ವಿಶ್ವದ ನಾಯಕರ ಸಂಬಳ, ಮೋದಿ ಸಂಬಳ ಎಷ್ಟು, ಹಣವನ್ನೆಲ್ಲ ಮೋದಿ ಏನು ಮಾಡಿದರು?
ನರೇಂದ್ರ ದಾಮೋದರ್ ದಾಸ್ ಮೋದಿ…
ಕಳೆದ ಮೂರಕ್ಕೂ ಅಧಿಕ ವರ್ಷಗಳಿಂದ ಒಂದು ದಿನವೂ ರಜೆ ತೆಗೆದುಕೊಳ್ಳದೇ, ದಿನಕ್ಕೆ ನಾಲ್ಕು ತಾಸಷ್ಟೇ ಮಲಗಿ ದೇಶದ ಸೇವೆಗೆ ಕಂಕಣಬದ್ಧರಾಗಿರುವ ದೇಶದ ಪ್ರಧಾನಿಯ ಸಂಬಳ ವಿಶ್ವದ ನಾಯಕರು ಪಡೆಯುವ ಸಂಬಳಕ್ಕೆ ಹೋಲಿಸಿದರೆ ತುಂಬ ಕಡಿಮೆ ಎನಿಸುತ್ತದೆ. ಅದು ನಮ್ಮ ದೇಶದ ನಿಯಮವಾದರೂ, ನರೇಂದ್ರ ಮೋದಿ ಅವರ ವಾರ್ಷಿಕ ಸಂಬಳ ಎಷ್ಟು? ವಿಶ್ವದ ಪ್ರಮುಖ ನಾಯಕರ ವಾರ್ಷಿಕ ಸಂಬಳ ಎಷ್ಟು? ಬಂದ ಸಂಬಳದಲ್ಲಿ ಮೋದಿ ಏನು ಮಾಡಿದರು?
ದೇಶದ ಪ್ರಧಾನಿಯವರ ವಾರ್ಷಿಕ ಸಂಬಳ 20.63 ಲಕ್ಷ ರೂಪಾಯಿ. ಹಾಗಂತ ಹೀಗೆ ಬಂದ ಲಕ್ಷಾಂತರ ರೂಪಾಯಿಯನ್ನು ಮೋದಿ ತಿಂದುಂಡು ಮಜಾ ಮಾಡುವುದಿಲ್ಲ, ಕುಟುಂಬಸ್ಥರಿಗೆ ನೀಡುವುದಿಲ್ಲ. ಬದಲಾಗಿ ಒಂದಷ್ಟು ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ. ಒಬ್ಬ ಬಾಲಕಿಯ ಶಿಕ್ಷಣಕ್ಕಾಗಿ ಮೋದಿ ತಮ್ಮ ಉಳಿತಾಯ ಖಾತೆಯಿಂದ ಬರೋಬ್ಬರಿ 21 ಲಕ್ಷ ರೂ. ನೀಡಿದ್ದಾರೆ. ನೇಪಾಳದಲ್ಲಿ ಭೂಕಂಪದಿಂದ ಸಂಕಷ್ಟಕ್ಕೀಡಾದವರ ಅನುಕೂಲಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ತಮ್ಮ ಒಂದು ತಿಂಗಳ ಸಂಬಳ ನೀಡಿದ್ದಾರೆ. ಇದರ ಜತೆಗೆ ಹಲವು ಸಾಮಾಜಿಕ ಕಾರ್ಯಗಳಿಗೂ ಮೋದಿ ಹಣ ನೀಡಿದ್ದಾರೆ. ಒಬ್ಬ ಉತ್ತಮ ನಾಯಕನಿಗಿರುವ ಔದಾರ್ಯ ಎಂದರೆ ಇದೇ ಅಲ್ಲವೇ?
ಜಾಗತಿಕ ನಾಯಕರ ಸಂಬಳ ಎಷ್ಟು?
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ – 2.72 ಕೋಟಿ ರೂ.
- ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ – 1.59 ಕೋಟಿ ರೂ.
- ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ – 1.51 ಕೋಟಿ ರೂ.
- ಜಪಾನ್ ಪ್ರಧಾನಿ ಶಿಂಝೋ ಅಬೆ – 1.31 ಕೋಟಿ ರೂ.
- ಫ್ರಾನ್ಸ್ ಪ್ರಧಾನಿ ಎಮಾನುಯೆಲ್ ಮ್ಯಾಕ್ರನ್ – 1.15 ಕೋಟಿ ರೂ.
- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು – 1.06 ಕೋಟಿ ರೂ.
Leave A Reply