ಗಾಂಧಿ ಜಯಂತಿಗೆ ಖಾದಿ ಬಟ್ಟೆ ಖರೀದಿಸಿ: ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ
Posted On September 24, 2017

ದೆಹಲಿ: ಈ ಬಾರಿಯ ಗಾಂಧಿ ಜಯಂತಿ ಅಂಗವಾಗಿ ಪ್ರತಿಯೊಬ್ಬರೂ ಒಂದೊಂದು ಖಾದಿ ಬಟ್ಟೆ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮನ್ ಕೀ ಬಾತ್ ರೇಡಿಯೋ ಸರಣಿಯ 36ನೇ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟದಲ್ಲಿ ನರೇಂದ್ರ ಮೋದಿ ಪಾತ್ರ ಪ್ರಮುಖವಾಗಿದ್ದು, ಅವರ ಜಯಂತಿ ಪ್ರಯುಕ್ತ ಖಾದಿ ಬಟ್ಟೆ ಖರೀದಿಸಿ. ಖಾದಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಮೂಲಕ ಬಡವರ ಬಾಳಿಗೆ ದೀಪವಾಗೋಣ ಎಂದಿದ್ದಾರೆ.
ಅಲ್ಲದೆ ದೇಶವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಭೂ ದಾನ ಚಳವಳಿಯ ನೇತಾರ ಆಚಾರ್ಯ ವಿನೋಭಾ ಭಾವೆ ಅವರನ್ನು ಸಹ ಮೋದಿ ನೆನೆದಿದ್ದಾರೆ. ಪ್ರತಿ ತಿಂಗಳು ನರೇಂದ್ರ ಮೋದಿ ಅವರು ರೇಡಿಯೋ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾರೆ. ಇಂದಿಗೆ ಮೋದಿ ಆರಂಭಸಿದ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ.
ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಪ್ರಮುಖಾಂಶಗಳು…
- ಇದು ಮನ್ ಕೀ ಬಾತ್ ನ 36ನೇ ಕಾರ್ಯಕ್ರಮ, ಮೂರು ವರ್ಷದ ಹಿಂದೆ ಇದನ್ನು ಆರಂಭಿಸಿದ್ದು.
- ಈ ಕಾರ್ಯಕ್ರಮ ದೇಶದ ಜನರ ಸಂಪರ್ಕಕ್ಕಿರುವ ಪ್ರಬಲ ಮಾಧ್ಯಮ.
- ದೇಶದ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸುತ್ತಿರುವುದು ಶ್ಲಾಘನೀಯ.
- ಎಲ್ಲರೂ ಒಂದಾಗಿ ದೇಶವನ್ನು ಬಲಪಡಿಸಲು ಪಣ ತೊಡೋಣ.
- “ಸ್ವಚ್ಛತೆಯೇ ಸೇವೆ” ಕರೆಗೆ ಅಪಾರ ಬೆಂಬಲ ಸಿಕ್ಕಿದ್ದು ಸಂತಸದ ಸಂಗತಿ.
- ಆಹಾರ ಮನುಷ್ಯನ ಜೀವ ಉಳಿಸುವ ಅಮೂಲ್ಯ ಇಂಧನ, ಆಹಾರ ಉಳಿಸೋಣ.
- ಮನ್ ಕೀ ಬಾತ್ ಕಾರ್ಯಕ್ರಮವನ್ನು ಎಂದಿಗೂ ರಾಜಕೀಯದಿಂದ ದೂರ ಇಟ್ಟಿದ್ದೇನೆ.
- ವಿವಿಧತೆಯೇ ದೇಶದ ಏಕತೆ, ಅದನ್ನು ಉಳಿಸಿಕೊಂಡು ಹೋಗೋಣ.
- Advertisement -
Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
March 30, 2023
Leave A Reply