ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ತಾಯಿಯ ರಥಯಾತ್ರೆ
ಉಡುಪಿ: ಬ್ರಹ್ಮಾವರದಲ್ಲಿ ಜನವರಿ 13, 14, 15 ರಂದು ಅದ್ದೂರಿಯಾಗಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಾಭಾವಿಯಾಗಿ, ಕನ್ನಡ ಭುವನೇಶ್ವರೀ ತಾಯಿಯನ್ನು ಹೊತ್ತ ರಥ ಯಾತ್ರೆ ಮಂಗಳವಾರ ಪ್ರಾರಂಭಗೊಂಡಿತು.
ಬ್ರಹ್ಮಾವರ ಮಹಾಲಿಂಗೇಶ್ವರ ದೇವಳದಲ್ಲಿ ನಡೆದ ಸರಳ ಸಮಾರಂಭದ ಈ ರಥಯಾತ್ರೆಗೆ ದೇವಳದ ಅರ್ಚಕ ಕೃಷ್ಣ ಭಟ್ ಚಾಲನೆ ನೀಡಿದರು. ಈ ರಥ ಯಾತ್ರೆಯು ಉಡುಪಿ ಜಿಲ್ಲೆಯಾದ್ಯಂತ ಮೂರು ದಿನಗಳ ನಡೆಯಲಿದ್ದು, ಕನ್ನಡದ ಕಂಪನ್ನು ಪಸರಿಸಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಶೋಕ್ ಭಟ್ ಚಾಂತಾರು, ಕನ್ನಡ ಸಾಹಿತ್ಯ ಪರಿಷತ್‍ನ ಬ್ರಹ್ಮಾವರ ಹೋಬಳಿ ಅಧ್ಯಕ್ಷ ಮೋಹನ್ ಉಡುಪ, ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ನಾರಾಯಣ ಮಡಿ, ಪ್ರಶಾಂತ್ ಶೆಟ್ಟಿ, ಎನ್.ಎಸ್. ಅಡಿU,À ಗಿರೀಶ್ ಅಡಿಗ ಹೇರೂರು, ಪ್ರತೀಶ್ ಕುಮಾರ್, ಶಂಕರನಾರಾಯಣ ಭಟ್, ಮಾಧವ ಖಾರ್ವಿ, ಬಲರಾಮ ಕಲ್ಕೂರ, ಕೃಷ್ಣಮೂರ್ತಿ ಭಟ್, ಆನಂದ ದಾಮ್ಲೆ, ವಿಠಲದಾಸ ಉಪಾಧ್ಯಾಯ, ವಿಠಲರಾಯ ಪೈ, ಮಹಾಭಲೇಶ್ವರ ಅಡಿಗ, ಗಾಯತ್ರಿ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
Leave A Reply