ಪದ್ಮನಾಭಸ್ವಾಮಿ ದೇವಾಲಯಕ್ಕೆ ಯೇಸುದಾಸ್ ಭೇಟಿ, ಅನುಮತಿ ನೀಡಿದ ದೇವಾಲಯ
Posted On September 20, 2017
ತಿರುವನಂತಪುರ: ವಿಜಯ ದಶಮಿ ಹಿನ್ನೆಲೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್ ಅವರು ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸೆ.30ರಂದು ಭೇಟಿ ಮಾಡಲಿದ್ದಾರೆ.
ಭೇಟಿ ಮಾಡುವ ಕುರಿತು ದೇವಾಲಯದ ಆಡಳಿತ ಮಂಡಳಿಗೆ ಯೇಸುದಾಸ್ ಮನವಿ ಮಾಡಿದ್ದಲ್ಲದೇ, ತಮಗೆ ಹಿಂದುತ್ವದಲ್ಲಿ ನಂಬಿಕೆ ಇದೆ ಎಂದೂ ಸಹ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಭೇಟಿ ನೀಡುವುದಕ್ಕೆ ದೇವಾಲಯ ಆಡಳಿತ ಮಂಡಳಿ ಸಹ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
“ಯೇಸುದಾಸ್ ಅವರು ಕ್ರೈಸ್ತ ಧರ್ಮೀಯರೇ ಆಗಿರಬಹುದು. ಆದರೆ ಅವರು ಹಿಂದುತ್ವದಲ್ಲಿ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಹಿಂದುತ್ವದಲ್ಲಿ ನಂಬಿಕೆಯಿರುವ ಯಾರಾದರೂ ದೇವಾಲಯಕ್ಕೆ ಭೇಟಿ ನೀಡಬಹುದು. ಹಾಗಾಗಿ ಅವರಿಗೆ ಅನುಮತಿ ನೀಡಲಾಗಿದೆ” ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply