ನಾಲ್ವರು ಮುಸ್ಲಿಮರಿಂದ ಹಿಂದೂ ಬಾಲಕಿಯ ಅತ್ಯಾಚಾರ, ಮತಾಂತರಕ್ಕೂ ಒತ್ತಾಯ
ಲಖನೌ: ಉತ್ತರ ಪ್ರದೇಶದಲ್ಲಿ ಮುಸ್ಲಿಮರ ದುಷ್ಕೃತ್ಯಗಳು ಮುಂದುವರಿದಿದ್ದು, ಮುಜಫರ್ ನಗರದಲ್ಲಿ ಹಿಂದೂ ಬಾಲಕಿಯನ್ನು ಅಪಹರಿಸಿ ಹತ್ತು ದಿನ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ, ಮತಾಂತರ ಹಾಗೂ ಗೋಮಾಂಸ ಸೇವಿಸುವಂತೆ ನಾಲ್ವರು ಮುಸ್ಲಿಮರು ಒತ್ತಾಯಿಸಿದ್ದಾರೆ.
ಸೆ.6ರಂದು ನಗರದಲ್ಲಿ ತಮ್ಮ ಚಿಕ್ಕಪ್ಪನ ಮನೆಗೆ ತೆರಳಲು ಬಸ್ಸಿಗಾಗಿ ಬಾಲಕಿ ಕಾಯುತ್ತಿದ್ದಳು. ಆಗ ಕಾರಿನಲ್ಲಿ ಬಂದ ನಾಲ್ವರು, ನಾವು ಬಿಡುತ್ತೇವೆ ಎಂದು ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಅಪಹರಣ ಮಾಡಿದ್ದಾರೆ. ಅಲ್ಲದೆ ಇಸ್ಲಾಂಗೆ ಮತಾಂತರಗೊಳಿಸುವ ಹಾಗೂ ಗೋಮಾಂಸ ಸೇವಿಸಲು ಒತ್ತಾಯಿಸಿದಾಗ ಬಾಲಕಿ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾಳೆ. ಇದರಿಂದ ಭಯಭೀತರಾದ ಮುಸ್ಲಿಮರು ಬಾಲಕಿಯನ್ನು ನಡುದಾರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಈಗ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಅಕ್ರಮ್, ಇಸ್ಲಾಮ್, ಅಯುಬ್ ಹಾಗೂ ಸಲಿಮ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದಾಗ್ಯೂ, ದೂರು ನೀಡಿ ಎರಡು ದಿನವಾದರೂ ಪೊಲೀಸರು ಅರೋಪಿಗಳನ್ನು ಬಂಧಿಸದೇ ಇರುವುದು ಅವರು ಮುಸ್ಲಿಮರು ಎಂಬ ಕಾರಣಕ್ಕಾಗಿ ಸಡಿಲ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
Leave A Reply