ಪಾತಕಿ ದಾವೂದ್ ಇಬ್ರಾಹಿಂ ಸೋದರ ಕಸ್ಕರ್ ಬಂಧನ
Posted On September 19, 2017
0

ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಿರಿಯ ಸೋದರ ಇಕ್ಬಾಲ್ ಕಸ್ಕರ್‍ನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈತ ಮುಂಬೈ ಹಾಗೂ ದೆಹಲಿಯ ಹಲವೆಡೆ ಹಣ ವಸೂಲಿಗೆ ಬೆದರಿಕೆ ಹಾಕಿದ್ದ ದೂರು ಬಂದ ಹಿನ್ನೆಲೆ ಕಸ್ಕರ್ ಬಂಧನವಾಗಿದೆ. ಥಾಣೆಯ ವಸೂಲಿ ತಡೆ ವಿಶೇಷ ಘಟಕ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಕಸ್ಕರ್ ಅನೇಕ ಬಿಲ್ಟರ್ ಜೊತೆಗೆ ಕೈಮಿಲಾಯಿಸಿ ತನ್ನ ಅಣ್ಣನ ಹೆಸರನ್ನು ಬಳಸಿಕೊಂಡು ವಸೂಲಿ ಮಾಡುತಿದ್ದ.
ವಿಶೇಷ ಘಟಕಕ್ಕೆ ಕಳೆದ ತಿಂಗಳು ವರ್ಗಾವಣೆಯಾದ ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಈತನ ಮೇಲೆ ಒಂದು ಕಣ್ಣಿಟ್ಟಿದ್ದರು. ದೊಂಬಿವಲಿ, ಥಾಣೆ ಮತ್ತು ಉಲ್ಲಾಸ್‍ನಗರ ಬಿಲ್ಡರ್‍ಗಳಿಂದ ದೂರು ಸಲ್ಲಿಕೆಯಾದ ಹಿನ್ನೆಲೆ ತನಿಖೆ ಕೈಗೆತ್ತಿಕೊಂಡು ಬಂಧನ ಮಾಡಿದ್ದಾರೆ. ಮಂಗಳವಾರ ಕಸ್ಕರ್‍ನನ್ನು ಕೋರ್ಟ್‍ಗೆ ಹಾಜರುಪಡಿಸಲಾಗುವುದು.