• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭೂಕಂಪ ಆಗುತ್ತೆ ಎಂದು ಪ್ರಧಾನಿಗೆ ಪತ್ರ ಬರೆದ ವಿಜ್ಞಾನಿ!

Naresh Shenoy Posted On September 27, 2017
0


0
Shares
  • Share On Facebook
  • Tweet It

ಡಿಸೆಂಬರ್ 31 ರ ಒಳಗೆ ಭಾರತದ ಕಡಲ ತೀರಗಳಲ್ಲಿ ಆತಂಕಕಾರಿ ವಿದ್ಯಮಾನವೊಂದು ಘಟಿಸಲಿದೆ ಎನ್ನುವ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಇದನ್ನು ಮಾಧ್ಯಮಗಳು ಹಬ್ಬಿಸುತ್ತಿರುವ ಗಾಳಿಸುದ್ದಿ ಎಂದು ಪಕ್ಕಕ್ಕೆ ಸರಿಸುತ್ತಿರೋ ಅಥವಾ ಗಂಭೀರವಾಗಿ ತೆಗೆದುಕೊಳ್ಳುತ್ತಿರೋ ಎನ್ನುವುದು ನಿಮಗೆ ಬಿಟ್ಟಿದ್ದು. ಯಾಕೆಂದರೆ ದೇಶದಲ್ಲಿ ಪ್ರಳಯ ಆಗುತ್ತದೆ, ಸುನಾಮಿ ಬರುತ್ತದೆ, ದೇಶದಲ್ಲಿ ನೆಲ ಬಾಯಿ ಬಿಡುತ್ತದೆ ಎನ್ನುವ ಸುದ್ದಿ ಇದು ಮೊದಲನೇಯದ್ದು ಅಲ್ಲ, ಬಹುಶ: ಕೊನೆಯದ್ದೂ ಆಗಿರುವುದಿಲ್ಲ. ಯಾಕೆಂದರೆ ಅಂತದ್ದನ್ನು ಜನರು ಈಗ ನಂಬುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸುದ್ದಿ ವರ್ಷದಲ್ಲಿ ನಾಲ್ಕು ಸಲ ಬರುತ್ತೆ. ಅದನ್ನು ನಂಬಿ ಕುಳಿತರೆ ಆಗುತ್ತಾ ಎನ್ನುವುದನ್ನು ನೀವು ಕೇಳಬಹುದು. ಆದರೆ ಈಗ ಬಂದಿರುವ ಮೂಲ ಕೇವಲ ಗಾಳಿಸುದ್ದಿ ಅಲ್ಲ. ಅದನ್ನು ಸುಮ್ಮನೆ ಹಾಗೆ ಪಕ್ಕಕ್ಕೆ ಸರಿಸುವಂತದ್ದು ಅಲ್ಲ.
ಭಾರತದ ಕಡಲ ತೀರಗಳಲ್ಲಿ ಮಾತ್ರವಲ್ಲ ಒಟ್ಟು 11 ರಾಷ್ಟ್ರಗಳಾದ ಚೀನಾ, ಜಪಾನ್, ಪಾಕಿಸ್ತಾನ, ನೇಪಾಲ, ಬಾಂಗ್ಲಾದೇಶ, ಥೈಲ್ಯಾಂಡ್, ಇಂಡೋನೇಶಿಯಾ, ಅಫಘಾನಿಸ್ತಾನ, ಶ್ರೀಲಂಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕೂಡ ಭೂಕಂಪ ಸಂಭವಿಸುತ್ತದೆ ಎಂದು ಬಿಕೆ ರಿಸರ್ಚ್ ಅಸೋಸಿಯೇಶನ್ ಆಫ್ ಇಎಸ್ ಪಿಯ ನಿರ್ದೇಶಕರಾದ ಬಾಬು ಕಲಾಯಿಲ್ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸೆಪ್ಟೆಂಬರ್ 20 ರಂದು ಪತ್ರ ಬರೆದಿದ್ದಾರೆ.
ಸೇಸ್ಮಾ ಎನ್ನುವ ಬಿರುಗಾಳಿ ಕಡಲ ತೀರಗಳನ್ನು ಅಪ್ಪಳಿಸಲಿದ್ದು 120ಕಿಲೋ ಮೀಟರ್ ನಿಂದ 180 ಕಿಲೋ ಮೀಟರ್ ವೇಗದಲ್ಲಿ ಧಾವಿಸುವ ಈ ಚಂಡ ಮಾರುತ ಕಡಲ ತೀರದ ಜನರ ಬದುಕನ್ನು ನಿರ್ನಾಮಗೊಳಿಸಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಒಬ್ಬ ವಿಜ್ಞಾನಿ ನೇರವಾಗಿ ಪ್ರಧಾನ ಮಂತ್ರಿಗೆ ಪತ್ರ ಬರೆದು ದೇಶದ ಈ ಭಾಗಗಳಲ್ಲಿ ಇಂತಿಷ್ಟು ಸಮಯದ ಒಳಗೆ ಚಂಡ ಮಾರುತ ಬೀಸುತ್ತೆ ಎಂದು ಪತ್ರ ಬರೆದಿರುವುದು ಒಂದು ತೂಕವಾದರೆ ಇದೇ ಬಾಬು ಕಲಾಯಿಲ್ 2004 ರಲ್ಲಿ ಭಾರತದಲ್ಲಿ ಸುನಾಮಿ ಬೀಸಲಿದೆ ಎಂದು ಹೇಳಿದ್ದನ್ನು ಮತ್ತು ಅದು ನಿಜವಾದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಮಾಹಿತಿ ಸುಳ್ಳಾಗಿ ಹೋಗಲೂಬಹುದು ಅಥವಾ ಒಂದಿಷ್ಟರ ಮಟ್ಟಿಗೆ ನಿಜವೂ ಆಗಬಹುದು. ಬಾಬು ಕಲಾಯಿಲ್ ಹೇಳಿದ ಈ ಸಂಗತಿ ನಿಜವಾಗುತ್ತಾ ಇಲ್ಲವಾ ಎನ್ನುವುದನ್ನು ಕಾಲವೇ ಹೇಳಲಿದೆ.

0
Shares
  • Share On Facebook
  • Tweet It


babu Kalayilearth quake


Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Naresh Shenoy October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Naresh Shenoy October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search