಡಿದರು. ಸಂಜಯ್ ಗಾಂಧಿಯೂ ರಾಜಕೀಯದ ಪಡಸಾಲೆಯಲ್ಲಿ ಹೊರಳಾಡಿದರು. ಇಂದಿರಾ ಸೊಸೆ ಎಂಬ ಕಾರಣಕ್ಕಾಗಿಯೇ, ಸೋನಿಯಾ ಕಾಂಗ್ರೆಸ್ ಅಧಿನಾಯಕಿಯಾದರು. ಇನ್ನು ಇಷ್ಟೆಲ್ಲ ಮಾತನಾಡುವ ರಾಹುಲ್ ಗಾಂಧಿ ಸೋನಿಯಾ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕಾಗಿಯೇ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ. ಅದೇ ಕಾರಣಕ್ಕೇ ಮುಂದಿನ ಚುನಾವಣೆಯಲ್ಲಿ ನಾಯಕತ್ವ ವಹಿಸಲು ಸಿದ್ಧ ಎಂದಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದರಲ್ಲಿ ನಿಜ. ವಂಶ ರಾಜಕಾರಣದ ಪ್ರಭಾವದಿಂದಲೇ ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ನೆಹರೂ ಹಗರಣದ ಜನಕರಾದರು. ರಾಜೀವ್ ಗಾಂಧಿ ಬೊಫೋರ್ಸ್ ಹಗರಣದ ಉಡುಗೊರೆ ನೀಡಿದರು. ಸೋನಿಯಾ ಗಾಂಧಿ ಹಿಂಬಾಗಿಲಿನಿಂದಲೂ ದೇಶವನ್ನು ಆಳಬಹುದು ಎಂದು ತೋರಿಸಿದರು. ಕೊನೆಗೆ ರಾಹುಲ್ ಗಾಂಧಿ ವಂಶರಾಜಕಾರಣದ ಕುಡಿಯಾಗಿಯೂ ದೇಶದ ಜನರ ಎದುರು ಜೋಕರ್ ಎನಿಸಿದ್ದಂತೂ ಸುಳ್ಳಲ್ಲ.
ಆದರೆ, ವಿದೇಶಿ ವಿವಿ ವಿದ್ಯಾರ್ಥಿಗಳ ಎದುರು ಭಾರತದ ಘನತೆ ಎತ್ತಿ ಹಿಡಿಯಬೇಕಿದ್ದ ರಾಹುಲ್ ಗಾಂಧಿ, ದೇಶದ ಮರ್ಯಾದೆ ಕಳೆಯಲು ವಿಫಲ ಯತ್ನ ಮಾಡಿದ್ದು ದುರಂತ. ಬಡವನ ಮನೆಯಲ್ಲಿ ಹುಟ್ಟಿದ ಲಾಲ್ ಬಹದ್ದೂರ್ ಶಾಸ್ತ್ರಿ ಈ ದೇಶದ ಪ್ರಧಾನಿಯಾಗಲಿಲ್ಲವೇ? ಅವರು ನಿಮ್ಮ ಕಾಂಗ್ರೆಸ್ಸಿನವರೇ ಅಲ್ಲವೇ? ರಾಜ್ಯದ ದೇವೇಗೌಡರು, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಪ್ರಣಬ್ ಮುಖರ್ಜಿ, ರಾಮನಾಥ ಕೋವಿಂದ್, ವೆಂಕಯ್ಯ ನಾಯ್ಡು ವಂಶರಾಜಕಾರಣದ ಹಿನ್ನೆಲೆಯಿರದಿದ್ದರೂ ದೇಶದ ರಾಜಕೀಯದಲ್ಲಿ ಛಾಪು ಮೂಡಿಸಿಲ್ಲವೇ? ಇದೇಕೆ ರಾಹುಲ್ ಗಾಂಧಿಗೆ ಹೇಳಬೇಕು ಎನಿಸಲಿಲ್ಲ?
ಆದರೂ, ನಿಮ್ಮಂಥ ವಂಶರಾಜಕಾರಣದ ಕುಡಿಗಳಿಂದ ಬೇಸತ್ತೇ ಅಲ್ಲವೇ, ನಿಮ್ಮನ್ನು ತಿರಸ್ಕರಿಸಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿಸಿದ್ದು. ಇನ್ನಾದರೂ ದೇಶದ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಿ.
Leave A Reply