ನರೇಂದ್ರ ಮೋದಿ ವಾರಣಾಸಿ ಭೇಟಿ ಇಂದಿನಿಂದ
Posted On September 22, 2017

ದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರ ವಾರಣಾಸಿಗೆ ಎರಡು ದಿನ ಭೇಟಿಯನ್ನು ಶುಕ್ರವಾರದಿಂದ ಆರಂಭಿಸಿದ್ದಾರೆ.
ಭೇಟಿ ವೇಳೆ ವಾರಣಾಸಿಯ ಹಲವೆಡೆ ಮೂಲ ಸೌಕರ್ಯ ಒದಗಿಸುವ ನಾನಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ರಾಮನಗರ ಸಾಮ್ನೆ ಘಾಟ್ ಸೇತುವೆ, ಬೌಲಾ ಘಾಟ್ ಬ್ರಿಡ್ಜ್ ಸೇರಿ ಹದಿನೇಳು ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಿದ್ದಾರೆ. ಜತೆಗೆ ಸಾರ್ವಜನಿಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜತೆಗೆ ಉತ್ತರ ಪ್ರದೇಶ ಸರಕಾರ ರೈತರ ಸಾಲ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ಹಲವು ರೈತರಿಗೆ ಸಾಲ ಮನ್ನಾ ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸೆ,23ರಂದು ಶಹಾಂಶಪುರದಲ್ಲಿ “ಪಶು ಆರೋಗ್ಯ ಮೇಳ”ಕ್ಕೆ ಸಹ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
- Advertisement -
Leave A Reply