ಸಚಿವ ಖಾದರ್ ಸ್ವಕ್ಷೇತ್ರದಲ್ಲಿ ಜರ್ಮನಿ ಯುವತಿಯ ಅತ್ಯಾಚಾರ ಯತ್ನ
ಕರ್ನಾಟಕ ಘನ ಸರಕಾರದ ಆಹಾರ ಸಚಿವ ಯು.ಟಿ.ಖಾದರ್ರ ಸ್ವಕ್ಷೇತ್ರ ಉಳ್ಳಾಲದಲ್ಲಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಜರ್ಮನಿ ಮೂಲದ ಯುವತಿಯೋರ್ವಳನ್ನು ಸಾರ್ವಜನಿಕವಾಗಿ ಅತ್ಯಾಚಾರಗೊಳಿಸಲು ಯತ್ನಿಸಿದ ಅಪ್ರಾಪ್ತ ಬಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ಸಂಜೆ ಕೋಟೆಕಾರು ಪಟ್ಟಣದ ಪಾನೀರು ಎಂಬಲ್ಲಿ ನಡೆದಿದೆ.
ಪಾನೀರು ಚರ್ಚ್ಗೆ ಸಂಬಂಧಿಸಿದ ಮರ್ಸಿ ಡೇ ಅನಾಥ ಮಕ್ಕಳ ಆಶ್ರಮಕ್ಕೆ ಅಧ್ಯಯನ ನಡೆಸಲು ಬಂದಿದ್ದ ಜರ್ಮನ್ ಮೂಲದ ಚೈಲೊಟ್ಟೊ ಇಟರ್(18)ಎಂಬ ಯುವತಿಯೇ ಅತ್ಯಾಚಾರ ಯತ್ನಕ್ಕೊಳಗಾದವಳು.ಶನಿವಾರ ಸಂಜೆ ಪಾನೀರಿನ ರಸ್ತೆಯಲ್ಲಿ ಯುವತಿ ನಡೆದುಕೊಂಡು ಆಶ್ರಮಕ್ಕೆ ತೆರಳುತ್ತಿದ್ದ ಸಂಧರ್ಭದಲ್ಲಿ ಪಾವೂರು ನಿವಾಸಿ 13 ರ ಅಪ್ರಾಪ್ತ ಬಾಲಕ ಯುವತಿಯ ಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿದ್ದು ಈ ವೇಳೆ ಗಾಬರಿಗೊಂಡ ವಿದೇಶಿ ಯುವತಿ ಬಾಲಕನ ಹಿಡಿತದಿಂದ ತಪ್ಪಿಸಿ ಆಶ್ರಮಕ್ಕೆ ಓಡಿದ್ದಾಳೆ.ಸ್ಥಳದಲ್ಲಿದ್ದ ಸಾರ್ವಜನಿಕರು ಬಾಲಕನಿಗೆ ತಪರಾಕಿ ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಬಾಲಕ ಈಗ ಉಳ್ಳಾಲ ಪೊಲೀಸರ ವಶದಲ್ಲಿದ್ದು,ಅತ್ಯಾಚಾರ ಯತ್ನಕ್ಕೊಳಗಾದ ವಿದೇಶಿ ಯುವತಿ ಇನ್ನಷ್ಟೆ ದೂರು ದಾಖಲು ಮಾಡಬೇಕಾಗಿದೆ. ಖಾದರ್ ಅವರು ಪ್ರತಿನಿಧಿಸುತ್ತಿರುವ ಉಳ್ಳಾಲ ಕ್ಷೇತ್ರದಲ್ಲಿ ಈಗಾಗಲೇ ಅನೇಕ ಮತೀಯ ಗಲಭೆಗಳು ಉಂಟಾಗಿ ಕೊಲೆಗಳಾಗಿದ್ದು.
ವಿದೇಶಿ ಯುವತಿಯೋರ್ವಳನ್ನು ಅಲ್ಪಸಂಖ್ಯಾತ ಅಪ್ರಾಪ್ತನೋರ್ವ ಹಾಡು ಹಗಲೇ ಸಾರ್ವಜನಿಕವಾಗಿ ಅತ್ಯಾಚಾರಗೈಯಲು ಯತ್ನಿಸಿದ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ಸ್ವತ: ಸಚಿವ ಖಾದರ್ಗೆ ಮುಜುಗರ ಉಂಟು ಮಾಡಿದೆ.
Leave A Reply