ಮತ್ತೆ ಎಲುಬಿಲ್ಲದ ನಾಲಗೆ ಹರಿಬಿಟ್ಟ ಭಗವಾನ್
ಇತ್ತೀಚೆಗೆ ಯಾವುದೇ ಪುಸ್ತಕ ಬಿಡುಗಡೆ ಮಾಡದಿದ್ದರೂ ಸಾಹಿತಿ, ಯಾವುದೇ ಸತ್ವಯುತ ಹೇಳಿಕೆ, ಉಪನ್ಯಾಸ ನೀಡದಿದ್ದರೂ ಚಿಂತಕ, ಬುದ್ಧಿಜೀವಿ ಎಂದೆಲ್ಲ ಕರೆಸಿಕೊಳ್ಳು ಪ್ರೊ.ಕೆ.ಎಸ್. ಭಗವಾನ್ ಅವರು ಮತ್ತೆ ತಮ್ಮ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದು, “ರಾಮ ದೇವರೇ ಅಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ರಾಮ ಬೇರೆಯವರ ಜಾತಿ ಕೇಳಿದ್ದ. ದೇವಮಾನವರು ಬೇರೆಯವರ ಜಾತಿ ಕೇಳುವುದಿಲ್ಲ. ರಾಮ ಕೇಳಿರುವುದರಿಂದ ಆತ ದೇವರಲ್ಲ” ಎಂದಿದ್ದಾರೆ.
ತಮ್ಮ ಈ ಹೊಸ ವಾದಕ್ಕೆ ವಾಲ್ಮೀಕಿರನ್ನು ತಳಕು ಹಾಕಿರುವ ಭಗವಾನ್, ರಾಮ ದೇವರೇ ಅಲ್ಲ ಎಂದು ವಾಲ್ಮೀಕಿಯೇ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಭಗವದ್ಗೀತೆಯಲ್ಲಿರುವ ಕೆಲವು ಅಧ್ಯಾಯ ಸುಟ್ಟುಹಾಕುವೆ ಎಂದು ಭಗವಾನ್ ಹೇಳಿದ್ದರು. ಒಟ್ಟಿನಲ್ಲಿ ಆಗಾಗ ಸುದ್ದಿಯಲ್ಲಿ ಇರಬಯಸುವ ಭಗವಾನ್ ಇಂಥಾ ಹೇಳಿಕೆ ನೀಡುತ್ತಾರೆ.
ಹಿಂದೂ ಧರ್ಮದ ಬಗ್ಗೆ ಬೇಕಾಬಿಟ್ಟಿ ಮಾತನಾಡುವ ಇವರು, ಮುಸ್ಲಿಮರು ಮಸೀದಿಯೊಳಗೆ ಮಹಿಳೆಯರನ್ನು ಬಿಡದಿರುವುದು, ಧರ್ಮಕ್ಕಾಗಿ ಸತ್ತರೆ ಸ್ವರ್ಗದಲ್ಲಿ 72 ಕನ್ಯೆಯರು ಸಿಗುತ್ತಾರೆ ಎಂಬ ಮೌಢ್ಯವನ್ನು, ಕ್ರಿಶ್ಚಿಯನ್ನರ ಮತಾಂತರದ ಕುರಿತು ಮಾತನಾಡುವುದಿಲ್ಲ. ಹಾಗೆ ಮಾತನಾಡುವ ಗುಂಡಿಗೆಯಿಲ್ಲ.
Leave A Reply