ಮೋದಿ ತೆಗಳುವವರಿಗೆ ಕಹಿ ಸುದ್ದಿ: ಜಾಗತಿಕ ಸ್ಪರ್ಧಾ ಸೂಚ್ಯಂಕದಲ್ಲಿ ಭಾರತಕ್ಕೆ 40ನೇ ಸ್ಥಾನ
ನೋಟ್ಯಂತರ ಬಳಿಕ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಬಂತು, ಜಿಎಸ್ ಟಿಯಿಂದಲೂ ಇದೇ ಆಯಿತು ಎಂದು ಬೊಬ್ಬೆ ಹಾಕುವವರಿಗೆ ದುಃಖದ ಸುದ್ದಿಯೊಂದು ಬಂದಿದ್ದು, ಭಾರತ ಜಾಗತಿಕ ಸ್ಪರ್ಧಾ ಸೂಚ್ಯಂಕದಲ್ಲಿ ಭಾರತ 40ನೇ ಹಾಗೂ ಬ್ರಿಕ್ಸ್ ರಾಷ್ಟ್ರಗಳಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಬಿಡುಗಡೆಗೊಳಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.
ಆರ್ಥಿಕ ಬಲ ಹೊಂದಿರುವ 137 ರಾಷ್ಟ್ರಗಳಲ್ಲಿ ಭಾರತಕ್ಕೆ ಇಷ್ಟನೇ ರ್ಯಾಂಕ್ ಲಭಿಸಿದ್ದು, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಸ್ವಿಡ್ಜರ್ ಲೆಂಡ್, ಅಮೆರಿಕ, ರಷ್ಯಾ ಮೊದಲ ಮೂರು ಸ್ಥಾನ ಪಡೆದರೆ, ಚೀನಾ 27 ಹಾಗೂ ರಷ್ಯಾ 38ನೇ ಸ್ಥಾನ ಪಡೆದಿದೆ. ಅಷ್ಟೇ ಅಲ್ಲ, ಭಾರತದ ವಿತ್ತೀಯ ಸ್ಥಿತಿ ದಕ್ಷಿಣ ಏಷ್ಯಾದಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಸಂಸ್ಥೆಗಳ ಕಾರ್ಯನಿರ್ವಹಣೆ, ಮೂಲ ಸೌಕರ್ಯ, ಪ್ರಾಥಮಿಕ ಶಿಕ್ಷಣ, ಕಾರ್ಮಿಕರ ದಕ್ಷತೆ, ಹಣಕಾಸು ಮಾರುಕಟ್ಟೆ ಅಭಿವೃದ್ಧಿ, ಮಾರುಕಟ್ಟೆ ವ್ಯಾಪ್ತಿ ಹಾಗೂ ತಂತ್ರಜ್ಞಾನ ಏಳಿಗೆ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ರ್ಯಾಂಕ್ ನೀಡಲಾಗಿದೆ.
Leave A Reply