ಯಕ್ಷಗಾನದ ಸೀತೆ ಪಾತ್ರಧಾರಿಯಿಂದ ವಾಟ್ಸ್ ಆ್ಯಪ್, ಫೇಸ್ ಬುಕ್ ಸಂಭಾಷಣೆ: ರಾಮಾಯಣಕ್ಕೆ ಅವಮಾನ ಎಂದು ಟೀಕೆ
Posted On September 25, 2017
0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಐವರ್ನಾಡಿನಲ್ಲಿ ನಡೆದ ಯಕ್ಷಗಾನದಲ್ಲಿ ಸೀತೆ ಪಾತ್ರಧಾರಿ ನಡೆಸಿದ ಫೇಸ್ ಬುಕ್, ವಾಟ್ಸ್ ಆ್ಯಪ್, ವೈಫೈ ಕುರಿತ ಸಂಭಾಷಣೆಗೆ ಭಾರಿ ಟೀಕೆ ವ್ಯಕ್ತವಾಗಿದ್ದು, ಇದು ರಾಮಾಯಣಕ್ಕೆ ಮಾಡಿದ ಅವಮಾನ ಎಂದು ಆರೋಪಿಸಲಾಗಿದೆ.
ಈ ಕುರಿತ ವಿಡಿಯೊ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನ ಆಯೋಜಕರು, ಕಲಾವಿದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಶಾರದಾ ಪೂಜಾ ಮಹೋತ್ಸವದ ಅಂಗವಾಗಿ ಯಕ್ಷಗಾನ ಆಯೋಜಿಸಲಾಗಿದ್ದು, ಸೀತೆ ಪಾತ್ರಧಾರಿಯಿಂದ ಸಾಮಾಜಿಕ ಜಾಲತಾಣಗಳ ಕುರಿತ ಸಂಭಾಷಣೆ ಉಚ್ಚರಿಸಿದ್ದು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ ಎಂದು ಜನ ಆಕ್ಷೇಪಿಸಿದ್ದಾರೆ.
ಈ ಕಾರ್ಯಕ್ರಮವನ್ನು ಸಚಿವ ರಮಾನಾಥ ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025









