ಮತ್ತೆ ಅಜ್ಞಾನ ಪ್ರದರ್ಶನ, ಗಾಂಧಿ, ನೆಹರೂ ಅನಿವಾಸಿ ಭಾರತೀಯರು ಎಂದ ರಾಹುಲ್ ಗಾಂಧಿ
ಈ ರಾಹುಲ್ ಗಾಂಧಿ ಅವರಿಗೆ ನಿಜವಾಗಿಯೂ ಮಿದುಳು ಇದೆಯಾ ಎಂಬ ಪ್ರಶ್ನೆ ಮೂಡುವಂತೆ ಅವರು ಮಾಡುತ್ತಾರೆ. ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ರಾಹುಲ್ ಅಲ್ಲಿ ಅನಿವಾಸಿ ಭಾರತೀಯರ (ಎನ್ಆರ್ ಐ) ಕುರಿತು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ.
“ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ಎಲ್ಲ ಅನಿವಾಸಿ ಭಾರತೀಯರು” ಎಂದು ಹೇಳುವ ಮೂಲಕ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಗೆಪಾಟಲಿಗೀಡಾಗಿದ್ದಾರೆ.
ಅಷ್ಟೇ ಅಲ್ಲ, “ಕಾಂಗ್ರೆಸ್ ಮೊದಲು ಅನಿವಾಸಿ ಭಾರತೀಯರ ಚಳವಳಿಯ ಭಾಗವಾಗಿತ್ತು. ನೀವೆಲ್ಲರೂ ಅನಿವಾಸಿ ಭಾರತೀಯರೇ’ ಎಂದಿದ್ದಾರೆ.
ಎನ್ಆರ್ ಐಗಳು ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಬುದ್ಧಿಮತ್ತೆಯನ್ನು ಹೊಂದಿದ್ದಾರೆ. ಎಲ್ಲರೂ ಕಾಂಗ್ರೆಸ್ ಜತೆ ಕೈ ಜೋಡಿಸಿ ಮುಂದಿನ ದೂರದೃಷ್ಟಿ ಕುರಿತು ಚರ್ಚಿಸಿ ಎಂದು ಸಹ ಕರೆ ನೀಡಿದ್ದಾರೆ.
ಅಷ್ಟಕ್ಕೂ ಈ ಎನ್ಆರ್ ಐಗಳು ಎಂದರೆ ಯಾರು?
ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ (1999)ಯ ಪ್ರಕಾರ, ಅನಿವಾಸಿ ಭಾರತೀಯ ಭಾರತದ ನಾಗರಿಕ ಅಥವಾ ಉದ್ಯೋಗ, ಉದ್ಯಮ ಕೈಗೊಳ್ಳುವ ಉದ್ದೇಶದಿಂದ ಅನಿರ್ದಿಷ್ಟಾವಧಿವರೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದೇಶಿ ರಾಷ್ಟ್ರೀಯತೆ ಹೊಂದಿದವರು ಎಂದಾಗುತ್ತದೆ.
ಹೀಗಿರುವಾಗ ಇಲ್ಲೇ ಹುಟ್ಟಿ ಬೆಳೆದ ಮಹಾತ್ಮ ಗಾಂಧೀಜಿ ಹಾಗೂ ಜವಾಹರ್ ಲಾಲ್ ನೆಹರೂ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗಿದ್ದರು. ಆದರೆ ಅವರೂ ಎನ್ಆರ್ ಐ ಎನ್ನುವ ರಾಹುಲ್ ಗಾಂಧಿ ಬುದ್ಧಿಮತ್ತೆಗೆ ಏನೆನ್ನಬೇಕೋ?
Leave A Reply