ಭಯೋತ್ಪಾದನೆಗೆ ಹಣ ನೀಡುವವರ ನಿರ್ಬಂಧಿಸಿ: ಪಾಕಿಸ್ತಾನಕ್ಕೆ ಭಾರತ ಟಾಂಗ್
ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ರಾಷ್ಟ್ರಗಳ ವಿರುದ್ಧ ನಿರ್ಬಂಧನೆ ಹೇರಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದೆ.
ಉಗ್ರರ ಉಪಟದಿಂದ ನಲುಗಿರುವ ಪಾಕಿಸ್ತಾನದ ಸಾರ್ವಭೌಮತೆ ಮತ್ತು ಏಕತೆ ಕಾಪಾಡು ಬೆಂಬಲ ನೀಡಬೇಕು ಹಾಗೂ ಅಲ್ಲಿ ಉಗ್ರರಿಗೆ ಬೆಂಬಲ ನೀಡುವವರನ್ನು ನಿರ್ಬಂಧಿಸಬೇಕು ಎಂದು ಭಾರತದ ಕಾಯಂ ಸದಸ್ಯ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಉಗ್ರರಿಗೆ ಪಾಲನೆ-ಪೋಷಣೆ ದೊರೆಯದಂತೆ ಮಾಡುವುದು ಅಂತಾರಾಷ್ಟ್ರೀಯ ಸಂಸ್ಥೆಗಳ ಆದ್ಯತೆಯಾಗಬೇಕು. ಈ ಕುರಿತು ಮೌನವಾಗಿದ್ದರೆ ಪೋಷಕ ರಾಷ್ಟ್ರಗಳದ್ದೇ ಉಗ್ರವಾದದಲ್ಲಿ ಮೇಲಗೈಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಲಷ್ಕರೆ ತಯ್ಯಬಾ, ತಾಲಿಬಾನ್, ಹಿಜ್ಬುಲ್ ಮುಜಾಹಿದ್ದೀನ್, ಹಕ್ಕಾನಿ ಜಾಲ, ಅಲ್ ಖೈದಾ…ಇವೆಲ್ಲ ಉಗ್ರ ಸಂಘಟನೆಗಳೇ. ಇವರಲ್ಲಿ ಒಳ್ಳೆಯವರು ಹಾಗೂ ಕೆಟ್ಟವರು ಅಂತ ಇಲ್ಲ. ಈ ಸಂಘಟನೆಗಳ ಸದಸ್ಯರೆಲ್ಲರೂ ಉಗ್ರಗಾಮಿಗಳೇ. ಹಾಗಾಗಿ ಇವರಿಗೆ ನೆಲೆ ಸಿಗದಂತೆ ಮಾಡಬೇಕು. ಆಗ ಮಾತ್ರ ಭಯೋತ್ಪಾದನೆ ತಡೆಯಲು, ಇಂಥಾ ಸಂಘಟನೆಗಳಿಗೆ ಬೆಂಬಲ ನೀಡುವವರಿಗೆ ಪಾಠ ಕಲಿಸಲು ಸಾಧ್ಯ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
Leave A Reply