ಗೌರಿ ಹತ್ಯೆ ಹಿಂದೆ ಆರೆಸ್ಸೆಸ್, ಈ ಪತ್ರಕರ್ತನ ಹತ್ಯೆ ಹಿಂದೆ ಯಾರು ಸ್ವಾಮಿ..?
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ
ರಾಹುಲ್ ಗಾಂಧಿಯಿಂದ ಹಿಡಿದು ಕಾಂಗ್ರೆಸ್ಸಿನ ಕಾರ್ಯಕರ್ತರು, ಸಿಪಿಎಂನ ಸೀತಾರಾಮ್ ಯೆಚೂರಿ, ಎಡಬಿಡಂಗಿಗಳು, ಫೇಸ್ ಬುಕ್ಕಿನ ಪುಡಿ ಬರಹಗಾರರು… ಒಬ್ಬರೇ ಇಬ್ಬರೇ, ಎಲ್ಲರೂ ಬಿಜೆಪಿ, ಆರೆಸ್ಸೆಸ್ಸನ್ನೇ ಗುರಿಯಾಗಿಸಿದರು. ರಾಹುಲ್ ಗಾಂಧಿ ಅಂತೂ ಬಿಜೆಪಿ, ಆರೆಸ್ಸೆಸ್ಸನ್ನು ವಿರೋಧಿಸಿದರೆ ಕೊಲೆಯೇ ಗತಿ ಎಂದರು.
ಅಷ್ಟೇ ಅಲ್ಲ, ಇನ್ನೂ ತನಿಖೆಯೇ ಶುರುವಾಗಿರಲಿಲ್ಲ, ಆರೋಪಿಗಳ ಸುಳಿವು ಸಹ ಸಿಕ್ಕಿರಲಿಲ್ಲ, ಅದಾಗಲೇ ಇದು ಸೈದ್ಧಾಂತಿಕ ಕೊಲೆ ಎಂದರು. ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಗುತ್ತಿದ್ದರೂ ಮಗುಮ್ಮಾಗಿದ್ದ ಪ್ರಕಾಶ್ ರೈ, ಗೌರಿ ಹತ್ಯೆ ಬಳಿಕ ಏನಾಗ್ತಿದೆ ಕರ್ನಾಟಕದಲ್ಲಿ ಎಂದು ಬುದ್ಧಿಜೀವಿ ಥರ ವರ್ತಿಸಿದರು…
ಆದರೆ ತ್ರಿಪುರ ರಾಜ್ಯದ ರಾಜಧಾನಿ ಅಗರ್ತಲದಲ್ಲಿ ನಡೆದ ಗನಮುಕ್ತಿ ಪರಿಷದ್ ರ್ಯಾಲಿ ವರದಿ ಮಾಡುತ್ತಿದ್ದ “ದಿನ್ ರಾತ್” ಚಾನೆಲ್ಲಿನ ಸಂತನು ಭೌಮಿಕ್ ಎಂಬ ಪತ್ರಕರ್ತರೊಬ್ಬರ ಹತ್ಯೆಯಾಗಿದೆ. ಆದರೆ, ಯಾರೆಂದರೆ ಯಾರೂ ಸೊಲ್ಲೆತ್ತುತ್ತಿಲ್ಲ. ಇದು ಯಾರ ಕೃತ್ಯ ಎಂದು ಯಾರೂ ಷರಾ ಬರೆಯುತ್ತಿಲ್ಲ. ತೀರ್ಪು ನೀಡುತ್ತಿಲ್ಲ…
ಏಕೆ?
ತ್ರಿಪುರದಲ್ಲಿ ಕಮ್ಯುನಿಸ್ಟ್ ಸರಕಾರ ಇದೆ ಅಂತಲೇ? ಇಲ್ಲ, ಆ ಪತ್ರಕರ್ತ ಹಿಂದೂ ಸಂಘಟನೆಯ ರ್ಯಾಲಿ ವರದಿ ಮಾಡುತ್ತಿದ್ದ ಅಂತಲೇ? ಅಥವಾ ಆತ ಆರೆಸ್ಸೆಸ್ ಹಾಗೂ ಬಿಜೆಪಿ ವಿರೋಧಿ ಆಗಿರಲಿಲ್ಲ ಅಂತಲೇ? ಆತ ಎಡಪಂಥೀಯನಾಗಿರಲಿಲ್ಲ, ಮೋದಿ ವಿರೋಧಿಯಾಗಿರಲಿಲ್ಲ ಎಂದೇ?
ಹೌದು, ಬುಧವಾರವೇ ಪತ್ರಕರ್ತನ ಹತ್ಯೆಯಾಗಿದೆ. ಎಲ್ಲೂ ಸುದ್ದಿಯಾಗುತ್ತಿಲ್ಲ ಎಂದರೆ ಇದೆಂಥ ಇಬ್ಬಂದಿತನ. ಗೌರಿ ಲಂಕೇಶ್ ಎಂಬ ಎಡಪಂಥೀಯ ಪತ್ರಕರ್ತೆ ಹತ್ಯೆಯಾದರೆ ಮಾತ್ರ ಆಕೆಯದ್ದು ಜೀವ, ಸೈದ್ಧಾಂತಿಕ ಕೊಲೆ. ಅದೇ ಹಿಂದೂ ಸಂಘಟನೆಯ ರ್ಯಾಲಿ ವರದಿ ಮಾಡುತ್ತಿದ್ದ ಪತ್ರಕರ್ತನ ಹತ್ಯೆಯಾದರೆ ಅದೊಂದು ಮಾಮೂಲಿ ವ್ಯಕ್ತಿಯ ಕೊಲೆ. ಪ್ರತಿರೋಧ ಸಮಾವೇಶ ಮಾಡಿದ ಗಂಜಿ ಗಿರಾಕಿಗಳು ಸಹ ಸುಮ್ಮನಾಗಿವೆಯೆಂದರೆ ಗೌರಿಗೆ ಇವರೆಂಥ ಹಾಗೂ ಎಷ್ಟರಮಟ್ಟಿಗಿನ ಬೆಂಬಲ ನೀಡುತ್ತಾರೆ ಎಂದು ತಿಳಿದುಬರುತ್ತದೆ.
ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ…
- ಪ್ರಸಾದ್ ಹೆಗಡೆ, ಕಾರ್ಕಳ
Leave A Reply