ಹಿಂದೂ ಯುವತಿಯನ್ನು ಹೊತ್ತೊಯ್ದರು, ಬಳೆ ಒಡೆದರು, ಸಿಂಧೂರ ಅಳಿಸಿದರು: ಇದು ರೋಹಿಂಗ್ಯಾ ಮುಸ್ಲಿಮರ ಕರಾಳ ಮುಖ
ದೇಶದ ರಾಜಕಾರಣಿಗಳಾದ ಅಸಾದುದ್ದೀನ್ ಓವೈಸಿ, ಸೀತಾರಾಮ್ ಯೆಚೂರಿ, ವರುಣ್ ಗಾಂಧಿ ರೋಹಿಂಗ್ಯಾ ಮುಸ್ಲಿಮರನ್ನು ದೇಶದ ಒಡಲಲ್ಲಿಟ್ಟುಕೊಂಡು ಸಾಕಬೇಕು ಎನ್ನುತ್ತಾರೆ.
ಆದರೆ ಅದೇ ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ನಲ್ಲಿ 92 ಹಿಂದೂಗಳನ್ನು ಕೊಂದಿದ್ದಾರೆ…
ಈಗ ಮತ್ತೊಂದು ಅಟ್ಟಹಾಸದ ನಿದರ್ಶನ ಸಿಕ್ಕಿದೆ…
ಬಾಂಗ್ಲಾದೇಶದ ನಿರಾಶ್ರಿತರ ತಾಣದಲ್ಲಿ ವಾಸವಾಗಿರುವ ರೋಹಿಂಗ್ಯಾ ಮುಸ್ಲಿಮರು ಹಿಂದೂ ರೋಹಿಗ್ಯಾ ಪಂಗದ ಮಹಿಳೆಯೊಬ್ಬರನ್ನು ಗುಡ್ಡಗಾಡು ಪ್ರದೇಶಕ್ಕೆ ಹೊತ್ತೊಯ್ದಿದಿದ್ದಾರೆ. ಬಳೆ ಒಡೆದು, ಸಿಂಧೂರ ಅಳಿಸಿ ರೋಹಿಂಗ್ಯಾ ಮುಸ್ಲಿಮನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ.
ಹೌದು, ಪೂಜಾ ಮಲ್ಲಿಕ್ ಕಳೆದ ತಿಂಗಳು ಮ್ಯಾನ್ಮಾರ್ ನಲ್ಲಿ ನಡೆದ ಗಲಭೆಯಲ್ಲಿ ತನ್ನ ಗಂಡನನ್ನು ಕಳೆದುಕೊಂಡಾಕೆ. ನಿರಾಶ್ರಿತಳಾಗಿ ಬಾಂಗ್ಲಾದೇಶದಲ್ಲಿ ಆಶ್ರಯಪಡೆದಾಕೆ.
ಈಕೆಯನ್ನು ಹೊತ್ತೊಯ್ದ ರೋಹಿಂಗ್ಯಾಗಳು ಬಳೆ ಒಡೆದು, ಸಿಂಧೂರ ಅಳಿಸಿದ್ದಲ್ಲದೇ ರೋಹಿಂಗ್ಯಾ ಮುಸ್ಲಿಮನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂದು ಆಕೆಯೇ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಅವಳನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಪೂಜಾ ಈಗ ರಾಬಿಯಾ ಆಗಿದ್ದಾಳೆ. ಅಲ್ಲದೆ, ಶಿಬಿರಗಳಲ್ಲಿ ಹಿಂದೂ ರೋಹಿಂಗ್ಯಾಗಳು ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ದಿನೇದಿನೆ ರೋಹಿಂಗ್ಯಾ ಮುಸ್ಲಿಮರ ಹಿಂಸೆ, ಉಪಟಳ, ಮತಾಂತರ, ಹಿಂದೂಗಳ ಹತ್ಯೆ ಜಾಸ್ತಿಯಾಗುತ್ತಿದ್ದರೆ, ಇತ್ತ ದೇಶದಲ್ಲಿರುವ ಜಾತ್ಯತೀತವಾದಿಗಳು ಅವರು ಅಪಾಯವಾದರೂ ಸರಿಯೇ ದೇಶದಲ್ಲಿಟ್ಟುಕೊಂಡು ಸಾಕೋಣ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ.
Leave A Reply