ಗೋಮಾಂಸ ತಿನ್ನುವವರೇ ಇಲ್ಲಿ ಕೇಳಿ, ನೀವು ಗೋಮಾಂಸ ತಿನ್ನುತ್ತೀರಿ, ಬಳಿಕ ಗೋಮಾಂಸ ನಿಮ್ಮನ್ನು ತಿನ್ನುತ್ತದೆ
ಇತ್ತೀಚೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಒಂದು ಹೇಳಿಕೆ ನೀಡಿದ್ದರು ಹಾಗೂ ಅದು ವಿವಾದಕ್ಕೂ ಕಾರಣವಾಯಿತು…
“ಗೋಮಾಂಸ ತಿಂದರೆ ಆರೋಗ್ಯ ಹಾಳಾಗುತ್ತದೆ”…
ಎಂಬುದು ಅವರ ಹೇಳಿಕೆಯಾಗಿತ್ತು. ಆದರೆ ಇದನ್ನೇ ಸಿದ್ಧಾಂತ, ಹಿಂದುತ್ವದ ಹೇರಿಕೆ ಎಂದು ಕೆಲವರು ಆಹಾರ ಸಂಸ್ಕೃತಿಯ ಹರಣ ಎಂದರು, ಬೇಕಾದ್ದನ್ನು ತಿನ್ನುತ್ತೇವೆ, ಕೇಳೋಕೆ ಇವರ್ಯಾರು ಎಂದರು…
ಆದರೆ…
ಈಗ ಗೋಮಾಂಸ ಸೇವನೆಯಿಂದ ಆರೋಗ್ಯ ಹೇಗೆ ಹದಗೆಡುತ್ತದೆ. ಅದು ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಹೇಗೆ ಕುಂಠಿತಗೊಳಿಸುತ್ತದೆ ಎಂಬುದರ ಕುರಿತ ಅಧ್ಯಯನದ ಆಧರಿಸಿ ಸಿನಿಮಾವೊಂದು ಬಿಡುಗಡೆಯಾಗಿದೆ. ಆ ಚಿತ್ರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲೇ ಮನೇಕಾ ಗಾಂಧಿ ಈ ಹೇಳಿಕೆ ನೀಡಿದ್ದರು.
ದಿ ಎವಿಡೆನ್ಸ್- ಮೀಟ್ ಕಿಲ್ಸ್…
ಹೌದು, ಮಯಾಂಕ್ ಜೈನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಗೋಮಾಂಸ ಸೇವನೆ ಬೌದ್ಧಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮೀಟ್ ಹೇಗೆ ನಮಗೆ ಅನಾರೋಗ್ಯವನ್ನು ಮೀಟ್ ಮಾಡಿಸುತ್ತದೆ ಎಂಬುದರ ಕುರಿತು ವೈಜ್ಞಾನಿಕ ವರದಿಯಾಧಾರಿತವಗಿ ಚಿತ್ರಿಸಲಾಗಿದೆ.
ಯೂಟ್ಯೂಬ್ ನಲ್ಲಿ ಚಿತ್ರ ವೀಕ್ಷಿಸಬಹುದು. ಗೋಮಾಂಸ ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುವ ಮೊದಲು ಚಿತ್ರವನ್ನೊಮ್ಮೆ ನೋಡಿ.
Leave A Reply