ರೋಹಿಂಗ್ಯಾಗಳು ಎಂಥವರು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ

ನೇಪಿನ್ಯಾವ್: ಅತ್ತ ಮ್ಯಾನ್ಮಾರ್ ದೇಶವೇ ರೋಹಿಂಗ್ಯಾ ಮುಸ್ಲಿಮರನ್ನು ತನ್ನ ದೇಶದಲ್ಲಿ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರೆ, ಇತ್ತ ಭಾರತದಲ್ಲಿ ಮಾತ್ರ ಅವರನ್ನು ಸಹೋದರರಂತೆ ಸಾಕಬೇಕು ಎಂದು ಎಐಎಂಐಎಂನ ಅಸಾದುದ್ದೀನ್ ಓವೈಸಿಯಂಥವರು ಭಾಷಣ ಬಿಗಿಯುತ್ತಾರೆ.
ಆದರೆ ಮ್ಯಾನ್ಮಾರಿನ ರಾಖಿನೆ ರಾಜ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರ ಹಿಂಸೆಯ ಅಟ್ಟಹಾಸಕ್ಕೆ ಬರೋಬ್ಬರಿ 28 ಹಿಂದೂಗಳು ಬಲಿಯಾಗಿದ್ದಾರೆ.
ಕೋಮು ದ್ವೇಷದ ಹಿನ್ನೆಲೆಯಲ್ಲಿ ರೋಹಿಂಗ್ಯಾಗಳ ಸಂಘಟನೆಯಾದ ಅರಾಖಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ ಸದಸ್ಯರು ನಡೆಸಿದ ಹಿಂಸೆಯಲ್ಲಿ 28 ಹಿಂದೂಗಳ ಹತ್ಯೆಯಾಗಿದ್ದು, ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮ್ಯಾನ್ಮಾರ್ ಸೇನೆಯೇ ಮಾಹಿತಿ ನೀಡಿದೆ.
ಮ್ಯಾನ್ಮಾರಿನಲ್ಲಿ 11 ಲಕ್ಷದಷ್ಟು ರೋಹಿಂಗ್ಯಾ ಮುಸ್ಲಿಮರಿದ್ದು, ಇದುವರೆಗೆ ರಾಖಿನೆ ಸೇರಿ ಹಲವು ಪ್ರದೇಶದಲ್ಲಿ 30 ಸಾವಿರಕ್ಕೂ ಅಧಿಕ ಬೌದ್ಧರು ಹಾಗೂ ಹಿಂದೂಗಳನ್ನು ಬೇರೆ ಪ್ರದೇಶಕ್ಕೆ ದೂಡಿದ್ದಾರೆ. ಹಿಂಸೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಹೀಗೆ, ರೋಹಿಂಗ್ಯಾ ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲೆಲ್ಲ ಹಿಂಸೆಯ ಪರಾಕಾಷ್ಠೆ ಮೆರೆದಿದ್ದಾರೆ. ಇಂಥವರನ್ನು ಸಾಕಬೇಕು ಎನ್ನುವ ಅಸಾದುದ್ದೀನ್ ಓವೈಸಿ, ಸೀತಾರಾಂ ಯೆಚೂರಿಯವರ ಬುದ್ಧಿಗೆ ಏನೆನ್ನಬೇಕು?