ಹಿಂದುತ್ವ ಎಂಬುದು ಉಡುಪು, ಆಹಾರದ ಸಂಕೇತವಲ್ಲ: ಭಾಗವತ್
Posted On September 13, 2017
0
ದೆಹಲಿ: ದೇಶದಲ್ಲಿ ಗೋಮಾಂಸ ಮಾರಾಟದ ವಿರುದ್ಧ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ ಬಳಿಕ ನರೇಂದ್ರ ಮೋದಿ ಹಿಂದುತ್ವ ಸಿದ್ಧಾಂತ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ‘ಉಡುಪು, ಆಹಾರ ಹಿಂದುತ್ವದ ಸಂಕೇತವಲ್ಲ’ ಎಂದು ಆರೆಸ್ಸೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ದೆಹಲಿಯಲ್ಲಿ ಸುಮಾರು 50 ದೇಶಗಳ ರಾಯಭಾರಿಗಳ ಜತೆ ನಡೆಸಿದ ಮಾತುಕತೆ ವೇಳೆ, ‘ಹಿಂದುತ್ವ ಎಂಬುದು ಯಾವುದೇ ವ್ಯಕ್ತಿ ಏನು ಧರಿಸುತ್ತಾನೆ, ಯಾವುದನ್ನು ಸೇವಿಸುತ್ತಾನೆ ಎಂಬುದನ್ನು ಅವಲಂಬಿಸಿಲ್ಲ’ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಅಂತರ್ಜಾಲದಲ್ಲಿ ವೈಯಕ್ತಿಕ ಟೀಕೆಗಳು ಜಾಸ್ತಿಯಾಗುತ್ತಿವೆ. ಸಿದ್ಧಾಂತಗಳ ಭಿನ್ನಾಭಿಪ್ರಾಯ ಇಟ್ಟುಕೊಂಡಿರುವ ಜನ, ಇದನ್ನು ವಿರೋಧಿಸುವ ಭರದಲ್ಲಿ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ಅಶ್ಲೀಲ ಪದ ಬಳಕೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









