ತಿರುಪತಿ ವೆಂಕಟಗೆ ಕಾದಿದೆ ಭೂಕಂಪದ ಸಂಕಟ!
ಹೈದ್ರಾಬಾದ್ : ಸಂಕಟ ಬಂದಾಗ ವೆಂಕಟರಮಣ ಎಂಬ ರೂಢಿಯ ಮಾತಿದೆ. ಆದರೆ ಆ ವೆಂಕಟನನ್ನು ಕಾಣಲು ಹೋದಾಗಲೇ ಮಹಾಸಂಟಕ ಎದುರಾದರೆ ? ಹೌದು ರೂರ್ಕಿ ಐಐಟಿ ವಿದ್ಯಾರ್ಥಿಗಳು ಭೂಗರ್ಭಗಳ ಅಧ್ಯಯನ ನಡೆಸುತ್ತಿರುವಾಗ ಇಂಥದೊಂದು ಆಘಾತಕಾರಿ ಅಂಶ ಬಯಲಿಗೆ ಬಂದಿದೆಯಂತೆ.
ತಿಮ್ಮಪ್ಪನ ಸನ್ನಿಧಿ ಅಲ್ಲೋಲಕಲ್ಲೋ!.
ತಿರುಮಲ ಬೆಟ್ಟದ ಕೆಳಗಿನ ಟೆಕ್ಟೊನಿಕ್ ಪದರಗಳು ತೀವ್ರ ಚಲನೆ ಆರಂಭಿಸಿದ್ದು, ಒಂದು ವೇಳೆ ಪರಸ್ಪರ ಜೋರಾಗಿ ಢಿಕ್ಕಿಯಾದರೆ ತಿರುಮಲ ಅಲ್ಲಾಡಲಿದೆ ಎಂದು ಸಂಶೋಧನೆ ವರದಿ ಎಚ್ಚರಿಸಿದೆ. ಅಲ್ಲಿ ಮಾತ್ರವಲ್ಲ ತಮಿಳುನಾಡಿನ ತರಂಗಂಬಾಡಿ, ಪಲಾರ್‍ಗಳಲ್ಲಿಯೂ ಟಕ್ಟೊನಿಕ್ ಪದರಗಳ ಚುರುಕಾದ ಹೊಯ್ದಾಟ ಗುರುತಿಸಲಾಗಿದೆ. ಅಲ್ಲೇನಾದರೂ ಘರ್ಷಣೆಯಾದರೆ ಕೇವಲ 200 ಕಿ.ಮೀ ದೂರದ ಚೆನ್ನೈನಲ್ಲಿ ಸಾವು-ನೋವುಗಳ ಆಕ್ರಂದನ ಮುಗಿಲುಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.
ತಿಮ್ಮಪ್ಪನ ಆಜ್ಞೆ ಮೀರಲ್ಲ ಭೂದೇವಿ ಅಂತಾರೆ ಭಕ್ತರು
ಭೂಕಂಪದ ವರದಿ ಹೊರಬೀಳುತ್ತಿದ್ದಂತೆ ಪ್ರತಿದಿನ ಭೇಟಿ ನೀಡುವ ತಿಮ್ಮಪ್ಪನ ಲಕ್ಷಾಂತರ ಮಂದಿ ಭಕ್ತರಲ್ಲಿ ಆತಂಕ ಮನೆಮಾಡಿತ್ತು. ಆದರೆ ಕಲಿಯುಗದ ಭೂವೈಕುಂಠದಲ್ಲಿ ನೆಲೆನಿಂತ ಬಾಲಾಜಿ ತಮ್ಮನ್ನು ಅಪಾಯದಿಂದ ಪಾರುಮಾಡಿಯೇ ಮಾಡುತ್ತಾನೆ ಎಂಬ ನಂಬಿಕೆ ಅವರನ್ನು ಸಮಾಧಾನಪಡಿಸಿದೆ. ಶ್ರೀದೇವಿ-ಭೂದೇವಿಯರಿಂದ ಕಾಲು ಒತ್ತಿಸಕೊಳ್ಳುವ ವಿಷ್ಣು ಭಕ್ತರಿಗೆ ಸಂಕಟ ಕೊಡಲು ಬಿಡುವುದಿಲ್ಲ ಎಂದು ಭಕ್ತರೊಬ್ಬರು ತಮ್ಮ ನಂಬಿಕೆ ವ್ಯಕ್ತಪಡಿಸಿದರು.
Leave A Reply