ಪಾಕಿಸ್ತಾನಕ್ಕೆ ಟಾಂಗ್ ನೀಡಲಿದ್ದಾರೆಯೇ ಸುಷ್ಮಾ ಸ್ವರಾಜ್?
Posted On September 23, 2017

ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶನಿವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದು, ಪಾಕಿಸ್ತಾನಕ್ಕೆ ಟಾಂಗ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ವಿರುದ್ಧ ಸೀಮಿತ ಯುದ್ಧ ನಿಯಮ ಅನುಸರಿಸುವುದನ್ನು ಭಾರತ ಬಿಡಬೇಕು ಎಂದು ಶುಕ್ರವಾರ ಸಭೆಯಲ್ಲಿ ಹೇಳಿಕೆ ನೀಡಿದ್ದ ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಗೆ ಸುಷ್ಮಾ ಟಾಂಗ್ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಗುರುವಾರ ಭಾರತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಟೆರರಿಸ್ತಾನ ಎಂದು ಬಿಂಬಿಸಿದೆಯಾದರೂ, ಸುಷ್ಮಾ ಸ್ವರಾಜ್ ಪಾಕಿಸ್ತಾನದ ವಿರುದ್ಧ ಮಾತನಾಡುವುದು ಪ್ರಾಮುಖ್ಯ ಪಡೆದಿದೆ.
ಜಮ್ಮು-ಕಾಶ್ಮೀರಕ್ಕೊಬ್ಬ ಪ್ರತಿನಿಧಿಯನ್ನು ನೇಮಿಸಬೇಕು ಎಂದು ಅಬ್ಬಾಸಿ ಹೇಳಿರುವುದರಿಂದ, ಈ ವಿಷಯದ ಕುರಿತು ಸಹ ಸುಷ್ಮಾ ಸ್ವರಾಜ್ ಮಾತನಾಡುವ ಸಾಧ್ಯತೆ ಇದೆ.
- Advertisement -
Leave A Reply