ಗಡಿಯಲ್ಲಿ ರೋಹಿಂಗ್ಯಾಗಳ ಒಳನುಸುಳುವಿಕೆ ತಡೆಯಲು ಸೈನಿಕರ ಬಳಸುವ ತಂತ್ರ ಎಂಥಾದ್ದು?
ಕೋಲ್ಕತಾ: ರೋಹಿಂಗ್ಯಾ ಮುಸ್ಲಿಮರು ಗಡಿಯಲ್ಲಿ ಒಳನುಸುಳುವುದು ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಎಸ್ಎಫ್ ಯೋಧರು ನಾನಾ ತಂತ್ರ ರೂಪಿಸುತ್ತದ್ದಾರೆ.
ಪಶ್ಚಿಮ ಬಂಗಾಳದ ಗಡಿಯ 22 ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ಪಡೆ ನಿಯೋಜಿಸಿದ್ದು, ಭಾರಿ ಭದ್ರತೆ ಒದಗಿಸಿದ್ದಾರೆ. ಅಲ್ಲದೆ ಸ್ಥಳೀಯ ಬೆಂಗಾಳಿ ಭಾಷೆ ಬಳಸುವ ಮೂಲಕ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿ ಒಳನುಸುಳದಂತೆ ತಡೆಯುತ್ತಿದ್ದಾರೆ.
“ಗಡಿಯಲ್ಲಿ ಒಳನುಸುಳುವುದು ನಿಷಿದ್ಧ. ಹಾಗಾಗಿ ಒಳನುಸುಳುಲು ಯತ್ನಿಸುವ ಪ್ರತಿಯೊಬ್ಬನನ್ನು ಯೋಧರು ಪ್ರಶ್ನಿಸುತ್ತಾರೆ. ಕೆಲವೊಂದು ಬಾರಿ ರೋಹಿಂಗ್ಯಾಗಳು ನಾವು ಬಾಂಗ್ಲಾದೇಶಿಯರು ಎಂದು ಹೇಳುತ್ತಾರೆ. ಆದರೂ ಬೆಂಗಾಳಿ ಮೂಲಕ ಅವರ ಜತೆ ಮಾತನಾಡಿ ಒಳನುಸುಳದಂತೆ ತಡೆಯಲಾಗುತ್ತದ” ಎಂದು ಬಿಎಸ್ಎಫ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಉತ್ತರ 24 ಪರಗಣ, ಮುರ್ಷಿದಾಬಾದ್, ಕೃಷ್ಣನಗರ ಸೇರಿ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಸೈನಿಕರನ್ನು ನಿಯೋಜಿಸಿ, ಅವರೆಲ್ಲ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಲು ಸ್ಥಳೀಯ ಭಾಷೆಯಲ್ಲಿಯೇ ಸಂಪರ್ಕ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
2017ರ ಆಗಸ್ಟ್ ಅಂತ್ಯದವರೆಗೆ 176 ರೋಹಿಂಗ್ಯಾ ಮುಸ್ಲಿಮರನ್ನು ದೇಶದೊಳಕ್ಕೆ ನುಸುಳುವುದನ್ನು ತಡೆಯಲಾಗಿದ್ದು, ಹೆಚ್ಚಿನ ಭದ್ರತೆ ಹಾಗೂ ಒಳನುಸುಳುವಿಕೆ ತಡೆಯಲು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದಿಂದಲೂ ನುಸುಳುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ 4,096 ಚ.ಕೀ.ಮೀ. ಹಂಚಿಕೊಂಡಿದ್ದು, ಪಶ್ಚಿಮ ಬಂಗಾಳವೊಂದೇ 2,216.7 ಚ.ಕೀ.ಮೀ. ಗಡಿ ಹಂಚಿಕೊಂಡಿದೆ.
ಸುಮಾರು 40 ಸಾವಿರ ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದು, ಕೇಂದ್ರ ಸರಕಾರ ಅವರ ಗಡಿಪಾರಿಗೆ ಸಹ ಚಿಂತನೆ ನಡೆಸಿದೆ.
Leave A Reply