ದೇವಾಲಯ ತೆರವು, ಅದೇ ಮಸೀದಿಯಾಗಿದ್ದರೆ ಸಿದ್ದರಾಮಯ್ಯನವರು ಸುಮ್ಮನಿರುತ್ತಿದ್ದರೆ?
ಗೋವಾದ ಬೈನಾ ಬೀಚ್ ನಲ್ಲಿ ಮತ್ತೆ ಜೆಸಿಬಿ ಸದ್ದು ಕೇಳಿಸುತ್ತಿದೆ. ಕನ್ನಡಿಗರು ಅನಾಥರಾಗಿದ್ದಾರೆ. ಕನ್ನಡಿಗರು ಬಿಡಿ, ದೇವರಿರುವ ದೇವಾಲಯಗಳಿಗೇ ರಕ್ಷಣೆ ಇಲ್ಲದಂತಾಗಿದೆ.
ಇಷ್ಟಾದರೂ ಯಾರೊಬ್ಬರೂ ಬಾಯಿಬಿಡುತ್ತಿಲ್ಲ. ರಾಜ್ಯದ ಸಿದ್ದರಾಮಯ್ಯನವರೂ ಒಂದೂ ಮಾತನಾಡುತ್ತಿಲ್ಲ. ಕನ್ನಡಿಗರ, ಹಿಂದೂಗಳ, ದೇವಾಲಯಗಳ ರಕ್ಷಣೆ ಬಗ್ಗೆ ಗೋವಾ ಮುಖ್ಯಮಂತ್ರಿ ಜತೆ ಮಾತನಾಡುತ್ತಿಲ್ಲ.
ಏಕೆ…
ಏಕೆಂದರೆ ಅವರೆಲ್ಲರೂ ಹಿಂದೂಗಳು. ದೇವಾಲಯ ಹಿಂದೂಗಳವು, ದೇವರು ಹಿಂದೂ. ಅದೇ ಮಸೀದಿಯಾಗಿದ್ದರೆ, ಅಲ್ಲಿರುವರೆಲ್ಲರೂ ಮುಸ್ಲಿಮರು, ಅಲ್ಪಸಂಖ್ಯಾತರು ಆಗಿದ್ದರೆ ಇದೇ ಸಿದ್ದರಾಮಯ್ಯನವರು ಸುಮ್ಮನಾಗಿರುತ್ತಿದ್ದರೆ?
ಪರ ರಾಜ್ಯ ಬಿಡಿ ರಾಜ್ಯದಲ್ಲೇ, ಹಿಂದೂಗಳ, ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಆದರೂ ಸಿದ್ದರಾಮಯ್ಯನವರು ಯಾವುದೇ ಕ್ರಮ ಕೈಗೊಂಡಿಲ್ಲ.
ಆದರೆ ಇದೇ ಮುಖ್ಯಮಂತ್ರಿಯವರು ಹರಿಯಾಣದಲ್ಲಿ ಜುನೈದ್ ಖಾನ್ ಎಂಬ ಮುಸ್ಲಿಂ ಯುವಕನ ಹತ್ಯೆಯಾದರೆ ಕೇಂದ್ರ ಸರಕಾರದತ್ತ ಬೆರಳು ಮಾಡುತ್ತಾರೆ. ಮುಸ್ಲಿಮರ ಹತ್ಯೆಯಾದರೆ ಕರಳು ಚುರುಕ್ ಎನ್ನುತ್ತದೆ.
ಇದೇ ಇಬ್ಬಂದಿತನವೇ ಮುಖ್ಯಮಂತ್ರಿಯವರ ಬಂಡವಾಳವಾಗಿದೆ. ರಾಜ್ಯದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದರೂ ಅದಕ್ಕೆ ಸಿದ್ಧಾಂತವೇ ಕಾರಣ ಎಂದು ಷರಾ ಬರೆಯುತ್ತಾರೆ.
ರಾಜ್ಯದ ನೇತೃತ್ವ ವಹಿಸಿಕೊಂಡವರು, ಜಾತ್ಯತೀತ, ಧರ್ಮಾತೀತರಾಗಿ ನಡೆದುಕೊಳ್ಳಬೇಕು. ರಾಜ್ಯದ ಜನರ ರಕ್ಷಣೆ ಮಾಡಬೇಕು. ಆದರೆ ನಮ್ಮ ಮುಖ್ಯಮಂತ್ರಿ ಮಹೋದಯರು ಮಾತ್ರ, ಜಾತಿ, ಧರ್ಮದ ಆಧಾರದ ಮೇಲೆ ಯೋಜನೆ ಜಾರಿಗೊಳಿಸಲು ಮುಂದಾಗುತ್ತಾರೆ. ಇದಕ್ಕೆ ಶಾದಿ ಭಾಗ್ಯದಂತಹ ಯೋಜನೆಗಳೇ ಸಾಕ್ಷಿ.
ಗೋವಾದಲ್ಲಿ ಕನ್ನಡಗಿರ, ಹಿಂದೂ ದೇವಾಲಯಗಳ ಧ್ವಂಸಗೊಳಿಸಲಾಗುತ್ತಿದೆ. ಮುಖ್ಯಮಂತ್ರಿಯವರೇ ನಿಮಗೆ ಅಂತಃಕರಣ ಎಂಬುದಿದ್ದರೆ ಮೊದಲು ಅವರನ್ನು ರಕ್ಷಿಸಿ.
-ನವೀನ್ ಪೆಲ್ಲತಡ್ಕ, ಪತ್ರಿಕೋದ್ಯಮ ವಿದ್ಯಾರ್ಥಿ
Leave A Reply