ರೋಹಿಂಗ್ಯಾಗಳಿಗೆ ಸಹಾಯ ಮಾಡದಿದ್ದರೆ ಹಿಂದೂಗಳ ನಾಶ: ಮುಸ್ಲಿಂ ವ್ಯಕ್ತಿ
ದೇಶಕ್ಕೆ ಮಾರಕವಾಗುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮ್ಯಾನ್ಮಾರ್ ರೋಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಚಿಂತನೆ ನಡೆಸುತ್ತಿದ್ದರೆ, ಭಾರತದಲ್ಲಿರುವ ಕೆಲವು ಮುಸ್ಲಿಮರು ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರದ ಸಂಗತಿ.
ಇಂಥಾ ಬೇಸರದ ನಡುವೆಯೇ ಮುಸ್ಲಿಂ ವ್ಯಕ್ತಿಯೊಬ್ಬ, “ರೋಹಿಂಗ್ಯಾ ಮುಸ್ಲಿಮರಿಗೆ ಸಹಾಯ ಮಾಡದಿದ್ದರೆ ಭಾರತದಲ್ಲಿರುವ ಹಿಂದೂಗಳನ್ನು ಸರ್ವನಾಶ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ರೋಹಿಂಗ್ಯಾ ಮುಸ್ಲಿಮರು ವಾಸಿಸುವಂತೆ ಅನುಕೂಲ ಮಾಡಬೇಕು. ಅದೆಷ್ಟು ಹಿಂದೂಗಳು ಇದನ್ನು ಬೆಂಬಲಿಸುತ್ತಾರೋ ಅವರು ಉಳಿಯುತ್ತಾರೆ, ಇಲ್ಲದವರು ನಾಶವಾಗುತ್ತಾರೆ ಎಂದು ವ್ಯಕ್ತಿ ಎಚ್ಚರಿಸಿದ್ದಾನೆ.
ಸುಮಾರು 40 ಸಾವಿರಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೇಂದ್ರ ಸರಕಾರವೇ ತಿಳಿಸಿದೆ. ಅಲ್ಲದೆ ಬಾಂಗ್ಲಾ ವಲಸಿಗರಂತೆ ಇವರು ಸಹ ದೇಶಕ್ಕೇ ಮಾರಕವಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ರೋಹಿಂಗ್ಯಾಗಳು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಗುಮಾನಿ ಇರುವುದರಿಂದ ಅವರ ಗಡಿಪಾರು ಅನಿವಾರ್ಯ ಎಂಬುದು ಕೇಂದ್ರ ಸರಕಾರದ ನಿರ್ಧಾರ.
ಆದರೆ ದೇಶಕ್ಕೇ ಮಾರಕವಾದರೂ ಸರಿಯೇ, ಮುಸ್ಲಿಮರು ಎಂಬ ಕಾರಣಕ್ಕೆ ಅವರನ್ನು ರಕ್ಷಿಸಬೇಕು ಎಂಬುದು ಭಾರತದಲ್ಲಿರುವ ಕೆಲವು ಮುಸ್ಲಿಂ ಮೂಲಭೂತವಾದಿಗಳ ಆಗ್ರಹವಾಗಿದೆ. ಆದಾಗ್ಯೂ, ಅಸಾದುದ್ದೀನ್ ಓವೈಸಿಯಂಥ ರಾಜಕಾರಣಿಗಳು ಸಹ ಇದನ್ನು ಬೆಂಬಲಿಸುತ್ತಿರುವುದು ದುರ್ದೈವವೇ ಸರಿ. ದೇಶಕ್ಕಿಂತ ಧರ್ಮವೇ ಮೇಲು ಎಂಬುವವರಿಂದ ಇದಕ್ಕಿಂತ ಬೇರೇನನ್ನೂ ನಿರೀಕ್ಷಿಸುವುದು ಅಸಾಧ್ಯ.
Leave A Reply