ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮುಖಭಂಗ: ಭಾರತದ ಟೊಮ್ಯಾಟೋ ಬೇಡ ಎಂದ ಪಾಕಿ

ಈ ಪಾಕಿಸ್ತಾನವೇ ಹೀಗೆ, ನೇರಾ ನೇರ ಯುದ್ಧ ಮಾಡುವುದಿಲ್ಲ. ಹುರುಳಿರುವ ವಾದ ಮಾಡುವುದಿಲ್ಲ. ಬೆಟ್ಟಕ್ಕೆ ನಾಯಿ ಬೊಗಳಿ ಸತ್ತಿತು ಎಂಬ ಮಾತಿನಂತೆ ಭಾರತದ ವಿರುದ್ಧ ಆಗಾಗ ಗುಟುರು ಹಾಕುತ್ತದೆ. ಗುರ್ ಎನ್ನುತ್ತದೆ. ನಾವೇನು ಸುಮ್ಮನೆ ಇರುತ್ತೇವೆಯೇ? ಪಾಕಿಸ್ತಾನದ ತಲೆಗೊಂದು ಮೊಟಕುತ್ತೇವೆ. ಆಗ ಪಾಕಿಸ್ತಾನ ತೋಯ್ದ ಕೋಳಿಯಂತಾಗುತ್ತದೆ. ಅದಾದ ಬಳಿಕ ಮತ್ತೆ ಕೈಲಾಗದ ನರಿಯಂತೆ ಮೆಲ್ಲಗೆ ಹಿಂಬಾಗಿಲಿನಿಂದ ಏನು ಕುತಂತ್ರ ಮಾಡಬೇಕು ಎಂದು ಹೊಂಚು ಹಾಕುತ್ತದೆ.
ಈ ಅದೇ ಪಾಕಿಸ್ತಾನ ಎಂಬ ಕಳ್ಳಬೆಕ್ಕು ಮತ್ತೊಂದು ಹೊಂಚು ಹಾಕಿದೆ.
ಹೌದು, ವಿಶ್ವಸಂಸ್ಥೆಯಲ್ಲಿ ಭಾರತದಿಂದ ಭಾರಿ ಮುಖಭಂಕ್ಕೀಡಾಗಿರುವ ಪಾಕಿಸ್ತಾನ ಈಗ ಭಾರತದಿಂದ ಟೊಮ್ಯಾಟೊ ಆಮದು ಮಾಡಿಕೊಳ್ಳುವುದಿಲ್ಲ ಎಂಬ ಮೊಂಡು ವಾದ ಮುಂದಿಟ್ಟಿದೆ. ಈ ಕುರಿತು ಆಹಾರ ಸಚಿವ ಸಿಕಂದರ್ ಹಯಾತ್ ಬೋಸನ್ ತಿಳಿಸಿದ್ದಾರೆ.
ಆದರೆ ಇಂಥ ಮೊಂಡು ಹಾಗೂ ಅಹಂಕಾರದ ನಿರ್ಧಾರದಿಂದ ಪಾಕಿಸ್ತಾನಕ್ಕೇ ನಷ್ಟ. ಏಕೆಂದರೆ ಸದ್ಯ ಪಾಕಿಸ್ತಾನದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ, ಈರುಳ್ಳಿ ಬೆಲೆ 300 ರೂಪಾಯಿಗೆ ಏರಿಕೆಯಾಗಿತ್ತು. ಇದನ್ನು ಸರಿದೂಗಿಸಲು ಪಾಕಿಸ್ತಾನ ಭಾರತದಿಂದ ಟೊಮ್ಯಾಟೊ, ಈರುಳ್ಳಿ ಆಮದು ಮಾಡಿಕೊಂಡು, 150-160 ರೂಪಾಯಿಗೆ ಕೆ.ಜಿ.ಯಂತೆ ಮಾರಾಟ ಮಾಡುತ್ತಿತ್ತು.
ಆದರೆ ಈಗ ಯಾವುದೋ ಕಾರಣಕ್ಕೆ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಇದರಿಂದ ಪಾಕಿಸ್ತಾನಕ್ಕೇ ನಷ್ಟ ಎಂಬದನ್ನು ನೆರೆರಾಷ್ಟ್ರ ಮರೆತಂತಿದೆ. ಆದಾಗ್ಯೂ, ಈ ಆಮದು ಸ್ಥಗಿತದಿಂದ ಭಾರತಕ್ಕೇನು ನಷ್ಟವಿಲ್ಲದಿದ್ದರೂ, ದ್ವಿಪಕ್ಷೀಯ ಸಂಬಂಧ ಬಿಗಡಾಯಿಸುವ ಸಾಧ್ಯತೆಯಿದೆ.
Leave A Reply