ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ: ಇಂಥಾ ಮಸೂದೆ ದೇಶಾದ್ಯಂತ ಜಾರಿಯಾಗಲಿ
-ನಿರಂಜನ್ ದೇಶಪಾಂಡೆ, ಮಂಗಳೂರು
ಇತ್ತೀಚೆಗೆ ಜಾರ್ಖಂಡ್ ಸಹ ಕೇರಳದಂತೆ ಮಾರ್ಪಾಡು ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಲ್ಲಲ್ಲಿ ಮತಾಂತರದ ಕುರುಹುಗಳು, ಕ್ರೈಸ್ತ ಪಾದ್ರಿಗಳ ಉಪಟಳದ ಬಗ್ಗೆ ಸುದ್ದಿಯಾಗಿತ್ತಿತ್ತು.
ಜಾರ್ಖಂಡ್‌ನಂಥ ರಾಜ್ಯದಲ್ಲಿ ಇಂಥ ಮಸೂದೆ ಬೇಕಿತ್ತು…
ಆದರೆ ಈಗ, ಬಹುವರ್ಷಗಳಿಂದ ಜಾರಿಗೆ ತರಬೇಕು ಎಂಬ ಕನಸು ನನಸಾಗಿದೆ. ಕಳೆದ ವಾರ ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ ಅರ್ಥಾತ್ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್(2017)’ಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಆ ಮೂಲಕ ಮತಾಂತರದಂಥ ಕೃತ್ಯಗಳಲ್ಲಿ ತೊಡಗುವವರಿಗೆ ಶಿಕ್ಷೆ ವಿಧಿಸಲು ಈ ಅಸ್ತ್ರ ಬಳಸಲು ಸರಕಾರ ಸಿದ್ಧವಾಗಿದೆ ಎಂಬುದನ್ನು ಮುಖ್ಯಮಂತ್ರಿ ರಘುಬರ್ ದಾಸ್ ಪರೋಕ್ಷವಾಗಿ ಘೋಷಿಸಿದ್ದಾರೆ.
ಇದು ಬುಡಕಟ್ಟು, ದಲಿತ ಸಮುದಾಯದವರನ್ನು ಹಣಕಾಸು, ಶಿಕ್ಷಣ ಸೇರಿ ಹಲವು ಸೌಲಭ್ಯಗಳ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದ ಕ್ರೈಸ್ತರಿಗೆ ನುಂಗಲಾರದ ತುತ್ತಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.4.3ರಷ್ಟಿರುವ ಕ್ರೈಸ್ತ ಧರ್ಮಿಯರು ಉಗುಳು ನುಂಗುವಂತಾಗಿದೆ.
ಇದೇ ಕಾರಣಕ್ಕೆೆ, ಕ್ಯಾಾಥೋಲಿಕ್ ಪಂಥದ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಸೂದೆ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಆದಾಗ್ಯೂ, ಹಲವು ಕುತ್ಸಿತ ಮನಸ್ಸುಗಳು ಮಸೂದೆ ಅಂಗೀಕಾರದ ವಿರುದ್ಧ ಶನಿವಾರ ಪ್ರತಿಭಟನೆ ಮುಂದಾಗಿವೆ.
ಏಕೆ?
ಹೇಳಿ, ಮತಾಂತರ ವಿರೋಧಿ ಕಾಯಿದೆ ಜಾರಿಗೊಳಿಸಿದರೆ ಇವರಿಗೇಕೆ ಉರಿಯಬೇಕು? ಇವರೇಕೆ ಪ್ರತಿಭಟನೆ ಮಾಡಬೇಕು? ಅಷ್ಟಕ್ಕೂ ಮತಾಂತರ ಮಾಡುವುದೇ ಈ ಕ್ರಿಿಸ್ತರ ಕಾಯಕವಾ? ಮಸೂದೆ ಅಂಗೀಕಾರ ತಪ್ಪೇ?
ಒಡಿಶಾದಲ್ಲಿ 1967ರಲ್ಲೇ ಈ ಕಾಯಿದೆ ಜಾರಿಗೆ ತರಲಾಗಿದೆ. ಅಷ್ಟೇ ಏಕೆ, ಮಧ್ಯಪ್ರದೇಶದಲ್ಲಿ 1968, ಗುಜರಾತ್‌ನಲ್ಲಿ 2003, ಛತ್ತೀಸ್‌ಗಡದಲ್ಲಿ 2006ರಲ್ಲಿ ಇಂಥ ಮಸೂದೆ ಜಾರಿಗೆ ತರಲಾಗಿದೆ. ಮಸೂದೆ ವಿರೋಧಿಸುತ್ತಿರುವ ಕಾಂಗ್ರೆಸ್ಸೇ 2006ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕರಿಸಿದೆ.
ಹೀಗಿರುವಾಗ, ಜಾಖರ್ಂಡ್‌ನಲ್ಲಿ ಬಿಜೆಪಿ ಸರಕಾರ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್ ಜಾರಿಗೊಳಿಸಿದೆ. ಅದರಲ್ಲಿ ತಪ್ಪೇನು? ಇದರಿಂದ ಅಂತೂ ಯಾರಿಗೂ ಅನ್ಯಾಯವಾಗುವುದಿಲ್ಲ. ಬದಲಾಗಿ ಕ್ರೈಸ್ತರ ಉಪಟಳ ಕಡಿಮೆಯಾಗುತ್ತದೆ. ಜೀಸಸ್ ಹೆಸರಲ್ಲಿ ಮತಾಂತರಗೊಳಿಸುವುದು ನಿಲ್ಲುತ್ತದೆ. ಇಲ್ಲವಾದರೆ ಪ್ರತಿಯೊಂದು ರಾಜ್ಯವೂ ಕೇರಳವಾಗುತ್ತದೆ. ಹಾಗಾಗಿ ಇಂಥ ಮಸೂದೆ ದೇಶಾದ್ಯಂತ ಜಾರಿಯಾಗಲಿ.
Leave A Reply