ಆರೆಸ್ಸೆಸ್ ಕೋಮುವಾದಿ ಸಂಘಟನೆ ಎನ್ನುವವರು ಈ ಸುದ್ದಿ ಓದಿ, ಪೂರ್ವಗ್ರಹದಿಂದ ಹೊರಬನ್ನಿ
ನಾಗ್ಪುರ: ಬಿಜೆಪಿ, ಆರೆಸ್ಸೆಸ್ಸಿನವರು ಎಂದರೆ ಕೋಮುವಾದಿಗಳು ಎಂಬ ಪೂರ್ವಗೃಹ ಇದೆ. ಇಲ್ಲವೇ ಹಾಗೆಂದು ರಾಜಕೀಯ ಪಕ್ಷಗಳು, ಎಡಬಿಡಂಗಿಗಳು, ಬುದ್ಧಿಜೀವಿಗಳು ಆರೋಪ ಮಾಡುತ್ತಾರೆ. ಅದರಲ್ಲೂ, ಆರೆಸ್ಸೆಸ್ ಅಂತೂ ಅನ್ಯ ಧರ್ಮ, ಜಾತಿಯ ಬಗ್ಗೆ ಸೈರಣೆಯೇ ಹೊಂದಿಲ್ಲ, ಬ್ರಾಹ್ಮಣರ ಸಂಘ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ ಇದೆಲ್ಲ ಆರೋಪಗಳಿಗೆ ಸಂಘ ಮಾತ್ರ ಜಾತ್ಯತೀತವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದೇ ಗಮನಾರ್ಹ ಸಂಗತಿ.
ಈಗ ಆರೆಸ್ಸೆಸ್ ಅಂಥಾದ್ದೇ ಜಾತ್ಯತೀತ ನಡೆಯೊಂದನ್ನು ಇಟ್ಟಿದ್ದು, ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುವ ಅದ್ಧೂರಿ ದಸರಾ ಹಬ್ಬದ ಕಾರ್ಯಕ್ರಮಕ್ಕೆ ದಲಿತ ಮುಖಂಡರೊಬ್ಬರನ್ನು ಆಹ್ವಾನಿಸಿದೆ.
ಹೌದು, ಸೆ.30ರಂದು ನಾಗ್ಪುರದ ದೇಶಂಭಾಗ್ ನಲ್ಲಿ ನಡೆಯುವ ದಸರಾ ಉತ್ಸವದಲ್ಲಿ ದಲಿತ ಮುಖಂಡ ಶ್ರೀ ಗುರು ಸಾಧು ರವಿದಾಸ್ ಸಂಪ್ರದಾಯ ಸೊಸೈಟಿಯ ನಿರ್ಮಲ್ ದಾಸ್ ರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ.
ಅಲ್ಲದೆ, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭಾಗವಹಿಸಲಿದ್ದಾರೆ.
ಅಷ್ಟೇ ಅಲ್ಲ, ಕಳೆದ ಭಾನುವಾರ ಆರೆಸ್ಸೆಸ್ಸಿನ ಮಕ್ಕಳ ವಿಭಾಗ ನಡೆಸಿದ ವಾರ್ಷಿಕ ಶಸ್ತ್ರ ಪೂಜೆ ಕಾರ್ಯಕ್ರಮಕ್ಕೆ ಮುಸ್ಲಿಂ ಮುಖಂಡ ಮುನಾವರ್ ಯೂಸುಫ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು.
ಇನ್ನಾದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಬಗ್ಗೆ ಹುರುಳಿಲ್ಲದ ಆರೋಪ ಬಿಡಿ.
Leave A Reply