ಜಿಗ್ನೇಶ್ ತಂದೆ ಯಾರು ಎಂದು ಅವರ ತಾಯಿಯನ್ನು ಪ್ರಶ್ನಿಸೋಣ!
ಜಿಗ್ನೇಶ್ ತಂದೆ ಯಾರು ಎಂದು ಅವರ ತಾಯಿಯನ್ನು ಪ್ರಶ್ನಿಸೋಣ ಎಂದು ಹೇಳಿದರೆ ಸರಿಯಾಗುತ್ತಾ? ಜಿಗ್ನೇಶ್ ನನ್ನು ಯಾಕೆ ಹುಟ್ಟಿಸಿದಿರಿ ಎಂದು ಕೇಳುವುದು ಪ್ರಬುದ್ಧತೆನಾ? ಜಿಗ್ನೇಶ್ ತಂದೆಯ ಎದೆಯ ಮೇಲೆ ಕುಳಿತು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದರೆ ಆಗುತ್ತಾ? ಇದೆಲ್ಲ ಹೋಗಲಿ ಜಿಗ್ನೇಶ್ ನಿನ್ನ ತಂದೆ ಯಾರು ಎಂದು ನಿನಗೆ ಗ್ಯಾರಂಟಿ ಉಂಟಾ ಹೀಗೆ ಏನೇನೋ ಕೇಳಲು ನಾನೇನು ಜಿಗ್ನೇಶ್ ಮೇಮಾನಿ ಅಲ್ಲ. ನಾಲ್ಕು ಚಪ್ಪಾಳೆ, ಎರಡು ಸಿಳ್ಳೆ ಸಿಗುತ್ತದೆ ಎಂದಾದರೆ ಯಾರ ತಾಯಿಯ ವಿಷಯಕ್ಕೂ ಕೈ ಹಾಕುವಷ್ಟು ಚೀಪ್ ಮೆಂಟಾಲಿಟಿ ಭಾಷಣಕಾರರಿಗೆ ಇರಲೇಬಾರದು.
ಗೌರಿ ಲಂಕೇಶ್ ಹತ್ಯೆ ಮಾಡಿಸಲು ಮೋದಿ ಸ್ವತ: ಸುಫಾರಿ ಕೊಟ್ಟಂತೆ ಮಾತನಾಡುವ ಎಡಪಂಥಿಯರಿಗೆ ಅಪ್ಪಿ ತಪ್ಪಿ ಇಲ್ಲಿ ಇರುವ ಸರಕಾರ ಯಾರದ್ದು ಎಂದು ನೆನಪಿಗೆ ಬರುವುದಿಲ್ಲ. ಒಂದು ವೇಳೆ ಇಲ್ಲಿ ರಾಜ್ಯ ಸರಕಾರ ಬಿಜೆಪಿಯಾಗಿ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇದ್ದಿದ್ದರೆ ಆಗ ಇವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ರಾಜ್ಯ ಸರಕಾರ ತಕ್ಷಣ ವಿಸರ್ಜನೆಯಾಗಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈಗ ಇವರಿಗೆ ಅದು ಸಾಧ್ಯವಿಲ್ಲವಾದ್ದರಿಂದ ಜಿಗ್ನೇಶ್ ನಂತವರ ಬಾಯಲ್ಲಿ ಮೋದಿಯಂತಹ ನಾಲಾಯಕ್ ಗೆ ಯಾಕೆ ಜನ್ಮ ಕೊಟ್ಟಿರಿ ಎಂದು ಎನ್ನುವ ಮಾತು ಹೊರಗೆ ಬರುತ್ತದೆ. ಅದೇ ರೀತಿಯಲ್ಲಿ ಬೇರೆಯಾದರೂ ಜಿಗ್ನೇಶ್ ನಂತಹ ನಾಲಾಯಕ್ ಗೆ ಯಾಕೆ ಜನ್ಮ ಕೊಟ್ಟಿರಿ ಎಂದು ಅವರ ತಾಯಿಯನ್ನು ಕೇಳಬೇಕು ಎಂದು ಹೇಳಿದರೆ ಏನಾಗುತ್ತದೆ.
ಗೌರಿ ಲಂಕೇಶ್ ನಿಸ್ಸಂದೇಹವಾಗಿ ಎಡಪಂಥಿಯರು. ಪತ್ರಕರ್ತರಿಗೆ ಧರ್ಮ ಇರಬಾರದು ಎನ್ನುತ್ತಾರೆ. ಅವರು ಯಾರು ತಪ್ಪು ಮಾಡಿದರೂ ಬರೆಯಬೇಕು ಎನ್ನುವುದು ಪತ್ರಿಕೋದ್ಯಮದ ಧರ್ಮ. ಆದರೆ ಗೌರಿ ಹಟಕ್ಕೆ ಬಿದ್ದವಳಂತೆ ಸಂಘ ಪರಿವಾರ, ಮಠಾಧೀಶರಿಗೆ, ದೇವಸ್ಥಾನಗಳಿಗೆ ವಿರುದ್ಧವಾಗಿ ಬರೆದಳು. ಯಾವಾಗ ಒಂದು ಪತ್ರಿಕೆ ಅಥವಾ ಪತ್ರಕರ್ತ ಕುದುರೆ ಕಣ್ಣಿಗೆ ಪಟ್ಟಿ ಕಟ್ಟಿದವನಂತೆ ಒಂದೇ ಕಡೆ ನೋಡಿ ಓಡುತ್ತಿದ್ದರೆ ಅವನಿಗೆ ಬೇರೆ ಕಾಣುವುದಿಲ್ಲ. ಅವನ ಪತ್ರಿಕೆ ಒಂದು ಮನಸ್ಥಿತಿಗೆ ಬ್ರಾಂಡ್ ಆಗುತ್ತದೆ. ಅದನ್ನು ಅವನ ಒರಗೆಯವರು ಕೂಡ ಓದುವುದಿಲ್ಲ. ಯಾಕೆಂದರೆ ಅವರಿಗೆ ಗೊತ್ತು. ಅದರಲ್ಲಿ ಏನಿರುತ್ತೆ ಅಂತ. ಗೌರಿಯ ಲಂಕೇಶ್ ಪತ್ರಿಕೆಯಲ್ಲಿ ಏನಿರುತ್ತೆ ಎಂದು ಯಾರಾದರೂ ದೂರದಿಂದ ಹೆಡ್ಡಿಂಗ್ ನೋಡಿಯೇ ಒಳಗಿನ ಸಾರವನ್ನು ಅರಿತುಕೊಳ್ಳಬಹುದಿತ್ತು. ಅದೊಂದು ಎಡಪಂಥಿಯರಿಗೆ ಕರಪತ್ರವಾಯಿತೇ ವಿನ: ಪತ್ರಿಕೆಯಾಗಿ ಉಳಿದಿರಲಿಲ್ಲ.
ಈಗ ಆಕೆಯ ಕೊಲೆಯಾಗಿರುವುದರಿಂದ ಎಡಪಂಥಿಯರಿಗೆ ಅದನ್ನು ಮೋದಿ, ಭಾಗವತ್ ಮಾಡಿಸಿರಬೇಕು ಎಂದು ಗ್ಯಾರಂಟಿ. ನಿಜ ಹೇಳಬೇಕಾದರೆ ಗೌರಿ ಲಂಕೇಶ್ ನಂತವರು ಸಾಯಬಾರದು. ಅದರಲ್ಲಿಯೂ ಮೋದಿ, ಭಾಗವತ್ ಎಲ್ಲಾ ಕೆಲಸ ಬಿಟ್ಟು ಗೌರಿ ಹತ್ಯೆಗೆ ಸಂಚು ಹೂಡುತ್ತಾರೆ ಎಂದು ಜಿಗ್ನೇಶ್ ಅಂದುಕೊಳ್ಳುತ್ತಾರಲ್ಲ, ಇವರಿಗೆ ಯಾವ ತಿಗಣೆ ಕಚ್ಚಿರಬೇಕು. ಭವಿಷ್ಯದಲ್ಲಿ ಪೊಲೀಸ್ ತನಿಖೆಯಿಂದ ಸತ್ತದ್ದು ಬೇರೆ ಕಾರಣಕ್ಕೆ ಅಥವಾ ಹಿಂದೂತ್ವಕ್ಕೆ ಸಂಬಂಧವೇ ಇರದ ಸಂಘಟನೆಗಳು ಎಂದು ವರದಿ ಬಂದರೂ ಇದೇ ಎಡಪಂಥಿಯರು ಏನು ಹೇಳುತ್ತಾರೆಂದರೆ ವರದಿಯನ್ನು ಮೋದಿ ತಿರುಚಿರಬೇಕು. ಆದ್ದರಿಂದ ಗೌರಿ ಪ್ರಕರಣದಲ್ಲಿ ಏನೇ ಆದರೂ ಅವರಿಗೆ ಮೋದಿ ಕಾಣ್ತಾರೆ ಮತ್ತು ಮೋದಿಯವರ ತಾಯಿ ಕಾಣ್ತಾರೆ. ದಿನಕ್ಕೆ 19 ರಿಂದ 20 ಗಂಟೆ ದೇಶಕ್ಕಾಗಿ ದುಡಿಯುವ ಮೋದಿಯವರನ್ನು ಹೆತ್ತ ಆ ತಾಯಿಯ ಬಗ್ಗೆ ಮಾತನಾಡುವ ಯೋಗ್ಯತೆ ಜಿಗ್ನೇಶ್ ಅವರಿಗೆ ಬರಬೇಕಾದರೆ ಇವರು ಇನ್ನು ನೂರು ಜನ್ಮ ತಾಳಿದರೂ ಸಾಧ್ಯವಿಲ್ಲ.
ಇನ್ನು “ನಾನು ಗೌರಿ” ಎನ್ನುವ ಪ್ರತಿಭಟನೆ ಮಾಡಲು ಹನ್ನೊಂದು ಲಕ್ಷ ರೂಪಾಯಿ ಖರ್ಚು ಇದೆ, ಅದಕ್ಕೆ ಡೋನೇಶನ್ ನೀಡಿ ಎಂದು ಎಡಪಂಥಿಯರು ಬ್ಯಾಂಕ್ ಅಂಕೌಂಟ್ ಮಾಡಿ ಅದಕ್ಕೆ ಹಣ ಕಳುಹಿಸಲು ಕೇಳಿಕೊಂಡಿದ್ದರು. ಅದೇ ಮೊನ್ನೆ ಇವರ ಕಾಂಗ್ರೆಸ್ ಪಕ್ಷ ಕಲ್ಲಡ್ಕದ ಎರಡು ಶಾಲೆಗಳಿಗೆ ಊಟ ಮತ್ತು ಇತರ ನೆರವನ್ನು ನಿಲ್ಲಿಸಿದಾಗ ಬಿಜೆಪಿಯ ಶೋಭಾ ಕರಂದ್ಲಾಜೆ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದಾಗ ಅದು ನಾಟಕ ಎಂದು ಜರಿದವರು ಇದೇ ಎಡಪಂಥಿಯರು. ಇವರು ಹಣ ಕೇಳಿದರೆ ಅದು ರಾಯಲ್ ಭಿಕ್ಷಾಟನೆ. ಬಿಜೆಪಿಯವರು ಮಾಡಿದ್ರೆ ಅದು ಗಿಮಿಕ್ ಅಲ್ಲವಾ ಜಿಗ್ನೇಶ್ ಮತ್ತು ಗೌರಿ ಲಂಕೇಶ್ ಅವರ ಗೆಳೆಯ, ಗೆಳತಿಯರೇ.
Leave A Reply