ಅತ್ಯಾಚಾರಕ್ಕೆ ಅಸಭ್ಯ ವರ್ತನೆಯೇ ಪ್ರೇರಣೆ: ಸಾಕ್ಷಿ ಮಹಾರಾಜ್
Posted On September 21, 2017

ದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಯುವಕ-ಯುವತಿಯರು ತೋರುವ ಅಸಭ್ಯ ವರ್ತನೆಯೇ ಅತ್ಯಾಚಾರಕ್ಕೆ ಪ್ರೇರಣೆ ಎಂದು ಸಂಸದ ಸಾಕ್ಷಿ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಹಾಗೆಯೇ ಇಂಥಾ ವರ್ತನೆ ತೋರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಹ ಹೇಳಿದ್ದಾರೆ.
ಯುವಕ-ಯುವತಿಯರು ಬೈಕ್ ಮೇಲೆ ಹೋಗುವಾಗ ಅಪ್ಪಿಕೊಳ್ಳುತ್ತಾರೆ. ಉದ್ಯಾನ ಸೇರಿ ಹಲವು ಸಾರ್ವಕಜನಿಕ ಸ್ಥಳಗಳಲ್ಲಿ ವಿಚಿತ್ರ ವರ್ತನೆ, ಲೈಂಗಿಕ ಅಪೇಕ್ಷೆ ತೋರುತ್ತಾರೆ. ಇದು ಬೇರೆಯವರಿಗೆ ಪ್ರಚೋದನೆಯಾಗುತ್ತದೆ ಎಂದಿದ್ದಾರೆ.
ಇದರಿಂದ ಪ್ರಚೋದನೆಗೊಂಡು ಅತ್ಯಾಚಾರವಾದರೆ ಜನ ಪೊಲೀಸರ ಮೇಲೆ ಒತ್ತಡ ಹೇರುತ್ತಾರೆ. ಜನರಿಗೆ ಭದ್ರತೆ ಇಲ್ಲ ಎಂದು ಬೊಬ್ಬೆ ಹಾಕುತ್ತಾರೆ. ಹಾಗಾಗಿ, ಇಂಥ ಪುಂಡ ಜೋಡಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಕ್ಷಿ ಮಹಾರಾಜ್ ಬಿಜೆಪಿ ಸಂಸದರಾಗಿದ್ದು, ಫೈರ್ ಬ್ರ್ಯಾಂಡ್ ಹೇಳಿಕೆಗೆ ಖ್ಯಾತಿಯಾಗಿದ್ದಾರೆ.
- Advertisement -
Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
February 3, 2023
Leave A Reply