ಪಾಕಿಸ್ತಾಕ್ಕೆ ಮತ್ತೊಂದು ನಿರ್ದಿಷ್ಟ ದಾಳಿಯ ಎಚ್ಚರಿಕೆ ನೀಡಿದ ರಾವತ್
ದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾನುವಾರ ಉರಿ ಮಾದರಿಯ ದಾಳಿ ಮಾಡಲು ಯತ್ನಿಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಚಾಟಿಯೇಟು ನೀಡಿದ್ದು, “ಮತ್ತೊಂದು ನಿರ್ದಿಷ್ಟ ದಾಳಿ”ಯ ಎಚ್ಚರಿಕೆ ನೀಡಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಪಾಕಿಸ್ತಾನದ ವಿರುದ್ಧ ಮಾಡಿದ್ದ ನಿರ್ದಿಷ್ಟ ದಾಳಿ ಆ ರಾಷ್ಟ್ರಕ್ಕೆ ದಿಟ್ಟ ಸಂದೇಶವಿದ್ದಂತೆ. ಆದರೆ ಪಾಕಿಸ್ತಾನ ಪಾಠ ಕಲಿಯದಿದ್ದರೆ ಮುಂದೆ ಯಾವ ನಿರ್ಧಾರ ಕೈಗೊಳ್ಳಲು ಸಹ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ 778 ಕಿ.ಮೀ. ಗಡಿಯನ್ನು ನಾವು ಕಾಯುತ್ತೇವೆ. ಒಂದು ವೇಳೆ ಯಾರೇ, ಯಾವಾಗ ಬೇಕಾದರು ನುಗ್ಗಲು ಯತ್ನಿಸಿದರೆ, ಅವರ ವಿರುದ್ಧ ಹೋರಾಡು ಸೇನೆ ಶಕ್ತವಾಗಿದೆ ಎಂದಿದ್ದಾರೆ.
ನಿರ್ದಿಷ್ಟ ದಾಳಿ ಪಾಕಿಸ್ತಾನಕ್ಕೆ ಉಗ್ರವಾದದ ವಿರುದ್ಧದ ಸಂದೇಶವಾಗಿದ್ದು, ಪಾಕಿಸ್ತಾನ ನಮ್ಮ ದಾಳಿಯ ಹಿಂದಿನ ಸಂದೇಶ ಅರಿತಿದೆ ಎಂದು ಭಾವಿಸಿದ್ದೇವೆ. ಆದರೆ ಹಾಗೊಂದು ವೇಳೆ ಪಾಕಿಸ್ತಾನ ಪಾಠ ಕಲಿಯದಿದ್ದರೆ, ನಾವು ಮತ್ತೊಂದು ಪಾಠಕ್ಕೆ ಸಜ್ಜಾಗುತ್ತೇವೆ ಎಂದು ಮತ್ತೊಂದು ನಿರ್ದಿಷ್ಟ ದಾಳಿಯ ಎಚ್ಚರಿಕೆ ನೀಡಿದ್ದಾರೆ.
ನಾವು ಉಗ್ರರ ಯಾವುದೇ ಚಟುವಟಿಕೆಯನ್ನು, ದಾಳಿಯನ್ನು ಎದುರಿಸಲು ಸಜ್ಜಾಗಿದ್ದೇವೆ. ಒಳನುಸುಳುವ ಉಗ್ರರನ್ನು ಗುಂಡಿ ತೋಡಿ ಹೂತು ಹಾಕದೇ ಬಿಡುವುದಿಲ್ಲ ಎಂದಿದ್ದಾರೆ.
2016ರ ಸೆ.29ರಂದು ಭಾರತ ಪಾಕಿಸ್ತಾನದ ಮೇಲೆ ನಿರ್ದಿಷ್ಟ ದಾಳಿ ಮಾಡಿ 19 ಪಾಕಿಸ್ತಾನಿಯರನ್ನು ಹೊಡೆದುರುಳಿಸಿತ್ತು.
Leave A Reply