ಮಮತಾ ಬ್ಯಾನರ್ಜಿಗೆ ಹಿನ್ನಡೆ, ಆಯುಧ ಮೆರವಣಿಗೆಗೆ ಅನುಮತಿ
ಕೋಲ್ಕತಾ: ಮೊನ್ನೆಯಷ್ಟೇ “ಧರ್ಮಗಳ ನಡುವೆ ಗೆರೆ ಎಳೆಯಬೇಡಿ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದ ಕೋಲ್ಕತಾ ಹೈಕೋರ್ಟ್, ಈಗ ಮತ್ತೊಂದು ಶಾಕ್ ನೀಡಿದ್ದು, ವಿಜಯದಶಮಿ ಹಿನ್ನೆಲೆ ಆಯುಧ ಮೆರವಣಿಗೆ ಮಾಡುವುದನ್ನು ನಿಷೇಧಿಸಿದ್ದ ಬಂಗಾಳ ಸರಕಾರದ ಆದೇಶವನ್ನು ತೆರವುಗೊಳಿಸಿದೆ. ಅಲ್ಲದೆ ಮೊಹರಂ ಸೇರಿ ನವರಾತ್ರಿಯ ಎಲ್ಲ ದಿನಗಳಂದು ಬೆಳಗ್ಗೆ ಮಧ್ಯಾಹ್ನ 12ರ ತನಕ ಆಯುಧ ಪೂಜೆ ಮಾಡಬಹುದು ಎಂದು ಅನುಮತಿ ನೀಡಿದೆ.
ಇದರ ಜತೆಗೆ ಮೆರವಣಿಗೆ ವೇಳೆ ಸರಕಾರ ಯಾವುದೇ ಗಲಭೆ ಉಂಟಾಗದಂತೆ ನೋಡಿಕೊಳ್ಳಬೇಕು, ಬಿಗಿ ಬಂದೋಬಸ್ತ್ ಏರ್ಪಡಿಸಬೇಕು ಎಂದು ಸಹ ನಿರ್ದೇಶನ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, “ನೀವು (ಮಮತಾ ಬ್ಯಾನರ್ಜಿ) ಆಧಾರವಿಲ್ಲದೇ ನಿರ್ಧಾರ ತೆಗೆದುಕೊಂಡಿದ್ದೀರಿ. ನೀವು ರಾಜ್ಯದ ಮುಖ್ಯಮಂತ್ರಿಯಾದ ಮಾತ್ರಕ್ಕೆ ಇಂಥ ಅನಿಯಂತ್ರಿತ ನಿರ್ಧಾರ ಕೈಗೊಳ್ಳಬಹುದೇ?” ಎಂದು ಪ್ರಶ್ನಿಸಿದೆ.
ಮೊಹರಂ ಹಿಂದಿನ ಹಾಗೂ ಮೊಹರಂ ದಿನ ಆಯುಧ ಮೆರವಣಿಗೆ ಮಾಡಬಾರದು ಎಂದು ಮಮತಾ ಆದೇಶ ಹೊರಡಿಸಿದ್ದರು.
Leave A Reply